ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿ. ಎಸ್ ಯಡಿಯೂರಪ್ಪ ನವರ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಸೋಮವಾರದ ಉಪಚುನಾವಣಾ ಫಲಿತಾಂಶದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ಸೇಫ್ ಆಗಿದೆ. ಆದರೆ ಈ ಗೆಲುವಿನ ಹಿಂದಿರುವ ಯಡಿಯೂರಪ್ಪ ಅವರ ಮಾಸ್ಟರ್ ಪ್ಲಾನ್ ಏನಾಗಿತ್ತು ಗೊತ್ತಾ! ರಾಜ್ಯ ಉಪಚುನಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಕುಮಾರಸ್ವಾಮಿ ಸೊನ್ನೆ ಸುತ್ತಲು ಕಾರಣವೇನು ಗೊತ್ತಾ. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್. 
 
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಉಪ ಚುನಾವಣೆ ಫಲಿತಾಂಶವು ಸೋಮವಾರ ಹೊರ ಬಿದ್ದಿದ್ದು, ರಾಜಕೀಯದಲ್ಲಿ ಎಲ್ಲವನ್ನು ತಲೆಕೆಳಗಾಗುವಂತೆ ಮಾಡಿದೆ. ಘಟಾನುಘಟಿ ಗಳು ಮಕಾಡೆ ಮಲಗಿದ್ದಾರೆ. ಹೌದು, ಉಪ ಚುನಾವಣೆಯ 15 ಕ್ಷೇತ್ರಗಳಲ್ಲಿ ಒಟ್ಟು 12 ಬಿಜೆಪಿ, 2 ಕಾಂಗ್ರೆಸ್, 0 ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 
 
ಈ ಭಾರೀ ಹೇಗಾದರೂ ಮಾಡಿ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ  ಮಾಸ್ಟರ್ ಪ್ಲಾನ್ ವೊಂದನ್ನು ಸಿದ್ದಪಡಿಸಿದ್ದರು. ಅನರ್ಹರ  ವೈಯುಕ್ತಿಕ ವರ್ಚಸ್ಸು, ಬಿಜೆಪಿಯ ಗುಂಪು ಸಂಘಟನೆ, ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಕಾಂಗ್ರೆಸ್ ನ ಆಂತರಿಕ ಕಚ್ಚಾಟ, ಜೆಡಿಎಸ್ ನ ಕಣ್ಣೀರು, ಅಭಿವೃದ್ಧಿಗೆ ಭರವಸೆಗಳ ಮಹಾಪೂರದಿಂದಲೇ ಬಿಜೆಪಿಯನ್ನು ಕೊನೆಗೂ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ವಿಶ್ವನಾಥ್, ಎಂಟಿಬಿ ಸೋಲು ಬೇಸರ ತರಿಸಿದೆ  ಎಂದಿದ್ದಾರೆ. 
 
ಇಂದು ಕರ್ನಾಟಕದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಹುಮತ ನೀಡಿದ್ದ ಜನರಿಗೆ ಯಾರು(ಕಾಂಗ್ರೆಸ್-ಜೆಡಿಎಸ್) ಮೋಸ ಮಾಡಿದ್ದಾರೋ ಅವರಿಗೆ ಮತದಾರರು ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
 
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜನರು ಇಂದು ಸ್ಪಷ್ಟವಾಗಿ ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ ಜನರು ಕಾಂಗ್ರೆಸ್ ಪಕ್ಷಕ್ಕೆ ಶಿಕ್ಷೆ ನೀಡಿದ್ದಾರೆ. ಮತದಾರರು ನೀಡಿರುವ ಜನಾದೇಶವನ್ನು ಧಿಕ್ಕರಿಸಿ ಯಾರು ಅಧಿಕಾರಕ್ಕೇರಲು ಪ್ರಯತ್ನಿಸುತ್ತಾರೋ ಈ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳಿಗೂ ಇದೊಂದು ತಕ್ಕ ಪಾಠದ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.

Find out more: