ಇಸ್ಲಾಮಾಬಾದ್: ಇಡೀ ಪಾಕಿಸ್ತಾನವೇ ಮೆಚ್ಚುವ ಹಾಗೆ, ಉಳಿದೆಲ್ಲಾ ರಾಷ್ಟ್ರಗಳು ತೆಗಳುವ ಹಾಗೆ ಪಾಕಿಸ್ತಾನದ ಪ್ರಧಾನಿಯಾಗಿ ಭೂಗತ ಜಗತ್ತನ್ನೇ ಯಾರಿಗೂ ಕಾಣದಂತೆ ತನ್ನ ಮುಷ್ಠಿಯಲ್ಲಿಟ್ಟುಕೊಂಡು ಸಾಕಿದ್ದ ಮಾಜಿ ಪ್ರಧಾನಿಗೆ ಇದೀಗ ಅಠಾತ್ ಆರೋಗ್ಯ ಏರು ಪೇರಾಗಿದೆ. ಭಾರತದೊಂದಿಗೆ ಮೋದಿ ಕೈ ಶೇಕ್ ಹ್ಯಾಂಡ್ ಮಾಡಿ ಗಡಿಯಲ್ಲಿ ಸೈನಿಕರ ತಲೆ ಉರುಳಿ ಸುವಂತೆ ಆಜ್ಞೆ ಮಾಡುತ್ತಿದ್ದ ಷರೀಫ್ ಗೆ ಇದೀಗ ಎಂತಾ ಪರಿಸ್ಥಿತಿ ಬಂದಿದೆ ನೋಡಿ. ಇದ್ದಕ್ಕಿದ್ದಂತೆ ಏನಾಯ್ತು ಅಂತ ಅಸಲೀ ಕಹಾನಿ ಯನ್ನು ನಿಮ್ಮ ಮುಂದೆ ಇಡ್ತೀವಿ ನೋಡಿ. 


ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. 69 ವರ್ಷದ ನವಾಜ್ ಷರೀಫ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅಡ್ನಾನ್ ಖಾನ್ ಸರಣಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಮಾಜಿ ಪ್ರಧಾನಿ ಗಂಭೀರವಾಗಿ ಅಸ್ವಸ್ಥರಾಗಿದ್ದು, ಆರೋಗ್ಯ ಮತ್ತು ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಮೂತ್ರಪಿಂಡದ ಕಾರ್ಯ ಕ್ಷೀಣಿಸುವ ಮೂಲಕ ಥ್ರಂಬೋಸೈಟೋಪೆನಿಯಾ ಮತ್ತು ಎನ್‍ಎಸ್‍ಟಿಇಎಂಐ ಮತ್ತಷ್ಟು ಜಟಿಲವಾಗಿದೆ. ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಿಗುತ್ತಿಲ್ಲ’ ಎಂದು ಡಾ.ಅಡ್ನಾನ್ ಖಾನ್ ತಿಳಿಸಿದ್ದಾರೆ.


ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಅವರಿಗೆ 2018ರ ಡಿಸೆಂಬರ್ ನಲ್ಲಿ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬದವರನ್ನು ರಾಷ್ಟ್ರೀಯ ತನಿಖಾ ದಳವು ವಿಚಾರಣೆ ಮಾಡುತ್ತಿದೆ. ಆದರೆ ಮೂರು ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿಯ ಅನಾರೋಗ್ಯ ಕಾರಣದಿಂದ ಜಾಮೀನು ನೀಡಲಾಗಿತ್ತು. ನವಾಜ್ ಷರೀಫ್ ರಕ್ತದಲ್ಲಿನ ಬಿಳಿ ರಕ್ತಕಣಗಳ (ಪ್ಲೇಟ್‍ಲೇಟ್) ಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಭಾನುವಾರ ಒಂದೇ ದಿನ ಅವರ ಪ್ಲೇಟ್‍ಲೇಟ್ ಸಂಖ್ಯೆಯು 45 ಸಾವಿರದಿಂದ 25 ಸಾವಿರಕ್ಕೆ ಇಳಿದಿತ್ತು. ಹೀಗಾಗಿ ಅವರಿಗೆ ನೀಡಲಾ ಗುತ್ತಿದ್ದ ಹೃದಯ ಸಂಬಂಧಿ ಚಿಕಿತ್ಸೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕುಟುಂಬಸ್ಥರು ತೀವ್ರ ದುಖಿ:ತರಾಗಿದ್ದಾರೆ.




Find out more: