ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರು ಎಂಬುದು. ಇದೀಗ ಆ ಸಮಸ್ಯೆ ತಾರಕಕ್ಕೇರಿದೆ. ಹೌದು, ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರವೇ ಸಿಗುತ್ತಿಲ್ಲ ಎಂಬುದು ದೊಡ್ಡ ಮಟ್ಟದಲ್ಲಿ ಭಗಿಲೆದ್ದಿದೆ. ಅಸಲು ಇದಕ್ಕೆ ಕಾರಣವೇನು, ಇದೀಗ ಈ ಪ್ರಶ್ನೆ ಉದ್ಭವಿಸಿರುವುದು ಆದರೂ ಯಾಕೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ. 
 
ರಾಜ್ಯ ಕಾಂಗ್ರೆಸ್​ನಲ್ಲಿ ವಲಸಿಗ ಹಾಗೂ ಮೂಲ ಕಾಂಗ್ರೆಸ್ಸಿಗರ ನಡುವಿನ ಕಿತ್ತಾಟ ಮತ್ತಷ್ಟು ಬಿಸಿಯಾಗಿರುವುದು ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ. ಹೌದು, ಎರಡು ಬಣಗಳ ನಡುವೆ ವೈಯುಕ್ತಿಕ ಸಂಘರ್ಷ ಇದೀಗ ಮುಗಿಲು ಮುಟ್ಟಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಅವರನ್ನ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದೆ. ಆದರೆ, ಅಧಿಕೃತವಾಗಿ ಘೋಷಣೆಗೂ ಮುನ್ನವೇ ಅಧ್ಯಕ್ಷ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ಅವರ ಬಣ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮೂಲಕ ಒತ್ತಡ ತರುವ ಪ್ರಯತ್ನವನ್ನ ನಡೆಸಿದೆ ಎಂಬುವ ಮಾತು ಬಲವಾಗಿ ಕೇಳಿ ಬರುತ್ತಿವೆ. ಹೌದು, ಸಿದ್ದರಾಮಯ್ಯ ಅವರು ತೆರೆಮರೆಯಲ್ಲಿ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿರುವ ಪ್ರಯತ್ನಗಳು ಕೇಳಿಬರುತ್ತಿವೆ. 
 
ಡಿಕೆಶಿಗೆ ಅಧ್ಯಕ್ಷ ನೀಡಿದರೆ ಪಕ್ಷದ ಮೇಲಿನ ಹಿಡಿತ ತಪ್ಪಿಲಿದೆ ಎಂಬ ಭಯದಿಂದ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಮಾಜಿ ಸಚಿವ ಎಂ.ಬಿ ಪಾಟೀಲ್​ ಅಥವಾ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರ ಹೆಸರನ್ನ ಮುಂದಿಟ್ಟಿದೆ. ಹೀಗಾಗಿ ಸಿದ್ದರಾಮಯ್ಯ ತಂತ್ರಕ್ಕೆ ಮೂಲಕಾಂಗ್ರೆಸ್ಸಿಗರು ಪ್ರತಿತಂತ್ರ ಹೂಡ್ತಿದ್ದಾರೆ. ಸಿದ್ದರಾಮಯ್ಯ ಆಪ್ತರಿಗೆ ಸಿಕ್ಕರೆ ಸಿದ್ದು ಕೈ ಮೇಲಾಗಲಿದೆ ಎಂದು ಆತಂಕಕ್ಕೊಳಗಾಗಿದೆ.
 
ಹೀಗಾಗಿ ಡಿಕೆಶಿಯನ್ನೇ ಮಾಡಿ ಇಲ್ಲ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಅವರಿಗೆ ಆ ಸ್ಥಾನ ನೀಡಿ ಎಂದು ಲಾಬಿ ಪ್ರಾರಂಭಿಸಿದೆ. ಈಗಾಗಲೇ ಜಿ.ಸಿ ಚಂದ್ರಶೇಖರ್ ಅವರು ಕಚೇರಿ ಹಾಗೂ ಕೆಕೆಗೆಸ್ಟ್ ಹೌಸ್​ನಲ್ಲಿ ಎರಡು ಸಭೆಗಳನ್ನೂ ನಡೆಸಿದೆ. ಎರಡೂ ಬಣಗಳ ಈ ತಿಕ್ಕಾಟದಿಂದ ಅಧ್ಯಕ್ಷರ ನೇಮಕ ಮತ್ತಷ್ಟು ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಆಗ ಕೇಳಿಬಂದಿವೆ. ಎಲ್ಲಾ ಸರಿಯಿದ್ದರೆ ಇಷ್ಟೋತ್ತಿಗಾಗಲೇ ಅಧ್ಯಕ್ಷ ಹುದ್ದೆ ಭರ್ತಿಯಾಗಬೇಕಿತ್ತು.
 
 
 
 
 

Find out more: