ಬೆಂಗಳೂರು: ಬಿಗ್ ಬ್ರೇಕಿಂಗ್ ನ್ಯೂಸೊಂದು ಇದೀಗ ಸಂಚಲನ ಸೃಷ್ಟಿಸಿದೆ. ಹೌದು, ಅದು ಆಪರೇಷನ್ ಕಮಲ ಸುದ್ದಿ. ಇಷ್ಟು ದಿನ ಆಡಿಯೋ ಬಾಂಬ್ ಸದ್ದು ಮಾಡಿದರೆ ಇದೀಗ ಈ ನ್ಯೂಸ್ ಬಾರೀ ಸದ್ದು ಮಾಡುತ್ತಿದೆ.  ಆಪರೇಷನ್ ಕಮಲದ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಹಸ್ಯ ಹೊರಹಾಕಿರೋ ಬೆನ್ನಲ್ಲೇ ಮತ್ತೊಂದು ಗುಟ್ಟು ಬಯಲಾಗಿದೆ.

ಅನರ್ಹ ಶಾಸಕರೇ ರಹಸ್ಯ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಬಿಎಸ್‌ವೈ ಆಡಿಯೋ ಸೋರಿಕೆಯಾಗಿ, ಅದು ಸುಪ್ರೀಂಕೋರ್ಟ್‌ವರೆಗೂ ತಲುಪಿದೆ. ರಾಜ್ಯ ಅಲ್ಲದೆ, ರಾಷ್ಟ್ರಮಟ್ಟದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಕಾಂಗ್ರೆಸ್ ಅಸ್ತ್ರವಾಗಿಸಿಕೊಂಡಿದೆ. ಹೀಗಿರುವಾಗಲೇ ಆಪರೇಷನ್ ಕಮಲದ ಮತ್ತೊಂದು ಗುಟ್ಟು ರಟ್ಟಾಗಿರೋದು ಬಿಜೆಪಿಗೆ ಮತ್ತಷ್ಟು ಇಕ್ಟಟ್ಟು ತಂದೊಡ್ಡಿದೆ. ಇದರಿಂದ ಮತ್ತೇನೋ ಆಗುವ ಸಾಧ್ಯತೆಗಳಿವೆ. 


ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟೂರು ಮಂಡ್ಯದ ಬೂಕನಕೆರೆಯಲ್ಲೇ ಕೆ.ಆರ್‌.ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯೋ ಮಾಹಿತಿ ಹೊರಹಾಕಿದ್ದಾರೆ. ಅನುದಾನಕ್ಕೆ ಜೆಡಿಎಸ್‌ ಬಿಟ್ಟೆ. ರಾಜೀನಾಮೆಗೂ ಮೊದಲು ಯಡಿಯೂರಪ್ಪ ಜೊತೆ ಚರ್ಚಿಸಿದೆ.


ತಾಲ್ಲೂಕು ಅಭಿವೃದ್ಧಿಗೆ 700 ಕೋಟಿ ರೂಪಾಯಿ ಕೇಳಿದ್ದಕ್ಕೆ 1000 ಕೋಟಿ ರೂಪಾಯಿ ಕೊಡ್ತೀನಿ ಅಂದರು. ಅದಕ್ಕೆ ರಾಜೀನಾಮೆ ಕೊಟ್ಟೆ ಎಂದಿದ್ದಾರೆ. ಈ ಮೂಲಕ ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದ ಒಪ್ಪಂದದ ಮಾತುಕತೆ ಬಯಲು ಮಾಡಿದ್ದಾರೆ. ಕನಸಿನ ಕಥೆ ಹೇಳಿ ಸೆಳೆದಿದ್ದಾರಂತೆ ಬಿಎಸ್‌ವೈ. ಬೂಕನೆರೆಯಲ್ಲಿ ನಡೆದ ಸಿಎಂ ಪುತ್ರ ವಿಜಯೇಂದ್ರ ಹುಟ್ಟುಹಬ್ಬ ಸಮಾರಂಭದಲ್ಲಿ ಬೈಎಲೆಕ್ಷನ್‌ ಪ್ರಚಾರಕ್ಕೆ ಚಾಲನೆ ಕೊಟ್ಟು ಏನೋ ಹೇಳಲು ಹೋಗಿ ಮತ್ತೇನೋ ಹೇಳಿ ಪೇಚಿಕೆ ಸಿಲುಕಿದ್ದಾರೆ.


ಇತ್ತ ಬಿಎಸ್‌ವೈ ಆಡಿಯೋ ಇಟ್ಕೊಂಡು ಬಿಜೆಪಿಯ ಜಂಘಾಬಲವೇ ಹುದುಗಿಸಿರುವ ಕಾಂಗ್ರೆಸ್‌ ಕೈಗೆ ಇದೀಗ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಸಿಎಂ ಹುಟ್ಟೂರಿನಲ್ಲಿ ನಾರಾಯಣಗೌಡ ಸ್ಫೋಟಿಸಿರೋ ಹೇಳಿಕೆಗೆ ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಾರಾಯಣಗೌಡ ಸತ್ಯ ಹೇಳಿದ್ದಾರೆ. ಸಿಎಂ ಅನರ್ಹರ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ಕೊಡ್ತಿದ್ದಾರೆ ಅಂದ್ರೆ ಅದರ ಅರ್ಥ ಏನು? ಎಂದು ಪ್ರಶ್ನಿಸಿದ್ದಾರೆ.


Find out more: