ಉಡುಪಿ: ಪ್ರಸ್ತುತ ರಾಷ್ಟ್ರದ್ಯಂತ ಪೌರತ್ವ ಕಾಯಿದೆ ವಿರುದ್ದ ಜನರು ರೊಚ್ಚಿಗೆದ್ದಿದ್ದಾರೆ. ರಾಜ್ಯದ ಮಂಗಳೂರಿನಲ್ಲಿಯೂ ಸಹ ಕಳೆದೆರಡು ದಿನಗಳಿಂದ ಪ್ರತಿಭಟನೆ ಜೋರಾಗಿತ್ತು. ಪ್ರತಿಭಟನೆ ವಿಕೋಪಕ್ಕೆ ತೆರಳಿ ಗಲಭೆಯುಂಟಾಯಿತು. ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಪರಿಣಾಮವಾಗಿ ಪೋಲಿಸರ ಫೈರಿಂಗ್ ಗೆ ಇಬ್ಬರು ಯುವಕರು ಬಲಿಯಾದರು. ಇದೀಗ ಮಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಜೊತೆಗೆ ಕರ್ಪ್ಯೂ ಹೇಳಿದ್ದಾರೆ. ಬೂದಿಮುಚ್ಚಿದ ಕೆಂಡದಂತಿರುವ ಮಂಗಳೂರು ಪರಿಸ್ಥಿತಿ ಹಾಗೂ ಕರ್ಪ್ಯೂ ಬಗ್ಗೆ ಮಾಜಿ ಸಚಿವ ಯು. ಟಿ ಖಾದರ್ ಏನ್ ಹೇಳಿದ್ದಾರೆ ಗೊತ್ತಾ! 
 
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್, ಯಾವುದೇ ರಾಜಕೀಯ ಪ್ರೇರಿತ ಹೇಳಿಕೆ ಕೊಡುವುದಿಲ್ಲ. ಮಂಗಳೂರು ಶಾಂತಿಯುತವಾಗಿ ಇರಲು ಬಿಡಿ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನನ್ನ ಮನವಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಬೇಡಿ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದೆ. ಅದನ್ನು ಬೇರೆಯವರ ತಲೆಗೆ ಕಟ್ಟುವುದು ಬೇಡ. ಜವಾಬ್ದಾರಿಯುತ ಸ್ಥಾನಕ್ಕೆ ಅದು ಶೋಭೆ ತರುವುದಿಲ್ಲ. ಮುಖ್ಯಮಂತ್ರಿ, ಗೃಹಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ತನಿಖೆ ಮಾಡುವುದಾಗಿ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. 
 
ಅನೇಕರು ನನ್ನ ವಿರುದ್ದ ಟೀಕೆ ಮಾಡಿದ್ದಾರೆ. ನನ್ನ ವಿರುದ್ಧ ಬಂದ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ. ಈ ಹಿಂದಿನಿಂದಲೂ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡಿದ್ರು. ಹಿಂದೆ ನನ್ನನ್ನು ಜೈಲಿಗೆ ಹಾಕುವ ಪ್ರಯತ್ನ ಮಾಡಿದ್ರು. ನನ್ನ ಕ್ಷೇತ್ರದ ಜನ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಾಗೆ ಮಾಡಿದ್ದಾರೆ. ಇವರು ಬಿಸಾಡುವ ಪ್ರತಿಕಲ್ಲು ನನ್ನ ಏಳಿಗೆಗೆ ಮೆಟ್ಟಿಲಾಗಲಿ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ನನ್ನ ಕ್ಷೇತ್ರದಲ್ಲಿ ಗಲಭೆ ಆಗಿರೋದಾಗಿ ಹೇಳಿದ್ದಾರೆ. ಗೊತ್ತಿದ್ದು ಹೇಳಿದ್ದ, ಗೊತ್ತಿಲ್ಲದೇ ಮಾತನಾಡುತ್ತಿದ್ದಾರಾ ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲೆ ಗಲಭೆ ಆಗಿದೆ. ಬೇಕಂತಲೇ ರಾಜಕೀಯ ಹೇಳಿಕೆ ಕೊಡುತ್ತಿದ್ದಾರ ಗೊತ್ತಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದರು.
 
 
 
 
 

Find out more: