ನವದೆಹಲಿ: ದಿನಕ್ಕೆ 8 ಗಂಟೆಗಳ ಕಾಲ ನಿಂತು, ಕುಂತು ಹೊದ್ದಾಡಿ ಕೆಲಸ ಮಾಡುವುದರೊಳಗೆ ಸುಸ್ತಾಗಿರುತ್ತದೆ. ಆದರೆ ಇದೀಗ ಈ 8 ಗಂಟೆಗಳ ಕೆಲಸದ ಅವಧಿಯ ಜೊತೆಗೆ 1 ಗಂಟೆ ಕೆಲಸ ಹೆಚ್ಚು ಮಾಡಬೇಕಿದೆ   ದಿನಕ್ಕೆ 8 ಗಂಟೆಯ ಬದಲು 9 ಗಂಟೆಗಳಿಗೆ ಏರಿಸಲು   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚಿಸಿರುವ ಕರಡು ವೇತನ ಸಂಹಿತೆಯಲ್ಲಿ ಈ ರೀತಿಯ ಪ್ರಸ್ತಾವನೆಯೊಂದನ್ನು ಮಾಡಲಾಗಿದೆ. 


ಕೇಂದ್ರ ಸರ್ಕಾರದ ಈ ನೂತನ ಪ್ರಸ್ತಾವನೆಯಲ್ಲಿ ಕೆಲಸದ ಅವಧಿಯುನ್ನು 8 ರಿಂದ 9 ಗಂಟೆಗಳಿಗೆ ಏರಿಕೆ ಮಾಡುವುದು ಹಾಗೂ ವೇತನ ನಿರ್ಧಾರ ಮಾಡುವಾದ ಭೌಗೋಳಿಕ ವರ್ಗೀಕರಣ ಅನುಸರಿಸುವುದು ಇದೆ. ಈ ರೀತಿಯ ಹಲವು ವಿಚಾರಗಳನ್ನು ಕೇಂದ್ರದ ಸಂಹಿತೆಯ ಕರಡಿನಲ್ಲಿ ಉಲ್ಲೇಖ ಮಾಡಲಾಗಿದೆ.   ಆದರೆ ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗದಿಪಡಿಸುವುದರಿಂದ ಸರ್ಕಾರ ಹಿಂದೆ ಸರಿದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕನಿಷ್ಠ ವೇತನ ನಿರ್ಧರಿಸುವಾಗ ಭೌಗೋಳಿಕ ವರ್ಗೀಕರಣ ಪ್ರಮುಖವಾಗಿರಲಿದ್ದು, ಜನಸಂಖ್ಯೆ ಆಧಾರದಲ್ಲಿ ಈ ವರ್ಗೀಕರಣವಾಗಲಿದೆ.

1948ರ  ಫ್ಯಾಕ್ಟರಿ ಕಾಯ್ದೆ ಪ್ರಕಾರವಾಗಿ ಓರ್ವ 18 ವರ್ಷ ಮೇಲ್ಪಟ್ಟ ವ್ಯಕ್ತಿಯು ವಾರಕ್ಕೆ 48 ಗಂಟೆಗಿಂತ ದಿನಕ್ಕೆ 9 ಗಂಟೆಗಿಂತ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಹೆಚ್ಚಿನ ಕೆಲಸ ಮಾಡಿಸುವುದನ್ನು ಸೆಕ್ಷನ್ 51ನೇ ವಿಧಿಯಲ್ಲಿ ನಿರ್ಬಂಧಿಸಲಾಗಿದೆ. ಆದರೆ ಇದೀಗ ಕೇಂದ್ರ ಸರ್ಕಾರ ಕೆಲಸ ಅವಧಿ ಹೆಚ್ಚಿಸಲು ಹೆಜ್ಜೆ ಇಟ್ಟಿದೆ. ನವೆಂಬರ್ 1 ರಿಂದಲೇ ಈ ಬಗ್ಗೆ ಸಾರ್ವಜನಿಕರಲ್ಲಿ ಪ್ರತಿಕ್ರಿಯೆ ತಿಳಿಸಲು ಕೋರಲಾಗಿದ್ದು,  ಆ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. 
ನರೇಂದ್ರ ಮೋದಿ ಯ ಈ ಪ್ಲಾನ್ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತೆ? ಜನರು ನೋಟು ಅಮಾನ್ಯೀಕರಣ, ಜಿ. ಎಸ್. ಟಿ ಯಂತೆ ಇದನ್ನು ಅಪ್ಪಿಕೊಂಡು ಸ್ವೀಕರಿಸುತ್ತಾರಾ! ಕೆಲಸದ ಜೊತೆಗೆ ಸಂಬಳವು ಹೆಚ್ಚಾಗುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಕಾದು ನೋಡಬೇಕಾಗಿದೆ.


Find out more: