ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಸಂಚಲನ ಮೂಡಿಸುವಂತಹ ಸುದ್ದಿಯೊಂದು ಹರಿದಾಡುತ್ತಿದೆ. ಹೀಗೂ ಮಾಡ್ತೀರಾ, ಇದು ನಿಜವಾಗಿಯೂ ಆಗುತ್ತಾ ಎಂಬುದು ಕಾಡ್ತಿದೆ. ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಬಿಜೆಪಿ ಜೊತೆಗೆ ದೋಸ್ತಿ ಆಗಿಬಿಡ್ತಾರಾ ಎಂಬ ಕುತೂಹಲಕಾರಿ ವಿಷಯ ಇದೀಗ ಚರ್ಚೆಯಾಗ್ತಿದೆ. ಇದಕ್ಕೆಲ್ಲಾ ಕಾರಣ ಇದೇ ವಿಷಯ ನೋಡಿ.
ಉಪ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಿಬ್ಬರು ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ರನ್ನು ಭಾನುವಾರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 15 ಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರಬೀಳಲಿದ್ದು, ನಾಮ ಪತ್ರ ಸಲ್ಲಿಕೆ ಆರಂಭವಾಗಲಿದೆ. ಈ ಮಧ್ಯೆ ಕಾಗವಾಡ ಮತ್ತು ಗೋಕಾಕ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ರಾಜುಕಾಗೆ ಹಾಗೂ ಅಶೋಕ್ ಪೂಜಾರಿ ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಕ ಹಿಂದೆ ಬಿಜೆಪಿಯ ಕೈವಾಡವಿದೆ ಇದೆಯಾ ಎಂಬುದೇ ಇದೀಗ ಕುತೂಹಲಕಾರಿ ವಿಷಯವಾಗಿದೆ.
ಗೋಕಾಕ್ ಮತ್ತು ಕಾಗವಾಡದಲ್ಲಿ ಈ ಇಬ್ಬರಿಗೆ ಬಿಜೆಪಿಯಿಂದ ಟಿಕೆಟ್ ದೊರೆಯುವುದಿಲ್ಲ ಎಂಬುದು ಖಾತ್ರಿಯಾಗಿದ್ದು ಕಾಂಗ್ರೆಸ್‍ನತ್ತ ಮುಖ ಮಾಡಿರುವ ಇವರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶಕ್ಕಾಗಿ ಡಿಕೆಶಿ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಈ ಇಬ್ಬರೂ ಪರಾಭವಗೊಂಡಿದ್ದರು. ಆದರೆ ಇವರನ್ನು ಕಾಂಗ್ರೇಸ್ ಗೆ ಕಲುಹಿಸುತ್ತಿರುವುದೇ ಬಿಜೆಪಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಳಗೊಳಗೆ ನಡೆದ ರಾಜಕೀಯ ವಿದ್ಯಮಾನಗಳಿಂದ ಇವರಿಬ್ಬರು , ಡಿಕೆಶಿ ಅವರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಜುಕಾಗೆಯವರು ಬಹಿರಂಗವಾಗಿಯೇ ಬಿಜೆಪ ವಿರುದ್ಧ ಸಮರ ಸಾರಿದ್ದಾರೆ. ಈ ನಡುವೆ ಈ ಭೇಟಿ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ರಾಜುಕಾಗೆ, ರಾಜಕೀಯ ಕಾರಣಗಳಿಗಾಗಿ ಡಿಕೆಶಿ ಅವರನ್ನು ಭೇಟಿ ಮಾಡಿಲ್ಲ ಎಂದು ಮತ್ತೊಂದು ಕಾರಣ ತಿಳಿಸಿದ್ದಾರೆ.
ಅನರ್ಹರ ತೀರ್ಪು ಸುಪ್ರೀಂ ಕೋರ್ಟ್ ನಿಂದ ಬುಧವಾರ ಪ್ರಕಟವಾಗಲಿದೆ.