ಬೆಂಗಳೂರು: ಸೋಮವಾರ ಕೇಂದ್ರ ಸರ್ಕಾರದಿಂದ 1870ಕೋಟಿ ರೂಪಾಯಿಗಳು ನೆರೆ ಪರಿಹಾರದ ಎರಡನೇ ಕಂತಾಗಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತ್ರ ಅಭಿನಂದನೆ ಸಲ್ಲಿಸಿಯೂ ಕೂಡ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಹೌದು, ಆ ಬಗ್ಗೆ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ ನೋಡಿ. 
 
ಪ್ರವಾಹದಿಂದ  ತತ್ತರಿಸಿದ್ದ ರಾಜ್ಯಕ್ಕೆ 1869 ಕೋಟಿ ಪರಿಹಾರ ಘೋಷಣೆ ಮಾಡಿದ ಕೇಂದ್ರ ಸರಾಕಾರಕ್ಕೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತೆರಿಗೆ ಪಾಲು, ನರೇಗಾ ಅನುದಾನ ಹಾಗೂ ಬರ ಪರಿಹಾರ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.ರಾಜ್ಯಕ್ಕೆ ನೆರೆ ಪರಿಹಾರ ನೀಡಿದಕ್ಕಾಗಿ ಟ್ವಿಟ್ಟರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿರುವ ಎಚ್‌ಡಿಕೆ ನೆರೆ ಪರಿಹಾರವಲ್ಲದೆ ನ್ಯಾಯೋಚಿತವಾಗಿ ಬರಬೇಕಾಗಿರುವ ಅನುದಾನ ಸಾಕಷ್ಟಿದೆ ಎಂದಿದ್ದಾರೆ.
 
“ ಕೇಂದ್ರ ಸರ್ಕಾರ ಅಳೆದು ತೂಗಿ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಕೊಟ್ಟಿದೆ. ಬಹುಶಃ ಶಿವಕುಮಾರ ಶ್ರೀಗಳು ಮೆಟ್ಟಿದ ಭೂಮಿ ಮೋದಿ ಅವರಿಗೆ ಜ್ಞಾನೋದಯ ಮಾಡಿಸಿರಬಹುದು. ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ “ನೆರೆ ಪರಿಹಾರವಲ್ಲದೇ ರಾಕ್ಕೆ ನ್ಯಾಯೋಚಿತವಾಗಿ ಬರಬೇಕಾದ ಅನುದಾನ ಸಾಕಷ್ಟಿದೆ. ತೆರಿಗೆ ಪಾಲು, ನರೇಗಾ ಅನುದಾನ, ಬರ ಪರಿಹಾರ. ಇವುಗಳನ್ನೆಲ್ಲ ಯಾವಾಗ ಕೊಡುತ್ತೀರಿ ಮೋದಿ ಅವರೇ?” ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
 
6ತಿಂಗಳ ಹಿಂದೆ ಪ್ರವಾಹದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರಕಾರ ಮೊದಲ ಹಂತದಲ್ಲಿ 1200 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಆದರೆ ಹೆಚ್ಚುವರಿ ಹರಿಹಾರ ಹಾಗೂ ವಿಶೇಷ ಪ್ಯಾಕೇಜ್ ನೀಡಲು ವಿರೋಧ ಪಕ್ಷಗಳು ಒತ್ತಾಯಿಸಿದ್ದವು.
 
ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಮಕೂರು ರೈತ ಸಮಾವೇಶದಲ್ಲಿ ವೇದಿಕೆಯಲ್ಲಿ ಸಿಎಂ ಬಿಎಸ್‌ವೈ ಹೆಚ್ಚುವರಿ ಪರಿಹಾರ ನೀಡಲು ಆಗ್ರಹಪೂರ್ವಕ ಮನವಿ ಸಲ್ಲಿಸಿದ್ದರು. ಇದೀಗ 1870 ಕೋಟಿ ಬಿಡುಗಡೆಯಾಗಿದ್ದು, ಎಚ್.ಡಿ.ಕೆ ಅಭಿನಂದಿಸಿದ್ದು, ಜೊತೆಗೆ ಉಳಿದ ಅನುದಾನಗಳನ್ನು ಯಾವಾಗ ಕೊಡ್ತೀರಾ ಎಂದಿದ್ದಾರೆ.

Find out more: