ಬೆಂಗಳೂರು: ಕನಕಪುರ ಶಾಸಕ ಡಿ. ಕೆ ಶಿವಕುಮಾರ್ ಇಂದು ರಾಜ್ಯ ರಾಜಧಾನಿಗೆ ಭವ್ಯ ಮೆರವಣಿಗೆ ಮೂಲಕ ಅದ್ದೂರಿಯಾಗಿ ಕಾಲಿಟ್ಟರು.  ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರ ವಿರುದ್ಧ ಬಿರುಗಾಳಿ, ಮಿಂಚಿನ ಸಮೇತ ಗುಡುಗಿದ್ದಾರೆ. 


ಶಿವಕುಮಾರ್ ಏನು ತಪ್ಪು ಮಾಡಿಲ್ಲ ಎಂದು ಜನ ನಂಬಿದ್ದಾರೆ. ನಾನು ಏನು ತಪ್ಪು ಮಾಡಿಲ್ಲ, ನಾನು ತಪ್ಪು ಮಾಡಿದ್ರೇ, ದೇವರು ನನಗೆ ಶಿಕ್ಷೆ ನೀಡಲಿ, ಕಾನೂನು ನನಗೆ ಶಿಕ್ಷೆ ನೀಡಲಿ ಅದಕ್ಕೆ ನಾನು ಸಿದ್ದನಿದ್ದೇನೆ. ತಪ್ಪು ಮಾಡಿದರೆ ಅವರು ನನ್ನನ್ನು ಗಲ್ಲಿಗೇರಿಸಲಿ. ನಾನು ಜೈಲಿನಲ್ಲಿ ಕಾನೂನು ಅಧ್ಯಯನ ಮಾಡಿದ್ದೇನೆ. ಒಂದೊಂದು ಸೆಕ್ಷನ್ ಕೂಡ ತಲೆಯಲ್ಲಿ ಇದೆ. ನ್ಯಾಯ ಪೀಠದಿಂದ ಅನ್ಯಾಯದ ತೀರ್ಪು ಕೊಡಬಾರದು. ನಾನು ನನ್ನ ತಾಯಿಗೆ ಬೇನಾಮಿದಾರ. ತಾಯಿ ಮಗನ ನಂಬದೇ ಇನ್ಯಾರನ್ನು ನಂಬಬೇಕು..? ತನಿಖೆ ಇದ್ದಾಗ ನಾನು ವ್ಯಾಖ್ಯಾನ ಮಾಡಬಾರದು.

ದೇಶದ ಇತಿಹಾಸದಲ್ಲಿ ನನ್ನ ಪ್ರಕರಣ ತಿರುಗಿ ನೋಡಬೇಕು ಎಂದು ಡಿ ಕೆ ಶಿವಕುಮಾರ್ ಸವಾಲ್ ಎಸೆದಿದ್ದಾರೆ. ಪರೋಕ್ಷವಾಗಿ ಬಿಜೆಪಿ ವಿರುದ್ದ ಗುಡುಗಿದ್ದಾರೆ.  ತಮ್ಮ ಆಡಳಿತಾವಧಿಯಲ್ಲಿದ್ದಾಗ ಸಂಸದರಿಗೆ ಗಿಫ್ಟ್ ಕೊಟ್ಟಿದ್ದರ ಬಗ್ಗೆ ಮಾತನಾಡಿದ ಡಿಕೆಶಿ, ನಾನು ಇಂಧನಸಚಿವನಾಗಿದ್ದೆ. ಎಲ್ಲ ಸಂಸದರಿಗೆ ಐಫೋನ್ ಗಿಫ್ಟ್ ಕೊಟ್ಟಿದ್ದೆ. ಮೂವರುಮಾತ್ರ ಮೊಬೈಲ್ ತೆಗೆದುಕೊಳ್ಳಲಿಲ್ಲ. ಆದರೆಉಳಿದವರೆಲ್ಲ ಫೋನ್ ಗಿಫ್ಟ್ ಪಡೆದರು. ಹಾಗಾದ್ರೆ 50ಸಾವಿರಕ್ಕಿಂತ ಹೆಚ್ಚು ಬೆಲೆ ಬಾಳುವ ಫೋನ್ ಪಡೆದ ಸಂಸದರಿಗೆ ನೋಟಿಸ್ ಹೋಗಬೇಕಲ್ಲ..? ಎಂದುಪ್ರಶ್ನಿಸಿದ ಡಿಕೆಶಿ, ನಾನು ನನ್ನ ವೈಯಕ್ತಿಕ ಹಣದಲ್ಲಿ ಗಿಫ್ಟ್ ಕೊಟ್ಟಿದ್ದೆ. ಕಾನೂನು ಮತ್ತು ಸಮಯ ಸರಿಯಾದ ತೀರ್ಪು ನೀಡುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.


ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಡಿಕೆಶಿ, ನಿಮ್ಮಪ್ಪ ಜೈಲಿಗೆ ಹೋಗಿದ್ದಾರೆ ಎಂದರೆ ನನ್ನ ಮಕ್ಕಳು ಹೇಗೆ ಉತ್ತರ ನೀಡಬೇಕು..? ವಯಸ್ಸಾದ ನನ್ನ ತಾಯಿ ಸಮನ್ಸ್ ಪಡೆದು ಹೋಗಬೇಕಾ..? ಇಂತಹ ಭಾವನಾತ್ಮಕ ವಿಷಯಗಳು ನನಗೆ ನೋವು ನೀಡಿದವು. ಸಂಬಂಧ ಇಲ್ಲದ 86 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ.


Find out more: