ಬೆಂಗಳೂರು: ಅಯೋಧ್ಯೆ ತೀರ್ಪಿನ ನಂತರ ಇದೀಗ ರಾಜ್ಯದಲ್ಲಿ ಉಪಚುನಾವಣೆಯ ಕಾವೇರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈಬಾರಿ ನಾವೇ ಗೆಲ್ಲೋದು ಎನ್ನುತ್ತಿವೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪ ಚುನಾವಣೆಯ ಸಮರ ಗೆಲ್ಲಲು ಏನೋ ಮಾಡುತ್ತಿದ್ದಾರೆ. ಅದನ್ನು ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಹೌದು, ಅದು ಏನಂತ ನೀವೆ ಒಮ್ಮೆ ಓದಿಬಿಡಿ. 


ಅನರ್ಹ ಶಾಸಕರಿಂದ ತೆರವಾದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಡಿಸೆಂಬರ್ 5 ರಂದು ನಡೆಯಲಿದ್ದು 15 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಚುನಾವಣೆ ತಂತ್ರಗಾರಿಕೆ ಕುರಿತಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ.15 ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದೆ.

ಯಲ್ಲಾಪುರ - ಭೀಮಾನಾಯಕ್, ಹೀರೇಕೆರೂರು- ಬಿಎಚ್ ಬನ್ನಿಕೋಡ್, ರಾಣಿ ಬೆನ್ನೂರು - ಕೆ ಬಿ ಕೋಳಿವಾಡ್, ಚಿಕ್ಕಬಳ್ಳಾಪುರ- ಎಂ ಆಂಜನಪ್ಪ, ಕೆ.ಆರ್ ಪುರ- ಎಂ. ನಾರಾಯಣಸ್ವಾಮಿ,ಮಹಾಲಕ್ಷ್ಮೀ ಲೇಔಟ್- ಎಂ. ಶಿವರಾಜ್, ಹೊಸಕೋಟೆ- ಪದ್ಮಾವತಿ ಸುರೇಶ್, ಹುಣಸೂರು-ಎಚ್.ಪಿ ಮಂಜುನಾಥ ಹೆಸರು ಘೋಷಣೆ ಮಾಡಲಾಗಿದೆ. ಈಗಾಗಲೇ ಗೆಲ್ಲುವ ಕುದುರೆಗಳಾಗಿವೆಯಂತೆ. 


ರಾಜಧಾನಿ ಬೆಂಗಳೂರಿನ ಶಿವಾಜಿನಗರ ಸೇರಿದಂತೆ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದ್ದು ಕೆಲವೊಂದು ಗೊಂದಲಗಳಿಂದ ಅಭ್ಯರ್ಥಿ ಘೋಷಣೆ ತಡವಾಗುತ್ತಿದೆ . ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಪ್ರಭಲ ಆಕಾಂಕ್ಷಿಯಾಗಿದ್ದು ಕೆಲವು ಮುಖಂಡರು ರಿಜ್ವಾನ್‌ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು ಪ್ರಮುಖ ಮುಖಂಡರು ಭಾಗಿಯಾಗಿದ್ದರು. ಈಗಾಗಲೇ 15 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕವಾಗಿದ್ದು ಪ್ರತಿ ಕ್ಷೇತ್ರಗಳಿಗೆ ಮುಖಂಡರು ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಬಾಕು ಉಳಿದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಗೆ, ಪ್ರಚಾರ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿದೆ


Find out more: