ಬೆಂಗಳೂರು: ಅನರ್ಹತೆಯಿಂದ ರಾಜಕೀಯ ಜೀವನವೆ ಮುಗಿತು ಎಂದಿದ್ದವರಿಗೆ ಸುಪ್ರೀಂ ಕೋರ್ಟ್ ನೀರೆರಚಿ  ಬದುಕಿಸಿತು. ಇದೀಗ ಭಾರತೀಯ ಜನತಾ ಪಕ್ಷ ಅನರ್ಹರಿಗೆ ಟಿಕೆಟ್ ನೀಡುವ ಮೂಲಕ ಅವರಿಗೆ ಭರ್ಜರಿ ಮೃಷ್ಟಾನ್ನ ಭೋಜನವಿತ್ತಿದೆ. ಹೌದು, ಟಿಕೆಟ್ ಸಿಗುತ್ತಾ ಇಲ್ಲಾ! ಸಿಕ್ಕರೆ ಓ ಕೆ ಸಿಗಲಿಲ್ಲವೆಂದರೆ ನಮ್ಮ ಪರಿಸ್ಥಿತಿಯೇನು? ತೆರೆಯ ಹಿಂದೆ ಸರಿದು ಪಕ್ಷೇತರರಾಗಿ ಸ್ಪರ್ಧಿಸಬೇಕಾ! ಇಲ್ಲವೇ ಮನೆಯಲ್ಲಿ ಕುಲಿತುಕೊಳ್ಳಬೇಕಾ? ಎಂಬಂತಹ ಹಲವಾರು ಗೊಂದಲಗಳು ಅನರ್ಹರನ್ನು ಕಾಡಿದ್ದವು. ಇದೀಗ ಟಿಕೆಟ್ ಪಕ್ಕಾ ಆಗುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. 


ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ನಿಂದ ಅಂತಿಮ ತೀರ್ಪು ಹೊರಬರುತ್ತಿದ್ದಂತೆ ಡಿ.5ರಂದು ನಡೆಯಲಿರುವ ಉಪಚುನಾವಣೆಯ ಸಿದ್ಧತೆಗಳೂ ಗರಿಗೆದರಿವೆ. ಈ ಬೆನ್ನಲ್ಲೇ ಬಿಜೆಪಿ 13 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದೆ. ಅನರ್ಹ ಶಾಸಕರು ತಮ್ಮ ಕ್ಷೇತ್ರಗಳಿಂದಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. 


ಬಿಜೆಪಿಯಿಂದ ಪ್ರಕಟಗೊಂಡ ಮೊದಲ ಪಟ್ಟಿಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ:-
ಅಥಣಿ- ಮಹೇಶ್​ ಕುಮಟಳ್ಳಿ
ಚಿಕ್ಕಬಳ್ಳಾಪುರ- ಕೆ.ಸುಧಾಕರ್​
ಕೆ.ಆರ್​.ಪುರ – ಭೈರತಿ ಬಸವರಾಜು
ಯಶವಂತಪುರ- ಎಸ್​.ಟಿ.ಸೋಮಶೇಖರ್​
ಮಹಾಲಕ್ಷ್ಮೀ ಲೇಔಟ್​- ಕೆ.ಗೋಪಾಲಯ್ಯ
ಹೊಸಕೋಟೆ – ಎಂಟಿಬಿ ನಾಗರಾಜ್​
ಕೆ.ಆರ್​.ಪೇಟೆ- ಕೆ.ಸಿ.ನಾರಾಯಣಗೌಡ
ಹುಣಸೂರು- ಎಚ್​.ವಿಶ್ವನಾಥ್​
ಕಾಗವಾಡ- ಶ್ರೀಮಂತಗೌಡ ಪಾಟೀಲ್​
ಗೋಕಾಕ್​- ರಮೇಶ್​ ಜಾರಕಿಹೊಳಿ
ಯಲ್ಲಾಪುರ – ಶಿವರಾಮ ಹೆಬ್ಬಾರ್​
ಹಿರೇಕೆರೂರು- ಬಿ.ಸಿ.ಪಾಟೀಲ್
ವಿಜಯನಗರ- ಆನಂದ್​ ಸಿಂಗ್​

ಟಿಕೆಟ್ ಸಿಕ್ಕಿದ್ದು ಆಯ್ತು, ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗಿದ್ದು ಆಯ್ತು. ಇನ್ನೇನಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಮತದಾರ ಪ್ರಭುವನ್ನು ಒಲೈಸಿ  ಚುನಾವಣೆಯಲ್ಲಿ ಗೆಲ್ಲುವುದೊಂದೆ ಬಾಕಿಯಿದೆ ಎಂದು ಅನರ್ಹ  ಶಾಸಕರೇ ತಿಳಿಸಿದ್ದಾರೆ.


ನಾವು ರಾಜೀನಾಮೆ ನೀಡಲು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಗೆ ಅನುದಾನ ನೀಡದೆ ಇದ್ದದ್ದು, ನಾವು ಕ್ಷೇತ್ರಕ್ಕಾಗಿ ರಾಜೀನಾಮೆ ನೀಡಿದ್ದೇವೆ ಅದನ್ನು ಜನರು ಅರ್ಥೈಸಿಕೊಂಡಿದ್ದಾರೆ. ಎಂಬುದೇ ಈಗಿನ ಉಪ ಚುನಾವಣೆಯ ಅನರ್ಹರ ಶಾಸಕರ ಬ್ರಹ್ಮಾಸ್ತ್ರ ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯಾಗಿದೆ. ಆದರೆ ಮತದಾರ ಪ್ರಭು ಅನರ್ಹರಿಗೆ ಮತ ಹಾಕುತ್ತಾರಾ ಇಲ್ಲವಾ ಎಂಬುದು ಚುನಾವಣೆಯ ನಂತರವೇ ತಿಳಿಯಲಿದೆ.


Find out more:

bjp