ಬೆಳಗಾವಿ: ಉತ್ತರದ ಮಹಾ ಮಳೆ ಮತ್ತು ಜಲಾಶಯದಿಂದ ಹೊರಹರಿಸಲಾದ ಲಕ್ಷಾಂತರ ಕ್ಯೂಸೆಕ್ ನೀರಿನಿಂದ ಉತ್ತರ ಕರ್ನಾಟಕದ 10 ಜಿಲ್ಲೆಗಳು ಹಾಗೂ ಕರಾವಳಿ ಭಾಗದ ಜಿಲ್ಲೆಗಳು ಅಕ್ಷರಶಃ ನೀರಿನಲ್ಲಿ ಮುಳುಗಿದ್ದವು. ತಿನ್ನಲು ಅನ್ನ ವಿಲ್ಲದೆ ಕುಡಿಯಲು ಗಂಜಿ ಯಿಲ್ಲದೆ ಜನರು ಪರದಾಡಿದ್ದರು. ನೆರೆ ಮತ್ತು ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರ ಸತ್ತು ಹೋಗಿದೆ' ಎಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. 


 'ನೆರೆ ಬಂದು 3 ತಿಂಗಳಾಗುತ್ತಿವೆ. ಆದರೆ, ಸಂತ್ರಸ್ತರಿಗೆ ತಾತ್ಕಾಲಿಕವಾಗಿ ₹ 10ಸಾವಿರ ಪರಿಹಾರದಲ್ಲಿ ಅವ್ಯವಹಾರವಾಗಿದೆ. 50ರಿಂದ 60ಸಾವಿರ ಮಂದಿಗೆ ತಾತ್ಕಾಲಿಕ ಪರಿಹಾರವೂ ಸಿಕ್ಕಿಲ್ಲ. ಮನೆ, ಬೆಳೆ, ಅಂಗಡಿಗಳನ್ನು ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ನೇಕಾರರಿಗೆ ನೆರವಾಗಿಲ್ಲ. ಶಾಲೆಗಳ ಕೊಠಡಿಗಳ ದುರಸ್ತಿ ಮಾಡಿಸಿಲ್ಲ. ಇದೊಂದು ವಿಫಲ ಸರ್ಕಾರ.  'ನೆರೆ ಪರಿಹಾರ ಕಾರ್ಯ ಕೈಗೊಳ್ಳಬೇಕು; ಜನರ ಬಳಿಗೆ ಹೋಗಬೇಕು ಎಂದು ಹೇಳಿ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲಿಲ್ಲ.

ಆದರೆ, ಈಗ ಸಂತ್ರಸ್ತರ ಕಷ್ಟ ಕೇಳುತ್ತಿಲ್ಲ. ಉಪಚುನಾವಣೆ ಸಿದ್ಧತೆ ಬಗ್ಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಲು ಮತ್ತು ರಾಜಕೀಯ ಮಾಡಲು ಬಿಜೆಪಿ ಮುಖಂಡರಿಗೆ ಸಮಯವಿದೆ. ಸಂತ್ರಸ್ತರ ಕಣ್ಣೀರು ಒರೆಸಲು ಸಮಯವಿಲ್ಲವೇ? ಜನರ ಸಂಕಷ್ಟಗಳನ್ನು ಈ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡವಿಫಲವಾಗಿದ್ದಾರೆ. 'ಮಹಾರಾಷ್ಟ್ರದಲ್ಲಿ ಪ್ರವಾಹ ಬಂದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಸೋಲಿಸಿದ್ದಾರೆ. ಅದರಿಂದಾದರೂ ಇಲ್ಲಿನ ಬಿಜೆಪಿಯವರು ಪಾಠ ಕಲಿಯಬೇಕಾಗಿತ್ತು. ಇಲ್ಲಿಯೂಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನ ಸೋಲಿಸುತ್ತಾರೆ' ಎಂದು ಭವಿಷ್ಯ ನುಡಿದರು.


'ನೆರೆ ಪರಿಹಾರಕ್ಕಾಗಿಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣಕೇಳಲು ಬಿಜೆಪಿಯವರಿಗೆ ಧೈರ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಭಯವಿದೆ. ನಾವಾದರೂ ಕೇಳೋಣ ಎಂದರೆ ಪ್ರಧಾನಿಯು ಭೇಟಿಗೆ ಸಮಯ ಕೊಡುತ್ತಿಲ್ಲ. ಎರಡೂ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ' ಎಂದು ಫುಲ್ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೇ ಈ ಸರ್ಕಾರ ನಾಲಾಯಕ್  ಸರ್ಕಾರ ಎಂದಿರುವುದು ಇದೀಗ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತಾಗಿದೆ. 

Find out more: