ಚಿತ್ರದುರ್ಗ: ಮುಖ್ಯಮಂತ್ರಿ ಆದವರು ರಾಜ್ಯದ ಅಭಿವೃದ್ಧಿ ಗಾಗಿ ಹಗಲಿರುಳು ಶ್ರಮಿಸುತ್ತಾರೆ. ಆದರೆ ಪ್ರಸ್ತುತ ಮುಖ್ಯಮಂತ್ರಿ ಗಳಾದ ಬಿ ಎಸ್ ಯಡಿಯೂರಪ್ಪ ಅವರು ನಾಟಕೋತ್ಸವ ದಲ್ಲಿ ಈಗೆ ಮಾಡಿರೋದು ಕೇಳಿದ್ರೆ ನೀವೂ ಶಾಕ್ ಆಗ್ತೀರಾ....
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ನಡೆದ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ಸಮಾರೋಪದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭಾಗವಹಿಸಿ, ಮಾತನಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಇಂದಿಗೆ 103 ದಿನ ಆಗಿದೆ. 103 ದಿನದಲ್ಲಿ ಒಂದು ದಿನವೂ ನನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಲ್ಲ. ಮುಖ್ಯಮಂತ್ರಿ ಆಗುತ್ತಿದ್ದಂತೆ ರಾಜ್ಯದಲ್ಲಿ ನೆರೆ ಹೆಚ್ಚಾಯ್ತು. ನೆರೆ ನಿರ್ವಹಣೆ, ರೈತರ ಸಂಕಷ್ಟ ಆಲಿಸಲು ಸಮಯ ಕೊಟ್ಟಿದ್ದೇನೆ. ಒಂದೆಡೆ ನೋವು, ಒಂದೆಡೆ ಸಂತೋಷ. ನೆರೆ ಹಾವಳಿಯಿಂದ 7 ಲಕ್ಷ ಹೆಕ್ಟೇರ್ ಬೆಳೆ ಹಾನಿ, 3.5 ಲಕ್ಷ ಮನೆ ಕುಸಿತ ಆಗಿದೆ ಎಂದು ಅಳಲನ್ನು ತೋಡಿಕೊಂಡರು.
ಕೇಂದ್ರ ಸರ್ಕಾರ ನೀಡಿದ ಎನ್.ಡಿ.ಆರ್.ಎಫ್ ಹಣದ ಜೊತೆ ರಾಜ್ಯ ಸರ್ಕಾರ ಕೂಡ ಹಣ ಹಾಕಿದೆ. 3 ಸಾವಿರ ಮನೆಗಳ ನಿರ್ಮಾಣಕ್ಕೆ ತಲಾ ಒಬ್ಬರಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಈಗಾಗಲೇ ಮನೆ ನಿರ್ಮಾಣಕ್ಕೆ ಬುನಾದಿಗಾಗಿ 1 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮನೆ ನಿರ್ಮಾಣ ಪೂರ್ತಿ ಆಗೋವರೆಗೂ ಮನೆ ಬಾಡಿಗೆ 5 ಸಾವಿರ ರೂಪಾಯಿ ನೀಡಲಾಗುತ್ತಿದೆ, ಈ ಹಿಂದೆ ಇಷ್ಟರ ಮಟ್ಟಿಗೆ ಜನರಿಗೆ ಸ್ಪಂದನೆ ಮಾಡುವುದಕ್ಕೆ ಯಾರಿದ್ದಿಲ್ಲ, ಇದೀಗ ನಮ್ಮ ಸರ್ಕಾರ ರಾಜ್ಯ ಅಭಿವೃದ್ಧಿಪಡಿಸಲು ಪಣ ತೊಟ್ಟಿದೆ.
ರೈತನ ಸ್ಥಿತಿ ಸುಧಾರಣೆ ಆಗಬೇಕಿದೆ, ಅದಕ್ಕಾಗಿ ಸಿಎಂ ಆದ ತಕ್ಷಣ ರೈತರಿಗೆ 2 ಸಾವಿರ ರೂಪಾಯಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ 6 ಸಾವಿರದ ಜೊತೆ ರಾಜ್ಯ ಸರ್ಕಾರ 2 ಸಾವಿರ ಕೊಟ್ಟಿದೆ. ನಮ್ಮ ಸರ್ಕಾರ ನೀರಾವರಿಗೆ ಆದ್ಯತೆ ನೀಡುತ್ತಿದೆ. ರೈತರಿಗೆ ವೈಜ್ಞಾನಿಕ ಬೆಲೆ ಸಿಗಬೇಕು. 100 ದಿನ ಸಮಯ ಕೊಡಿ, ಇಲ್ಲವೇ ಮುಂದಿನ ನಾಟಕೋತ್ಸವದ ವೇಳೆಗೆ ವೈಜ್ಞಾನಿಕ ಬೆಲೆ, ರೈತರ ಆದಾಯ ದ್ವಿಗುಣಕ್ಕೆ ಪ್ರಯತ್ನಿಸಲಿದ್ದೇನೆ ಎಂಬ ಭರವಸೆ ನೀಡಿದರು.