ನವದೆಹಲಿ: ಇತ್ತೀಚೆಗಷ್ಟೇ ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿತ್ತು. ಆದರೆ ಹರಿಯಾಣದಲ್ಲಿ ಸ್ಪಷ್ಟ ಬಹುಮತ ಸಿಗದ ಕಾರಣ ಕಾಂಗ್ರೇಸ್ ಸರ್ಕಾರ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ ರಾಜಕೀಯ ಚಾಣಕ್ಯ ಅಮಿತ್ ಶಾ ಜೆಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರಕ್ಕೆ ಅಸ್ತು ಎಂದಿದ್ದರು. ಹೈಕಮಾಂಡ್ ಆದೇಶದ ಮೇರೆಗೆ ದುಶ್ಯಂತ್ ಚೌಟಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿ ಮೈತ್ರಿಯೊಂದಿಗೆ ಬಿಜೆಪಿ ಅಧಿಕಾರಕ್ಕೇರಿದೆ.
ಇಂದು ಎರಡನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗೆಯೇ ಜೆಜೆಪಿಯ ಅಧ್ಯಕ್ಷ ದುಶ್ಯಂತ್ ಚೌಟಾಲ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ದು, ವೇದಿಕೆ ಗವರ್ನರ್ ಸತ್ಯದೇವ್ ನಾರಾಯಣ್ ಆರ್ಯ ಇದ್ದರು.
ಕೇಂದ್ರ ಚುನಾವಣೆ ಆಯೋಗ ಹರಿಯಾಣ ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ಬಿಜೆಪಿ ಪಕ್ಷೇತರ ಶಾಸಕರ ಬೆಂಬಲಿಗರೊಂದಿಗೆ ಮೊದಲು ಸರ್ಕರ ರಚನೆಗೆ ಯತ್ನಿಸಿತ್ತು. ಆದರೆ, ಕೊನೆಗೂ ಇತ್ತ ಪಕ್ಷೇತರರ ಮನವೊಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದರು. ಅತ್ತ ಸಿಎಂ ಮನೋಹರ್ ಲಾಲ್ ಖಟ್ಟರ್ ಕಿಂಗ್ ಮೇಕರ್ ಚೌಟಾಲಾರ ಮನವೊಲಿಕೆ ಮಾಡಿಯೇಬಿಟ್ಟರು. ಬಿಜೆಪಿ ಡಿಸಿಎಂ ಆಫರ್ಗೆ ಜೆಜೆಪಿ ಒಪ್ಪಿಗೆ ನೀಡಿ, ಬೆಂಬಲ ಘೋಷಿಸಿತು. ಹರಿಯಾಣದ ಅಭಿವೃದ್ದಿಗಾಗಿ ನಾವು ಬಿಜೆಪಿಯೊಂದಿಗೆ ಸರ್ಕಾರ ರಚನೆಗೆ ನಿರ್ಧರಿಸಿದ್ದೇವೆ ಎಂದು ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ ಸ್ಪಷ್ಟನೆ ನೀಡಿದರು.
ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಹರಿಯಾಣದಲ್ಲಿ ಚುನಾವಣೆ ನಡೆದಿದೆ. ಇಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಸರಳ ಬಹುಮತ ಅಗತ್ಯವಿದೆ. 90 ಸ್ಥಾನಗಳ ಪೈಕಿ ಆಡಳಿತರೂಢ ಬಿಜೆಪಿ ಕೇವಲ 40ಕ್ಕೆ ಸೀಮಿತವಾಗಿದ್ದರೆ, ಕಾಂಗ್ರೆಸ್ 31 ಸ್ಥಾನಗಳು ಗೆದ್ದಿದೆ. ಜೆಜೆಪಿ 10 ಕ್ಷೇತ್ರದಲ್ಲಿ ಗೆದ್ದು ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದೆ. ಐಎನ್‍ಎಲ್‍ಡಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟರೆ, ಇತರೆ 8 ಸ್ಥಾನ ಬಂದಿದೆ.