ಹೊಸದಿಲ್ಲಿ: ಲೋಕಸಭಾ ಚುನಾವಣೆ ಫಲಿತಾಂಶ ನಂತರ ರಾಷ್ಟ್ರದಲ್ಲೆ ಮಾಯವಾಗಿದ್ದ ರಾಹುಲ್ ಗಾಂಧಿ ಇದೀಗ ಬಿಜೆಪಿ ವಿರುದ್ದ ಮತ್ತೇ ಹುಡುಕಲು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ 'ರೇಪ್‌ ಇನ್‌ ಇಂಡಿಯಾ' ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ದಿಲ್ಲಿಯ ರಾಮ್‌ಲೀಲಾ ಮೈದಾನಲ್ಲಿ ನಡೆದ 'ಭಾರತ್‌ ಬಚಾವೋ' ರ‍್ಯಾಲಿಯಲ್ಲಿ ಮಾತನಾಡಿದ ಅವರು ವಿಡಿ ಸಾವರ್ಕರ್‌ ಬಗ್ಗೆ ಅಪಹಾಸ್ಯ ಮಾಡಿದ್ದು,”ನಾನು ರಾಹುಲ್‌ ಸಾವರ್ಕರ್‌ ಅಲ್ಲ. ಸತ್ಯ ಮಾತನಾಡಿದ್ದಕ್ಕೆ ಕ್ಷಮೆ ಕೇಳಲ್ಲ,” ಎಂದಿದ್ದು, ರಾಷ್ಟ್ರದೆಲ್ಲೆಡೆ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. 
 
 ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಬಿ)ಮೂಲಕ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಮಾವೇಶದ ಭಾಷಣದುದ್ದಕ್ಕೂ ಅವರು ಪ್ರಧಾನಿ ಮತ್ತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. 
 
“ನಿನ್ನೆ ಸಂಸತ್‌ನಲ್ಲಿ ಬಿಜೆಪಿ ನಾಯಕರು ನಾನು ಕ್ಷಮೆ ಕೇಳಬೇಕು ಎಂದರು. ಆದರೆ ನಾನು ರಾಹುಲ್‌ ಸಾವರ್ಕರ್‌ ಅಲ್ಲ ಎಂಬುದನ್ನು ಅವರಿಗೆ ಹೇಳಲು ಇಚ್ಛಿಸುತ್ತೇನೆ. ನಾನು ಕ್ಷಮೆ ಕೇಳಲ್ಲ. ಸತ್ಯ ಹೇಳಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ,” ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದು ಈ ವಾದ-ಪ್ರತಿವಾದ ಯಾವ ಹಂತಕ್ಕೆ ತಲುಪುತ್ತದೆ ಎಂಬುದು ನೋಡಬೇಕಾಗಿದೆ.
 
ರಾಷ್ಟ್ರದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿ,  ಈ ದೇಶದ ಶಕ್ತಿಯೇ ಆರ್ಥಿಕತೆ. ನಾವು ಹೇಗೆ ಶೇಕಡಾ 9ಜಿಡಿಪಿ ತಲುಪಿದೆವು ಎಂದು ಹಲವು ದೇಶಗಳು ಅಚ್ಚರಿಗೊಂಡಿದ್ದವು. ಆದರೆ ಇವತ್ತು ಈರುಳ್ಳಿಯನ್ನು ಕೆಜಿಗೆ 200ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಭಾರತದ ಆರ್ಥಿಕತೆಯನ್ನು ಮೋದಿ ಏಕಾಂಗಿಯಾಗಿ ನಾಶಪಡಿಸಿದ್ದಾರೆ. ಡಿಮಾನಟೈಸೇಷನ್‌ ಮತ್ತು ತಪ್ಪುಗಳಿಂದ ಕೂಡಿದ ಜಿಎಸ್‌ಟಿ ಅನುಷ್ಠಾನ ಸರಿಯಾಗಿಲ್ಲ. “2016ರಲ್ಲಿ ರಾತ್ರಿ 8ಗಂಟೆಗೆ ಅವರು ಟಿವಿಯಲ್ಲಿ ಬಂದು 500 ಮತ್ತು 1000ರೂಪಾಯಿ ನೋಟನ್ನು ಅಮಾನ್ಯ ಮಾಡಿದ್ದು ನಿಮಗೆ ನೆನಪಿರಬಹುದು. ಈ ಮೂಲಕ ಅವರು ಭಾರತದ ಆರ್ಥಿಕತೆ ಮೇಲೆ ಬಲವಾದ ಹೊಡೆತ ನೀಡಿದರು. ಅಂದಿನಿಂದ ಆರ್ಥಿಕತೆ ಚೇತರಿಸಿಕೊಂಡಿಲ್ಲ.  ಪೌರತ್ವ ತಿದ್ದುಪಡಿ ಕಾಯ್ದೆಯು ಸಹ ಸರಿಯಾಗಿಲ್ಲ ಎಂದು ಮೋದಿ ವಿರುದ್ಧ ಗುಡುಗಿದ್ದಾರೆ.

Find out more: