ವಿಜಯಪುರ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಉಪಚುನಾವಣೆಗೆ ಇನ್ನು ಎರಡೇ ದಿನ ಹಾಕಿ ಇದ್ದು ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇದರ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಳುಗುತ್ತಿರುವ ಹಡಗು, ಆ ಹಡಗನ್ನು ಯಾರು ತಾನೇ ಹತ್ತುತ್ತಾರೆ , ರಾಜ್ಯದಲ್ಲಿ ಅವರ ಕಥೆ ಮುಗಿದೋದ ಅಧ್ಯಾಯ. ಅವರ ಆಟ ಇನ್ನು ಮುಂದೆ ನಡೆಯೋದಿಲ್ಲ ಎಂದಿರುವ ಪ್ರಭಾವಿ ಸಚಿವರೊಬ್ಬರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ಗುಡುಗಿದ್ದಾರೆ. 
 
ಈ ಹಿಂದೆ ಸರ್ಕಾರ ನಡೆಸಿದ ಎರಡು ದೋಸ್ತಿ ಪಕ್ಷಗಳು ಮುಳುಗುತ್ತಿರುವ ಹಡಗುಗಳು. ಒಬ್ಬರಿಗೊಬ್ಬರು ಅಪ್ಪಿಕೊಂಡು ಇಬ್ಬರೂ ಮುಳುಗುತ್ತಾರೆ, ಇದು ಆ ಪಕ್ಷಗಳ ಪರಿಸ್ಥಿತಿ, ಮುಳುಗುವ ಸಂದರ್ಭದಲ್ಲಿ ಬದುಕುವ ಕಾರಣಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರೂ ಬದುಕುವದಿಲ್ಲ ಎಂದು ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. 
 
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಸಚಿವ ಕೆಎಸ್‌ ಈಶ್ವರಪ್ಪ ಮಾತನಾಡಿ, ಉಪ ಚುನಾವಣೆಯ ಬಳಿಕ ಜೆಡಿಎಸ್ ಜತೆಗೂಡಿ ಕಾಂಗ್ರೆಸ್ ಸರಕಾರ ರಚಿಸುವ ಕುರಿತು ಇರುವ ವದಂತಿಗೆ ಈಶ್ವರಪ್ಪ ಈ ರೀತಿ ಪ್ರತಿಕ್ರಿಯೆ ನೀಡಿದರು. ಜೆಡಿಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಬಿಎಸ್‌ ಯಡಿಯೂರಪ್ಪ ಬದಲಿಗೆ‌ ಬಿ ಎಲ್ ಸಂತೋಷ ಸಿಎಂ ಆಗುತ್ತಾರೆ ಎಂಬ ವದಂತಿಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದರು.
 
ಇದಕ್ಕೆ ಗರಂ ಆದ ಈಶ್ವರಪ್ಪ ಅದರಲ್ಲಿ ಅರ್ಥವೇ ಇಲ್ಲ. ಯಡಿಯೂರಪ್ಪ ಮುಂದಿನ ಮೂರು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ಸಂತೋಷ ಮುಖ್ಯಮಂತ್ರಿ ಆಗುತ್ತಾರೆಂದು ತಲೆ ಕೆಟ್ಟವರೇ ಹೇಳಬೇಕಲ್ಲ. ಮತ್ಯಾರು ಹೇಳಲು ಸಾದ್ಯ ಎಂದರು.
ಏನೇನೋ ಪ್ರಶ್ಮೆ ಕೇಳಿದರೆ ನಾನೇನು ಹೇಳಲಿ. ಮುಂದಿನ ಅವಧಿಗೆ ಯಡಿಯೂರಪ್ಪ ನವರೇ ಸಿಎಂ ಆಗಿರುತ್ತಾರೆ ಅನುಮಾನ ಬೇಡ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.
 
ಇದೆಲ್ಲಾ ಒಂದುಕಡೆಯಾದರೆ ಅತ್ತ ಕಡೆ ಕಾಂಗ್ರೇಸ್ ಜೆಡಿಎಸ್ ಭಾಯಿ ಭಾಯಿ ಎನ್ನುತ್ತಿದ್ದು ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿಗಳು ಭಾರೀ ಚರ್ಚೆಯಾಗುತ್ತಿರುವ. ಉಪ ಚುನಾವಣೆಯ ಫಲಿತಾಂಶ ಇದೀಗ ಕುತೂಹಲ ಮೂಡಿಸಿದೆ.

Find out more: