ಚಿಕ್ಕಬಳ್ಳಾಪುರ : ಕನಕಪುರ ಕ್ಷೇತ್ರದ ಶಾಸಕರಾಗಿರುವ ಡಿ. ಕೆ.ಶಿವಕುಮಾರ್ ಸಾಹೇಬ್ರೆ ಕನಕಪುರವಷ್ಟೇ ಕರ್ನಾಟಕವಲ್ಲ ಎಂದು ಗುಡುಗಿದ್ದಾರೆ. ಡಿ.ಕೆ.ಶಿವಕುಮಾರ್ ಪಾಪ ಮೆಡಿಕಲ್ ಕಾಲೇಜಿಗಾಗಿ ಪ್ರಾಣ ಬಿಡಿತ್ತೀನಿ ಅಂತ ಹೇಳಿದ್ದಾರೆ. ಪ್ರಾಣ ಉಳಿಸಲಿಕ್ಕೆ ಮೆಡಿಕಲ್ ಕಾಲೇಜು ಇರುವುದು. ಆದರೆ ಡಿ.ಕೆ.ಶಿವಕುಮಾರ್, ಕನಕಪುರವನ್ನು ಕರ್ನಾಟಕ ಅಂತಾ ತಿಳಿದುಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕಡಾ.ಕೆ.ಸುಧಾಕರ್ ಕನಕಪುರ ಬಂಡೆಗೆ ಡಿಚ್ಚಿ ಹೊಡೆದಿದ್ದಾರೆ.
2016 – 2017ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಜೆಟ್‌ನಲ್ಲಿ ಮಂಜೂರು ಮಾಡಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಬಂದ ಮೇಲೆ. ಡಿ.ಕೆ.ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾದರು.ಆದರೆ ಅವರು ಕನಕಪುರವನ್ನು ಡಿಕೆಶಿ ಕರ್ನಾಟಕ ಅಂತಾ ತಿಳಿದುಕೊಂಡಿದ್ದಾರೆಂದು ಗೇಲಿ ಮಾಡಿದರು. ಪ್ರತಿ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಆಗಬೇಕೆಂದು ಸರ್ಕಾರದ ನಿರ್ಧಾರ. ಅದರನ್ವಯ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜಿಗೆ ಅವರು ಅನುದಾನ ಕೊಡಬೇಕಿತ್ತು. ಅವರು ಇಡೀ ರಾಜ್ಯಕ್ಕೆ ಮಂತ್ರಿ ಕನಕಪುರಕ್ಕೆ ಮಾತ್ರವಲ್ಲ. ಆದರೆ ಕನಕಪುರಕ್ಕೂ ಮಾಡಿಕೊಂಡು ನಮ್ಮ ಜಿಲ್ಲೆಗೂ ಅನುದಾನ ಕೊಡಬೇಕಿತ್ತು ಎಂದರು.
ಅದಕ್ಕಾಗಿಯೆ ಇಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಮಲತಾಯಿ ಧೋರಣೆ ಮಾಡಿದ್ದು, ಅನುದಾನ ಹಂಚಿಕೆಯಲ್ಲಿ ಆನ್ಯಾಯ ಮಾಡಿದ್ದಕ್ಕೆ ಭೇಸತ್ತು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದ ಸುಧಾಕರ್, ನಾನು ಕ್ಷೇತ್ರದ ಜನರ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಈ ವಿಚಾರವನ್ನು ಸಿಎಂ ಯಡಿಯೂರಪ್ಪರನ್ನು ಬೇಟಿ ಮಾಡಿ ಎಲ್ಲ ವಿಚಾರ ತಿಳಿಸಿದೆ. ಕನಕಪುರಕ್ಕೆ ಒಂದೇ ಬಾರಿ 450ಕೋಟಿ ಅನುದಾನ ಕೊಟ್ಟಿದ್ದಾರೆ. ನಮಗೂ ನ್ಯಾಯ ಕೊಡಿಸಬೇಕೆಂದು ಕೇಳಿದೆ. ಅದಕ್ಕಾಗಿ ಯಡಿಯೂರಪ್ಪ ಸ್ಪಂದಿಸಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿ 670ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರ ಗುಣಗಾನ ಮಾಡಿದ್ದಾರೆ.
ಉಪ ಚುನಾವಣೆಗೂ ಮೊದಲೇ ಯಡಿಯೂರಪ್ಪ ಕೈಯಲ್ಲಿಯೇ ಶಂಕುಸ್ಥಾಪನೆ ನೆರವೇರಿಸುವುದು ನೂರಕ್ಕೆ ನೂರಷ್ಟುಸತ್ಯ ಎಂದರು. ಇಲ್ಲದೇ ಹೋದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆಂದರು. ರಾಮನಗರದಲ್ಲಿ ಈಗಾಗಲೇ ಆರೋಗ್ಯ ವಿಶ್ವ ವಿದ್ಯಾಲಯ ಇದೆ. ಕನಕಪುರಕ್ಕೆ ಪ್ರತ್ಯೇಕವಾಗಿ ಮೆಡಿಕಲ್ ಕಾಲೇಜು ಏಕೆ ಬೇಕೆಂದರು.