ಬಳ್ಳಾರಿ: 15 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿ. ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದು. ಇದೀಗ ಆ 15 ಮಾಜಿ ಶಾಸಕರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಎಲ್ಲರನ್ನು ಗೆಲ್ಲಿರುವ ಜವಾಬ್ದಾರಿ ಇದೆ, ಕಾರ್ಯಕರ್ತರು ಪಕ್ಷದವರೆಲ್ಲರು ಸೇರಿಕೊಂಡು ಅನರ್ಹರೆಲ್ಲರನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 


17 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ನಾವೆಲ್ಲರೂ ಮಂತ್ರಿಗಳಾಗಿದ್ದೇವೆ, ಬಿಜೆಪಿ ಸರಕಾರ ರಚನೆಯಾಗಿದೆ ಎಂದು ಅನರ್ಹ ಶಾಸಕರ ಸಹಕಾರವನ್ನು ನೆನೆದ ಸಚಿವ ಬಿ. ಶ್ರೀರಾಮುಲು, ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಅನರ್ಹ ಶಾಸಕರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಹೊಸಪೇಟೆಯ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, '17 ಶಾಸಕರು ರಾಜೀನಾಮೆ ನೀಡಿದ್ದರಿಂದ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ಕುಮಾರಸ್ವಾಮಿ ಅವರ ಆಡಳಿತಕ್ಕೆ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದಾರೆ' ಎಂದರು.


ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, 'ರಾಹುಲ್‌ ಗಾಂಧಿ ಅವರಿಗೆ ಮಾಹಿತಿ ಕೊರತೆಯಿದೆ. ಹಾಗಾಗಿ ನರೇಂದ್ರ ಮೋದಿ ಅವರ ವಿರುದ್ಧ ರಫೇಲ್‌ ಕುರಿತು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್‌ ಅವರಿಗೆ ಈಗಾಗಲೇ ಛೀಮಾರಿ ಹಾಕಿದೆ’ ಎಂದರು. ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಮಾತನಾಡಿ, ‘‘ವಿಜಯನಗರ ಜಿಲ್ಲೆ ಮಾಡುವುದಕ್ಕೆ ಯಾರೂ ವಿರೋಧ ಮಾಡಿಲ್ಲ. ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಳಿಕ ಜಿಲ್ಲೆ ರಚನೆ ವಿಷಯ ಮತ್ತೆ ಚರ್ಚೆಗೆ ಬರಲಿದೆ' ಎಂದರು.


ಚುನಾವಣೆಯು ಪ್ರಸ್ತುತ ರಾಜಕೀಯ ದಲ್ಲಿ ಅತೀ ಪ್ರಮುಖ ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ ಕಾರ್ಯಕರ್ತರೆಲ್ಲರು ಒಗ್ಗೂಡಬೇಕು, ಅವರು ಮನೆ ಮನೆಗೆ ತೆರಳಿ ಚುನಾವಣೆಯ ವಾಸ್ತವವನ್ನು ಅರ್ಥೈಸಬೇಕು ಅನರ್ಹರನ್ನು ಅರ್ಹರನ್ನಾಗಿ ಮಾಡಬೇಕು ಎಂದಿದ್ದಾರೆ. ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್‌, ರಾಜುಗೌಡ, ಬಸವರಾಜ ದಢೇಸುಗೂರು, ಪಕ್ಷ ದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮಂಡಲ ಅಧ್ಯಕ್ಷ ಅನಂತಪದ್ಮನಾಭ, ಚಂದ್ರನಾಯ್ಕ, ನೇಮಿರಾಜ ನಾಯ್ಕ, ಹನುಮಂತಪ್ಪ ಹಾಗೂ ಇತರರಿದ್ದರು.


Find out more: