ಚಿಕ್ಕಬಳ್ಳಾಪುರ: ಪ್ರಸ್ತುತ ರಾಜ್ಯ ಮುಖ್ಯ ಮಂತ್ರಿ ಹಾಗೂ ರಾಜ್ಯದಲ್ಲಿ ಒಟ್ಟು 4ಬಾರಿ ಮುಖ್ಯಮಂತ್ರಿ ಆಗಿರುವ ಬಿ. ಎಸ್ ಯಡಿಯೂರಪ್ಪ ನವರು ಒಮ್ಮೆಯಾದರೂ ಮುಂಬಾಗಿಲಿನಿಂದ ಮುಕ್ಯಮಂತ್ರಿಯಾಗಿದ್ದಾರೆಯೇ ಸದಾಕಾಲ ಅಡ್ಡದಾರಿಯಲ್ಲಿ ಸಾಗಿ ಮುಖ್ಯಮಂತ್ರಿ ಆಗುವುದು ಅವರಿಗೆ ಅಭ್ಯಾಸ ವೆಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ದ ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಂಚನಬಲೆಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪ ಪರ ಮತಯಾಚನೆ ಮಾಡಿ ಮಾತನಾಡಿದರು. ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ಹಿಂಬಾಲಿಗಿಲಿನಿಂದ ಎಂದು ಸಿದ್ದರಾಮಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸಿಎಂ ಆಗಲಿಕ್ಕೆ ತಿರುಕನ ಕನಸು ಕಾಣುತ್ತಿದ್ದಾರೆಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಐದು ವರ್ಷ ಮುಖ್ಯಮಂತ್ರಿ ಆಗಿದ್ದೆ. ಯಡಿ ಯೂರಪ್ಪ ಎಂದಾದರೂ ಐದು ವರ್ಷ ಅಧಿಕಾರ ನಡೆಸಿದ್ದರಾ ಎಂದು ಕಿಡಿಕಾರಿದರು. ಶಾಸಕರಿಗೆ 3೦-4೦ ಕೋಟಿ ಕೊಟ್ಟು ಖರೀದಿ ಮಾಡಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗೆ ಇಲ್ಲ ಎಂದರು. ಯಡಿಯೂರಪ್ಪ ಸದಾ ಕಾಲ ಹಿಂಬಾಗಿಲಿನಲ್ಲಿಯೇ ಮುಖ್ಯಮಂತ್ರಿ ಆಗಿದ್ದಾರೆ. ಈ ಚುನಾವಣೆಯಲ್ಲಿ ಯಡಿಯೂರಪ್ಪ ಮಕಾಡೆ ಮಲಗುವುದು ಗ್ಯಾರಂಟಿ ಎಂದಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದಾಗ 122 ಕ್ಷೇತ್ರಗಳು ಗೆದ್ದಿದ್ದವು. ಯಡಿಯೂರಪ್ಪಗೆ ಅಧಿಕಾರ ನಡೆಸಲು ಬಹುಮತವೇ ಇಲ್ಲ. ನಾನು ಎಂದೂ ಕೂಡ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ ಎಂದರು.
ಹೆಚ್.ಡಿ.ಕುಮಾರಸ್ವಾಮಿ. ಡಿ.ಕೆ.ಶಿವಕುಮಾರ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಭೇಟಿ ಮಾಡಬೇಡಿ ಅಂತ ಹೇಳಿಕ್ಕೆ ಅಗುತ್ತಾ ಎಂದು ಪ್ರಶ್ನಿಸಿದರು, ಉಪ ಚುನಾವಣೆ ಬಳಿಕ ಹೊಸ ಸರ್ಕಾರ ರಚನೆ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚುನಾ ವಣೆ ಫಲಿತಾಂಶ ಬರಲಿ ಅವೆಲ್ಲಾ ಮತ್ತೆ ಮಾತನಾಡೋಣ ಎಂದಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅನರ್ಹ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರನ್ನು ಸೋಲಿಸಲೇ ಬೇಕು. ಜನರು ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಸುಧಾಕರ್ ಗೆ ತಕ್ಕ ಪಾಠ ಕಲಿಸ ಬೇಕು ಎಂದಿದ್ದಾರೆ.