ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹ ಗೊಳಿಸಿ ತಪ್ಪು ಮಾಡಿದ್ದರು, ಇದೀಗ ಅನರ್ಹರು ಸಹ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ. ಇದು ಸ್ವಾಗತಾರ್ಹವಾಗಿದೆ. ಈ ಮೂಲಕ ಹಿಂದಿನ ಸಭಾಧ್ಯಕ್ಷರು ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದಾರೆ ಎಂದು ತೋರಿಸಿಕೊಟ್ಟಿದೆ  ಎಂದು ಅನರ್ಹತೆಗೊಂಡ ಶಾಸಕರ ತೀರ್ಪು ಕುರಿತು ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.


ಅನರ್ಹ ಶಾಸಕರು ಯಾವ ಪಕ್ಷದಿಂದ ನಿಲ್ಲುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ. ಆ ಶಾಸಕರು ಚುನಾವಣೆಗೆ  ಬಿಜೆಪಿಯಿಂದ ನಿಲ್ಲುತ್ತೇವೆ ಎಂದು ಪಕ್ಷಕ್ಕೆ ಅರ್ಜಿ ಸಲ್ಲಿಸಿದರೆ, ಆ ಬಳಿಕ ಹಿರಿಯರೊಂದಿಗೆ ಚರ್ಚಿಸಿ ಅವಕಾಶಕೊಡುವ ಕುರಿತು ನಿರ್ಧರಿಸಲಾಗುತ್ತದೆ. ಕೆಲ ಅನರ್ಹ ಶಾಸಕರು ತಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿಲ್ಲುತ್ತೇವೆ ಎಂದು ಖಾಸಗಿಯಾಗಿ ಹೇಳಿರಬಹುದು. ಆದರೆ ಇದುವರೆಗೂ ಅಧಿಕೃತವಾಗಿ ಬಿಜೆಪಿಯಿಂದ ಸ್ಪರ್ಧಿಸುತ್ತೇವೆ ಎಂದು ಯಾವುದೇ ಅರ್ಜಿ ಬಂದಿಲ್ಲ ಎಂದಿದ್ದಾರೆ. ಸಚಿವ ಆರ್. ಅಶೋಕ್ ಅವರು ಅನರ್ಹರ ಪ್ರಕರಣದ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಮಾತನಾಡಿ, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿರುವುದರಿಂದ ನಾವೆಲ್ಲಾ ನಿರಾಳರಾಗಿದ್ದೇವೆ ಎಂದು ತಿಳಿಸಿದ್ದಾರೆ. 


ಅನರ್ಹರ ಶಾಸಕರಿಗೆ ನಮ್ಮ ಪಕ್ಷದಿಂದ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರಿಗೂ ಟಿಕೇಟ್ ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆ ಎಂದು ಸಚಿವ ಅಶೋಕ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಶಾಸಕರಾಗಿ ಆಯ್ಕೆಯಾಗಲು ಯಾವ ಅಡೆತಡೆಯೂ ಇಲ್ಲ. ಆದರೆ ಅವರಿಗೆಲ್ಲಾ ಸದ್ಯಕ್ಕೆ ಮಂತ್ರಿಯಾಗಲು ಅವಕಾಶ ಇಲ್ಲ ಅಷ್ಟೇ ಎಂದು ಅಶೋಕ್ ಅವರು ಸುಪ್ರೀಂ ತೀರ್ಪನ್ನು ವಿಶ್ಲೇಷಿಸಿದರು.


ಅನರ್ಹರಿಗೆ ಟಿಕೆಟ್ ಫಿಕ್ಸ್: ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ಪಕ್ಕಾ ಎಂದರು.ರಾಜ್ಯದ 15ಕ್ಷೇತ್ರಗಳಿಗೆ ನಡೆಯಲಿರುವ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಳಲ್ಲೂ ಗೆಲ್ಲಲಿದೆ ಎಂದು ಸಚಿವ ಅಶೋಕ್ ಅವರುಭರವಸೆ ವ್ಯಕ್ತಪಡಿಸಿದರು.ಪಕ್ಷದಲ್ಲಿ ಯಾವುದೇ ಗೊಂದಲು ಮತ್ತು ಅಸಮಧಾನ ಇಲ್ಲ.ಆದರೆ ಇದೀಗ ನಿಜವಾದ ಗೊಂದಲವಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆಎಂದು ಅಶೋಕ್ ಅವರುಅಭಿಪ್ರಾಯ ವ್ಯಕ್ತಪಡಿಸಿದರು


Find out more: