ಹಾಸನ: ಕೆಲವರಿಗೆ ನಾನೇ ಟಾರ್ಗೆಟ್ ಆಗಿದ್ದೇನೆ. ನನ್ನ ಕ್ಷೇತ್ರದಲ್ಲಿ ನಾನು ಹೇಳಿದ ಕೆಲಸಗಳೇ ನಡೆಯುತ್ತಿಲ್ಲ, ಇದು ಎಷ್ಟರಮಟ್ಟಿಗೆ ಸರಿ. ನಾನು ಪ್ರತಿಭಟನೆ ನಡೆಸುತ್ತೇನೆ ಎಂದು ಶಾಸಕ ರೇವಣ್ಣ ಆಡಳಿತ ಪಕ್ಷದ ಮೇಲೂ, ಕೆಲವು ಅಧಿಕಾರಿಗಳ ಮೇಲೆ ಫುಲ್ ಗರಂ ಆಗಿದ್ದಾರೆ. 
 
ಹೌದು, ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಮಾಜಿ ಸಚಿವ ರೇವಣ್ಣ, ಸ್ಲ್ಂ ಅಂತಾ ನನ್ನ ಕ್ಷೇತ್ರದ ಕೆಲ ಭಾಗವನ್ನ ಡಿಕ್ಲೇರ್ ಮಾಡಿದ್ರು, ಆದರೆ ಅದರ ಕೆಲಸ ಸರಿಯಾಗಿ ನಡೆಯುತ್ತಿಲ್ಲವೆಂದು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಹೊಳೆನರಸೀಪುರದ 12 ಪುರಸಭೆ ಸದಸ್ಯರುಗಳ ಜೊತೆ ಬಂದ ರೇವಣ್ಣ, ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಒಳಗೆ ಕೂತು ಮಾತನಾಡೋಣ ಬನ್ನಿ ಎಂದು ಜಿಲ್ಲಾಧಿಕಾರಿ ಕರೆದರೂ ಕೂಡ ಒಳಗೆ ಹೋಗದ ರೇವಣ್ಣ, ನಾನು ಧರಣಿ ಕೂರುತ್ತೇನೆ, ನನ್ನ ಕೆಲಸ ಮಾಡಿಕೊಡಿ ಸ್ವಾಮಿ, ನಿಮ್ಮ ಸಿಗ್ನೇಚರನ್ನು ಹೇಗೆ ಫೋರ್ಜರಿ ಮಾಡಿದ್ರು ಉತ್ತರ ಕೊಡ್ರಿ. ನಾನು ಪೌರಕಾರ್ಮಿಕರ ಕೆಲಸಕ್ಕೆ ಬಂದಿರುವುದು, ದೊಡ್ಡವರ ಕೆಲಸಕ್ಕೆ ಬಂದಿಲ್ಲ ಸ್ವಾಮೀ ಎಂದು ಪ್ರತಿಭಟನೆ ನಡೆಸಿದ್ದಾರೆ. ಆ ನಗರವನ್ನು ಸ್ಲಂ ಎಂದು ಡಿಕ್ಲೇರ್ ಮಾಡಿ ಎಂದು ಪಟ್ಟು ಹಿಡಿದರು. 
 
ಇನ್ನು ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಗೋಲಿಬಾರ್ ಆಗಿ ಇಬ್ಬರು ಸಾವಿಗೀಡಾಗಿದ್ದಾರೆ. ಇದನ್ನು ನ್ಯಾಯಾಂಗತನಿಖೆ ಮಾಡಬೇಕು. ಸರ್ಕಾರ ತಿಳುವಳಿಕೆ ಮಾಡಬೇಕಿತ್ತು, ಸಡನ್ ಡಿಸಿಶನ್ ತೆಗೆದುಕೊಂಡಿದ್ದಾರೆಂದು ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.ಅಮಾಯಕರಿಗೆ ಗುಂಡು ಹೊಡೆಯುತ್ತಾರೆ. ಕೆಲವು ಕಡೆಪೊಲೀಸರು ಕಲ್ಲು ತೂರಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಸರ್ಕಾರ ಬರಿ ಹತ್ತು ಲಕ್ಷ ಕೊಡುತ್ತಲ್ವ ರೀ ಪರಿಹಾರ, ನಿನ್ನೆ ಕುಮಾರಸ್ವಾಮಿ 5ಲಕ್ಷ ಕೊಟ್ಟಿದ್ದಾರೆ ಕಣ್ರೀ ಎಂದು ಸೋಹದರನ ಪರ ರೇವಣ್ಣ ಬ್ಯಾಟ್ ಬೀಸಿದ್ದಾರೆ. ಒಂದು ಗುಂಡು ಹೊಡೆಸಿಕೊಂಡರೆ ಕೇವಲ ಹತ್ತು ಲಕ್ಷ ಕೊಡುತ್ತಾರೆ . ಜೀವಕ್ಕೆ ಬೇಲೆ ಇಲ್ಲವಾ..? ಹಾಗಾದರೆ ಗುಂಡು ಹೊಡೆಸಿಕೊಳ್ಳಲಿ ನಾನು ಹತ್ತು ಲಕ್ಷ ಕೊಡುತ್ತೇನೆ ಎಂದು ಸರ್ಕಾರದ ವಿರುದ್ದ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ. ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಜೆಡಿಎಸ್‌ನಿಂದ ಪ್ರತಿಭಟನೆ ಮಾಡುತ್ತೇವೆಂದು ಗುಡುಗಿದರು.

Find out more: