ಬೆಳಗಾವಿ: ಅಂಬಿರಾವ್ ಅವರ ಆಸ್ತಿ ಬರೋಬ್ಬರಿ 500 ಕೋಟಿ. ಈ ಅಂಬಿರಾವ್ ಯಾಕೆಂದ್ರೆ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರ ಅಳಿಯ. ಇದೀಗ ಅಳಿಯನಿಂದ ರಮೇಶ್ ಜಾರಕಿಹೊಳಿ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು ಗೋಕಾಕನಲ್ಲಿ ಪಂಚಾಯತಿ, ನಗರ ಸಭೆಯಲ್ಲಿ ಇತಿ-ಮಿತಿ ಮೀರಿ ಭ್ರಷ್ಟಾಚಾರ ನಡೆದಿದೆ. ಆ ಭ್ರಷ್ಟಾಚಾರದ ದಾಖಲೆಗಳನ್ನು ನಾನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ. ಜನರ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ಅವರು ಹಫ್ತಾ ವಸೂಲಿ ಮಾಡಿದ್ದಾರೆ ಎಂಬ ಆರೋಪ ಮಾಡಿದರು.
ಇನ್ನು ನೇರವಾಗಿ ಗೋಕಾಕನಲ್ಲಿ ಪಂಚಾಯಿತಿ ಸದಸ್ಯರು ಹೇಳುತ್ತಾರೆ, ನಾವು ಅರ್ಧ ಅಳಿಯ ಅಂಬಿರಾವ್ ಅವರಿಗೆ ಹಣ ಕೊಟ್ಟು ಬರ್ತಿವಿ ಅಂತಾ ಹೇಳ್ಳುತ್ತಾರೆ, ಸದಸ್ಯರು, ಅಧಿಕಾರಿಗಳು ನಾವು ಕಲೆಕ್ಟ್ ಮಾಡಿ ಕೊಡುತ್ತೇವೆ ಇದರಲ್ಲಿ ನಮ್ಮ ಪಾತ್ರವಿಲ್ಲ ಅಂತಾ ಹೇಳುತ್ತಾರೆ ಎಂದರು. ಅಂತೆಯೇ ಅಂಬಿರಾವ್ 500 ಕೋಟಿ ಆಸ್ತಿ ಒಡೆಯ, ಮಾವ ರಮೇಶ್ ಜಾರಕಿಹೊಳಿಯನ್ನು ಸಾಲದಲ್ಲಿ ಇಟ್ಟಿದ್ದಾನೆ. ಅಳಿಯಂದರ ಮೇಲೆ ಪ್ರೀತಿ ತೋರಿಸಿದವರು ಅಧಿಕಾರ ಕಳೆದುಕೊಂಡಿದ್ದಾರೆ. ಇತಿಹಾಸದಲ್ಲಿ ರಾಜರು ಅಧಿಕಾರ ಕಳೆದುಕೊಂಡಿದ್ದಾರೆ. ಇಲ್ಲಿಯು ರಮೇಶ್ ಜಾರಕಿಹೊಳಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಅವರು ಅಳಿಯ ಮೇಲೆ ಆಕ್ರೋಶಗೊಂಡರು.
ಅದುವಲ್ಲದೇ ನಾವು ಜನರ ಮೇಲೆ ಪ್ರೀತಿ ತೋರಿಸಬೇಕು. ಕುಟುಂಬದ ಸದಸ್ಯರ ಮೇಲೆ ಅಲ್ಲ, ನಾನು ಗೋಕಾಕನಲ್ಲಿ ಯಾವಾಗಲೂ ಕೆಲಸ ಮಾಡುತ್ತಿದ್ದೇನೆ. ಅವು ರಾಜಕೀಯವಾಗಿ ಅಲ್ಲ, ಬಿಜೆಪಿಯವರು ಮೋದಿ ಅಲೆ, ಭ್ರಮೆಯಲ್ಲಿ ಇದ್ದರು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ಕುಮಾರ್ ವಿರುದ್ಧ ಲೇವಡಿ ಮಾಡಿದರು. ಪ್ರಸ್ತುತ ಮಹಾರಾಷ್ಟ್ರ, ಹರಿಯಾಣಾದಲ್ಲಿ ಬಿಜೆಪಿಗೆ ಜನರುಪಾಠ ಕಲಿಸಿದ್ದಾರೆ. ಮೋದಿ ಅಲೆ ಮತ್ತು ರಾಷ್ಟ್ರೀಯ ವಿಚಾರದ ಮೇಲೆ ಗೆಲ್ಲುತ್ತೇವೆ ಎಂದುಕೊಂಡಿದ್ದರು. ಆದರೆಎರಡು ರಾಜ್ಯದಲ್ಲಿ ಜನರು ಸ್ಥಳೀಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದಾರೆ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆ ಎಂದಿದ್ದಾರೆ.