ನವದೆಹಲಿ: ರಾಷ್ಟ್ರಾದ್ಯಂತ ಸಂಚಲನ ಮೂಡಿಸಿರುವ ಅಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪು ಇಂದು ಬೆಳಗ್ಗೆ 10:30ಕ್ಕೆ ಹೊರಬೀಳೋದು ಪಕ್ಕಾ ಆಗಿದೆ. ರಾಷ್ಟ್ರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಡೆ ಕೋಮು ಸೌಹಾರ್ದ ಕದಡದಂತೆ  ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ.  ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್,  ಫೇಸ್ಬುಕ್ ಮೇಲೆ ಪೊಲೀಸ್ ಕಣ್ಣು, ಯಾಮಾರಿ ಟ್ವೀಟ್ ಮಾಡಿದ್ರೆ ಕೃಷ್ಣನ ಜನ್ಮಸ್ಥಳ ಸೇರೋದು ಪಕ್ಕಾ!


ರಾಷ್ಟ್ರ್ರದ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠದ ರಂಜನ್ ಗೋಗಯ್  ಅವರಿಂದ ತೀರ್ಪು ಪ್ರಕಟವಾಗಲಿದೆ. ರಾಷ್ಟ್ರ್ರದ ಅತಿದೊಡ್ಡ ಪ್ರಕರಣ, ಹಿಂದುತ್ವ, ಮುಸ್ಲಿಂ ಸಮುದಾಯದ ಅತೀ ಪ್ರಮುಖವಾದ ಪ್ರಕರಣ ವಾಗಿದ್ದು, ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು, ಎಲ್ಲರು ಶಾಂತಿಯಿಂದಿರಿ, ತೀರ್ಪನ್ನು ಸ್ವಾಗತಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಟ್ವೀಟ್ ಮೂಲಕ ಶಾಂತಿಯ ಸಂದೇಶವನ್ನು ಕಳುಹಿಸಿದ್ದಾರೆ. 


ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮ ಭೂಮಿಯ 2.77 ಎಕರೆ ಜಾಗದ ತೀರ್ಪು ಪ್ರಕಟ ಆಗಲಿದೆ. ಭಾರತದ ಪಾಲಿಗೆ ಇದು ಐತಿಹಾಸಿಕ ತೀರ್ಪು ಆಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ತೀರ್ಪು ನೀಡಲಿದ್ದಾರೆ. ಐವರು ನ್ಯಾಯಾಧೀಶರ ಪೀಠ ಈ ತೀರ್ಪು ನೀಡಲಿದೆ. ಅನಗತ್ಯ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ. 40 ದಿನಗಳ ವಿಚಾರಣೆ ಬಳಿಕ ತೀರ್ಪು ಸುಪ್ರೀಂ ಕೋರ್ಟಲ್ಲಿ ಪ್ರಕಟಗೊಳ್ಳಲಿದ್ದು,  ಬೆಂಗಳೂರಲ್ಲಿ 6000 ಪೊಲೀಸರನ್ನು ನಿಯೋಜಿಸಲಾಗಿದೆ.  ದೇಶಾದ್ಯಂತ ಮಸೀದಿ,  ಮಂದಿರಗಳು ಸೇರಿದಂತೆ ಪ್ರಮುಖ ಸ್ಥಾನಗಳಲ್ಲಿ ಬಂದೋಬಸ್ತ್ ಹಾಕಲಾಗಿದೆ.  


ಫೇಸ್ಬುಕ್,  ವಾಟ್ಸಾಪ್ ಸೇರಿ ಸಾಮಾಜಿಕ ಜಾಲ ತಾಣಗಳ ಮೇಲೆ ಕಣ್ಣಿಡಲಾಗಿದೆ.  ಶಾಂತಿ ಭಂಗ ತರುವ ಮೆಸೇಜ್ ಕಳುಹಿಸಿದರೆ ಅಪಾಯವಿದೆ. ತೀರ್ಪು ಏನೇ ಆಗಲಿ ಶಾಂತಿಯಿಂದಿರಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಟ್ವೀಟ್ ಮಾಡಿದ್ದಾರೆ. ತೀರ್ಪು ಏನಾಗಲಿದೆ ಎಂಬ ಸುದೀರ್ಘ ಪ್ರಶ್ನೆಗೆ ಉತ್ತರ ಶನಿವಾರ ಸಿಗಲಿದೆ.


Find out more: