ಸಂಚಲನ ಮೂಡಿಸಿದ್ದ ಉಪ ಚುನಾವಣೆ ಕೊನೆಗೂ ಗುರುವಾರವಷ್ಟೇ ಮುಕ್ತಾಯವಾಗಿದ್ದು, ಅಷ್ಟು ದಿನ ಇನ್ನಿಲ್ಲದ ಭರವಸೆಗಳನ್ನು ನೀಡುತ್ತಾ ವಾದ ಪ್ರತಿವಾದ ಗಳಲ್ಲಿ ಪ್ರಚಾರದಲ್ಲಿ ಫುಲ್ ಬ್ಯೂಸಿಯಾಗಿದ್ದ ಅನರ್ಹರು ಹಾಗೂ ಇತರೆ ಅಭ್ಯರ್ಥಿಗಳು ಇದೀಗ ರಿಲಾಕ್ಸ್ ಮೂಡ್ ಗೆ ತೆರಳಿದ್ದಾರೆ. ರಿಲಾಕ್ಸ್ ಮೂಡ್ ನಲ್ಲಿಯೂ ಎಂಜಾಯ್ ಮಾಡದೇ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದಾರೆ. ಯಾರಾರು ಏನೇನು ಮಾಡಿದ್ದಾರೆ ಎಂದು ನೀವೆ ನೋಡಿ. 
 
 ಕೆಆರ್​ ಪೇಟೆ ಕಾಂಗ್ರೆಸ್​ ಅಭ್ಯರ್ಥಿ  ಕೆ.ಬಿ.ಚಂದ್ರಶೇಖರ್ ಕೆಆರ್‌ಪೇಟೆಯ ತಮ್ಮ ನಿವಾಸದಲ್ಲಿ ಮೊಮ್ಮಗಳೊಂದಿಗೆ ಆಟವಾಡುವ ಮೂಲಕ ಇಷ್ಟು ದಿನ ಇದ್ದ ಉಪಚುನಾವಣೆಯ ಜಂಜಾಟವನ್ನು ಮರೆತು ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದಾರೆ ಕುಳಿತಿದ್ದಾರೆ. ಸಮೀಕ್ಷೆಯ ಕುರಿತು ಮಾತನಾಡಿದ ಚಂದ್ರಶೇಖರ್ ನನ್ನ ಜನರ ನಾಡಿಮಿಡಿತದ ಸಮೀಕ್ಷೆ ನನಗೆ ಗೊತ್ತು. ನಾನು ಈ ಬಾರಿ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಆತ್ಮ ವಿಶ್ವಾಸದ ಮಾತುಗಳಾಡಿದರು.
 
ಇನ್ನು ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಕೆಆರ್‌ಪೇಟೆಯ ತಮ್ಮ ನಿವಾಸದಲ್ಲಿ ಕಾರ್ತಕರ್ತರು ಹಾಗೂ ತಮ್ಮ ಹಿತೈಷಿಗಳ ಜೊತೆ ಉಪಚುನಾವಣೆಯ ಬಗ್ಗೆ ಚರ್ಚೆ ಮಾಡುವುದರ ಮೂಲಕ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ನಾವು 25ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದರು. . ಇನ್ನೂ ಬಿಜೆಪಿ ಅಭ್ಯರ್ಥಿ ಕೆ‌.ಸಿ.ನಾರಾಯಣಗೌಡ ಬೆಂಗಳೂರಿನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ.  ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಶುಕ್ರವಾರ  11ಘಂಟೆಗೆ ಎದ್ದು ಕಾರ್ಯಕರ್ತರ ಜೊತೆ ಮನೆಯಲ್ಲೆ ಚರ್ಚೆ ನಡೆಸಿದರು.  ಜೊತೆಗೆ ಇಷ್ಟು ದಿನ ಬೆಳ್ಳಂಬೆಳಗ್ಗೆ ಪ್ರಚಾರಕ್ಕೆ ಎದ್ದು ಹೋಗುತ್ತಿದ್ದ ಹೆಬ್ಬಾರ್ ಇವತ್ತು ತಮ್ಮ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಮನೆಗೆ ಕರೆದು ಚರ್ಚೆ ನಡೆಸಿ, ಸೋಲುಗೆಲುವಿನ ಲೆಕ್ಕಾಚಾರದ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚಿಸಿದರು. ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಹಳ್ಳಿ, ಕೂಡ ವಿಶ್ರಾಂತಿ ಮೂಡ್​ನಲ್ಲಿದ್ದು, ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ತಮ್ಮ ಪರ ದುಡಿದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. 

Find out more: