ಮುಂಬೈ:ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶ ಹೊರ ಬಂದಿದ್ದು ಬಿಜೆಪಿ ನಿರೀಕ್ಷಿಸಿದ ಮಟ್ಟಿಗೆ ಯಶಸ್ಸು ಕಾಣದಿದ್ದರೂ ಸಹ ಅಧಿಕಾರ ಹಿಡಿಯುವಷ್ಟು ಗೆದ್ದಿದೆ. ಮಹಾರಾಷ್ಟ್ರದಲ್ಲಿ 160 ಬಿಜೆಪಿ, 105 ಕಾಂಗ್ರೇಸ್ ಮತ್ತು 23 ಇತರೆ ಗೆದ್ದರೆ ಇನ್ನು ಹರಿಯಾಣದಲ್ಲಿ ಸಂಮಿಶ್ರ ಸರ್ಕಾರ ರಚನೆಯಾಗುವ ಸಂಭವವಿದೆ. 40 ಬಿಜೆಪಿ, 31 ಕಾಂಗ್ರೇಸ್, 19 ಇತರೆ ಗಳಿಸಿವೆ. 


 ಬಿಜೆಪಿ ಗೆಲ್ಲಿಸಿದರೆ ಕರ್ನಾಟಕದಿಂದ ನೀರು ಹರಿಸುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಇದೀಗ ಆ ಕ್ಷೇತ್ರದ ಜನರಲ್ಲಿ ಸಂತಸವುಂಟಾಗಿದೆ. ಬಿಜೆಪಿಯನ್ನು ಗೆಲ್ಲಿಸಿದರೆ ಕರ್ನಾಟಕದಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದ ಜತ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಚುನಾವಣಾ ಪ್ರಚಾರಕ್ಕೆ ಮಹಾರಾಷ್ಟ್ರಕ್ಕೆ ಹೋಗಿದ್ದ ಯಡಿಯೂರಪ್ಪ ತಮ್ಮ ಪ್ರಚಾರ ಭಾಷಣದಲ್ಲಿ, ಜತ್ ತಾಲೂಕಿನ ಹೆಚ್ಚು ಜನರು ಕನ್ನಡ ಭಾಷಿಕರು. 


ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಇವತ್ತು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳಿಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲ ಆಗುತ್ತದೆ ಎಂದು ಭರವಸೆ ನೀಡಿದ್ದರು. ಯಡಿಯೂರಪ್ಪ ಅವರ ಈ ಹೇಳಿಕೆ ಕರ್ನಾಟಕದ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು, ಕಳಸಾ ಬಂಡೂರಿ, ಮಹಾದಾಯಿ ವಿಚಾರದ ಕುರಿತು ಮುಖ್ಯಮಂತ್ರಿ ಭೇಟಿ ಮಾಡಲು ಹೋದರೆ ಉತ್ತರ ಕರ್ನಾಟಕದಿಂದ ನೀರು ಹರಿಸುವಂತೆ ಭರವಸೆ ನೀಡಿ ಬಂದಿದ್ದಾರೆ ಎಂದು ದೂರಿದ್ದರು.


ಇದೇ ಭಾಗದ ಮೂರು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಕೂಡ ಪ್ರಚಾರ ನಡೆಸಿದ್ದರು ಆದರೆ ಕಾಂಗ್ರೆಸ್ ಸೋತಿದೆ. ಸಿದ್ದರಾಮಯ್ಯ ಅವರು ಜತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿಕ್ರಮ್ ಸಾವಂತ್ ಪರ ಮತಯಾಚಿಸಿದ್ದರು. ಅಂದು ಸಿದ್ದರಾಮಯ್ಯ ಅವರ ಭಾಷಣ ಕೇಳಲು ಸಾವಿರಾರು ಮಂದಿ ಸಭೆ ಸೇರಿದ್ದರು. ಇದೀಗ ಬಿಜೆಪಿಯೇ ಗೆದ್ದಿದೆ. 


Find out more: