ಬೆಂಗಳೂರು: 48ದಿನಗಳ ಜೈಲುವಾಸಕ್ಕೆ ಅಲ್ಪವಿರಾಮ ಇಟ್ಟಿರುವ ಡಿಕೆ ಶಿವಕುಮಾರ್ ನಿನ್ನೆಯಷ್ಟೇ ಕನಕಪುರದ ಸ್ವಾಗ್ರಾಮದ ದೇವತೆಗೆ ನಮಸ್ಕರಿಸಿ ಆರ್ಶೀವಾದ ಪಡೆದಿದ್ದರು. ಇದೀಗ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ  ಶಿಫ್ಟ್ ಆಗಿರುವ ಮೆಡಿಕಲ್ ಕಾಲೇಜು ಕುರಿತು ಪ್ರಾಣ ಹೋದರು ಕನಕಪುರದಿಂದ ಮೆಡಿಕಲ್ ಕಾಲೇಜು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಈಮೂಲಕ ಬಿಜೆಪಿಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ. 


ಕನಕಪುರದಲ್ಲೇ ಮೆಡಿಕಲ್ ಕಾಲೇಜು ಆಗಬೇಕು ಎಂದು ಈಗಾಗಲೇ ನಮ್ಮ ಸರ್ಕಾರದ ಅವಧಿಯಲ್ಲೇ ತೀರ್ಮಾನ ಆಗಿದೆ. ಆದರೆ ಯಡಿಯೂರಪ್ಪ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದಾರೆ. ಯಡಿಯೂರಪ್ಪ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿ. ಕೆ ಶಿವಕುಮಾರ್, ಕನಕಪುರದಲ್ಲೇ ಮೆಡಿಕಲ್ ಕಾಲೇಜು ಆಗಬೇಕು ಎಂದು ಆಗ್ರಹಿಸಿದ್ದಾರೆ. ನಾನು ಈ ಬಗ್ಗೆ ಹೋರಾಟ ಮಾಡಲು ಸಿದ್ದನಿದ್ದೇನೆ ಎಂದಿರುವ ಡಿಕೆಶಿ, ನನ್ನ ಪ್ರಾಣ ಬೇಕಿದ್ರೆ ಹೋಗಲಿ, ಆದರೆ ಮೆಡಿಕಲ್ ಕಾಲೇಜನ್ನು ಮಾತ್ರ ಬಿಟ್ಟುಕೊಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬೇಕಿದ್ರೆ ಸಾವಿರ ಮೆಡಿಕಲ್ ಕಾಲೇಜುಮಾಡಿಕೊಳ್ಳಲಿ, ನಾನೇನೂ ಅವರಿಗೆ ಬೇಡವೆಂದು ಹೇಳುವುದಿಲ್ಲ ಎಂದ ಡಿಕೆಶಿ, ನಾನು ಮಂತ್ರಿ ಆಗಿದ್ದೇ ಕನಕಪುರದಲ್ಲಿ ಮೆಡಿಕಲ್ಕಾಲೇಜು ಮಾಡಿಕೊಳ್ಳಬೇಕು ಅಂತಾ. ಕುಮಾರಸ್ವಾಮಿ ಕೂಡ ಬಜೆಟ್‌ನಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಅಲ್ಲದೆ ಯಡಿಯೂರಪ್ಪ ಕೂಡ ಇದಕ್ಕೆ ಅನುಮೋದನೆ ಕೊಟ್ಟಿದ್ದಾರೆ ಎಂದು ಡಿಕೆಶಿ ಹೇಳಿದ್ರು. ಯಡಿಯೂರಪ್ಪ ಯಾವ ಕಾರಣಕ್ಕೂ ದ್ವೇಷ ಮಾಡಲ್ಲ ಎಂದು ಹೇಳಿದ್ದಾರೆ. ಇದು ಬಸವಣ್ಣನ ನಾಡು. ಆದ್ರೆ, ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಮೊದಲ ಕೆಲಸ ಮಾಡಿರೋದೇ ಈ ಮೆಡಿಕಲ್ ಕಾಲೇಜು ಸ್ಥಳಾಂತರ ಎಂದು ಕಿಡಿಕಾರಿದ ಡಿಕೆಶಿ, ಕಾಲೇಜಿಗೆ ಈ ಹಿಂದೆಯೇ ಕುಮಾರಸ್ವಾಮಿ ಫೈನಾನ್ಸ್ ಕ್ಲಿಯರ್ ಮಾಡಿದ್ದರು.

ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿತ್ತು. ಗುತ್ತಿಗೆದಾರರಿಗೂ ವರ್ಕಿಂಗ್ ಆರ್ಡರ್ ಕೊಡಲಾಗಿತ್ತು. ಕುಮಾರಸ್ವಾಮಿ ಅಮೇರಿಕಾಕ್ಕೆ ಹೋಗದೇ ಇದ್ದಿದ್ರೆ, ಅವರ ಕೈಯಲ್ಲಿ ಭೂಮಿ ಪೂಜೆ ಮಾಡಿಸ್ತಿದ್ದೆ ಎಂದು ಹಿಂದಿನ ಎಲ್ಲಾ ಬೆಳವಣಿಗೆಗಳನ್ನೂ ನೆನಪಿಸಿಕೊಂಡ ಡಿಕೆಶಿ, ಸೋಮಣ್ಣ ಮಂತ್ರಿ ಆಗಿದ್ದಾಗ ಜಾಗವನ್ನು ಕೊಟ್ಟಿದ್ದಾರೆ. ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆ. ಆದ್ರೆ, ಅದನ್ನು ಈಗ ಏಕಾಏಕಿ ಕ್ಯಾನ್ಸಲ್ ಮಾಡಿದ್ದಾರೆಂದು ಗರಂ ಆಗಿದ್ದಾರೆ. 


Find out more: