ನವ ದೆಹಲಿ: ಬಹಳ ದಿನಗಳ ನಂತರ ರಾಹುಲ್ ತುಂಬಾ ಭಾವುಕರಾಗಿದ್ದಾರೆ. ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಹೌದು ಅದು ಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ಬಗ್ಗೆ. ಅದನ್ನು ನೀವು ಒಮ್ಮೆ ಓದಿಬಿಡಿ.
ಇಲ್ಲಿಯವರೆಗೂ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್.ಪಿ.ಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ಭಾವನಾತ್ಮಕ ಟ್ವೀಟ್ ಮಾಡಿದ್ದು, ನನಗೆ, ನನ್ನ ಕುಟುಂಬಕ್ಕೆ ಭದ್ರತೆ ನೀಡಿದ ಎಸ್.ಪಿ.ಜಿ ಸಹೋದರ-ಸಹೋದರಿಯರಿಗೆ ಧನ್ಯವಾದ ಎಂದಿದ್ದಾರೆ. ಗಾಂಧಿ ಕುಟುಂಬದ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ. ಇತ್ತೀಚಿನ ದಿನಗಲ್ಲಿ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲದ ಕಾರಣಕ್ಕೆ ಅವರಿಗೆ ನೀಡಲಾಗಿರುವ ಎಸ್ಪಿಜಿ ಭದ್ರತೆಯನ್ನು ಕೇಂದ್ರ ಹಿಂಪಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಇದೊಂದು ಸೇಡಿನ ರಾಜಕಾರಣ ಎಂದಿದ್ದಾರೆ.
ವಿಶೇಷವಾಗಿ ಕೇಂದ್ರದ ವಿರುದ್ದ ಗುಡುಗುತ್ತಿದ್ದ ರಾಹುಲ್ ಇದೀಗ ಸುಮ್ಮನಾಗಿದ್ದಾರೆ. ಈ ಬಗ್ಗೆ ರಾಹುಲ್ ಯಾವುದೇ ಅಪಸ್ವರ ಎತ್ತಿಲ್ಲ. ಬದಲಿಗೆ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. "ಕಳೆದ ಹಲವು ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಲು ಶ್ರಮಿಸಿದ ಎಸ್ಪಿಜಿ ಸಹೋದರ ಹಾಗೂ ಸಹೋದರಿಯರಿಗೆ ಧನ್ಯವಾದ. ನಿಮ್ಮ ಬದ್ಧತೆಗೆ ನನ್ನ ಧನ್ಯವಾದ. ಉತ್ತಮ ಭವಿಷ್ಯಕ್ಕೆ ಆಲ್ ದ ಬೆಸ್ಟ್," ಎಂದಿದ್ದಾರೆ ರಾಹುಲ್ ಗಾಂಧಿ.
1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ ಮಾಜಿ ಪ್ರಧಾನಿಗಳು ಸೇರಿದಂತೆ ಗಾಂಧಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ಒದಗಿಸಲಾಗಿತ್ತು. ಎಲ್ಲಾ ಮಾಜಿ ಪ್ರಧಾನಿಗಳ ಭದ್ರತೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯವಿದ್ದಾಗ ಅದನ್ನು ಇಳಿಕೆ ಮಾಡಲಾಗುತ್ತದೆ. ಇತ್ತೀಚೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಇದೀಗ ಗಾಂಧಿ ಕುಟುಂಬದಿಂದಲೂ ಈ ಎಸ್. ಪಿ. ಜಿ ಭದ್ರತೆ ಹಿಂಪಡೆಯಲಾಗಿದೆ. ಆದರೆ ಕೇಂದ್ರದ ನಾಯಕರು ಮತ್ತು ಕಾಂಗ್ರೇಸ್ ನ ಗಟಾನುಘಟಿ ನಾಯಕರು ಇದನ್ನು ಇನ್ನಷ್ಟು ವರ್ಷ ಮುಂದುವರೆಸಬೇಕಿತ್ತು, ಇಲ್ಲಿಗೆ ನಿಲ್ಲಿಸಬಾರದಿತ್ತೆಂದು ಆಕ್ರೋಶ ಹೊರಹಾಕಿದ್ತಾರೆ.