ನವದೆಹಲಿ: ಅಕ್ರಮ ಹಣ ಪ್ರಕರಣದಲ್ಲಿ 48 ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಗೆ ಕೊನೆಗೂ ಬುಧವಾರ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಅದಕ್ಕಾಗಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮನೆಯವರೂ ಸಹ ಈ ಬಾರೀ  ದೀಪಾವಳಿ ಪಟಾಕಿ ಸಿಡಿಸಬಹುದು ಎಂಬ ಖುಷಿಯಲ್ಲಿದ್ದರು. ಆದರೂ ಸಹ ಇನ್ನು ಬೆಂಗಳೂರಿಗೆ ಬಂದಿಲ್ಲ. ಯಾಕೆ, ಇನ್ನು ಯಾವಾಗ ಬರ್ತಾರೆ ಅಂತಾ ನಾವ್ ಹೇಳ್ತೀವಿ ನೋಡಿ. 


ಮೊನ್ನೆಯಷ್ಟೇ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬುಧವಾರ ರಾತ್ರಿ ಸುಮಾರು 9.15ಕ್ಕೆ ತಿಹಾರ್ ಜೈಲಿನಿಂದ ಹೊರ ಬಂದ ಡಿ.ಕೆ.ಶಿವಕುಮಾರ್, ತಮ್ಮನ್ನು ಬೆಂಬಲಿಸಿದ ಎಲ್ಲ ಕಾರ್ಯಕರ್ತರು, ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದರು. ತದನಂತರ ನೇರವಾಗಿ ಶಿವಾಲಯ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಅವತ್ತೇ ಸಂಜೆ ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ಬೆಂಗಳೂರಿನತ್ತ ಪಯಣ ಬೆಳೆಸಲಿದ್ದಾರೆ ಎಂದು ಹೇಳಲಾಗಿತ್ತು.

ಶುಕ್ರವಾರ ಡಿಕೆ ಶಿವಕುಮಾರ್ ಕುಲದೇವತೆ ಕಬ್ಬಾಳಮ್ಮ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದವು. ಆದರೆ ಕಾರಣಾಂತರಗಳಿಂದ ಡಿಕೆ ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಎಐಸಿಸಿ ಕಚೇರಿಗೂ ಭೇಟಿ ಕೊಟ್ಟ ಡಿಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆಗೂ ಮಾತುಕತೆ ನಡೆಸಿದರು.


ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನನ್ನ ಬಂಧನದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ನನ್ನ ಬಂಧನ ಕಂಡು ಕೆಲವರು ಖುಷಿ ಪಟ್ಟಿದ್ದಾರೆ. ಯಾರು ಯಾರಿಗೆ ಎಷ್ಟೆಷ್ಟು ಆಫರ್ ಮಾಡಿದ್ದಾರೆ ಅಂತ ನನಗೆ ಗೊತ್ತು. ನನ್ನ ಪರವಾಗಿ ಹೋರಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಬುಧವಾರ ದೆಹಲಿಯ ಡಿಕೆ ಸುರೇಶ್ ನಿವಾಸಕ್ಕೆ ನೂರಾರು ಅಭಿಮಾನಿಗಳು ಆಗಮಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೀಗ ಬ್ರಹ್ಮಾಂಡ ಸ್ವಾಮೀಜಿಗಳು ಹೇಳಿರುವ ಮಾತು ನಿಜವಾಗುತ್ತೇನೋ ಎಂಬಂತ ಸೂಚನೆಗಳು ನೀಡುತ್ತಿವೆ.




Find out more: