ನವದೆಹಲಿ: ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ವಿರಾಟ್ ಜೋಡಿ ಇದೀಗ ಫುಲ್ ಜಾಲಿ ಮೂಡಿನ ಟ್ರಿಪ್ ನಲ್ಲಿದೆ. ಇಂದು ಮಂಗಳವಾರ 31ನೇ ಬರ್ತಡೇ ಆಚರಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿರಾಟ್ ಹಾಗೂ ಅನುಷ್ಕಾ ದಂಪತಿ ಜಾಲಿ ಟ್ರಿಪ್ ಮೂಡ್‌ನಲ್ಲಿದ್ದಾರೆ. ಅವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 


ನಟಿ ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳ ಜೊತೆಗೆ ಬಾಲ್ಯದ ನೆನಪುಗಳನ್ನು ಹಾಗೂ ಪರ್ವತಗಳಲ್ಲಿ ಪಾದಯಾತ್ರೆ ಮಾಡುವ ದೃಶ್ಯವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಯಾವುದೇ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿಲ್ಲ.ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸದ ಅನುಭವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ,

ಸೋಮಾವರ 8.5 ಕಿ.ಮೀ ಚಾರಣ ಕೈಗೊಂಡಿದ್ದೆವು. ಈ ಸಮಯದಲ್ಲಿ ಪರ್ವತದ ಮೇಲೆ ಒಂದು ಸಣ್ಣ ಹಳ್ಳಿಗೆ ಬಂದು ತಲುಪಿದಾಗ 4 ತಿಂಗಳ ಕರುವನ್ನು ಕಂಡು ಅದಕ್ಕೆ ಆಹಾರ ಹಾಕಲು ನಿಂತಿದ್ವಿ. ಕರುವಿಗೆ ಆಹಾರ ಹಾಕುತ್ತಿದ್ದ ನಮ್ಮನ್ನು ಗಮನಿಸಿದ ಮನೆಯ ಮಾಲೀಕರು ನಾವು ದಣಿದಿದ್ದೇವೆ ಎಂದು ತಿಳಿದು, ಒಂದು ಕಪ್ ಚಹಾವನ್ನು ಕುಜಿಯುತ್ತೀರಾ ಎಂದು ಕೇಳಿದರು. ಆದ್ದರಿಂದ ನಾವು ಈ ಸುಂದರ ಮತ್ತು ಬೆಚ್ಚಗಿನ ಕುಟುಂಬದ ಮನೆಗೆ ಹೋದೆವು. ನಾವು ಯಾರೆಂದು ಮನೆಯಲ್ಲಿದ್ದವರು ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೂ ನಮ್ಮನ್ನು ಪ್ರೀತಿಯಿಂದ ಕಂಡರು ಎಂದು ಬರೆದುಕೊಂಡಿದ್ದಾರೆ.


2018ರ ಅಕ್ಟೋಬರ್ ನಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಇಲ್ಲದೇ ಆಡಿದ್ದರು. ಟೀಂ ಇಂಡಿಯಾ ಆಡಿರುವ 56 ಪಂದ್ಯಗಳಲ್ಲಿ 48 ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.  ಮುಂದಿನ ವಿಶ್ವಕಪ್ ಟೀ-ಟ್ವಂಟಿಗೆ ವಿರಾಟ್ ತನ್ನ ಸೈನ್ಯವನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಕ್ರಿಕೇಟ್ ಪ್ರಿಯರ ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ವಿರುಷ್ಕಾ ಪೋಲಿಸ್ ಸದ್ದು ಮಾಡುತ್ತಿವೆ. 


Find out more: