ಕೊಪ್ಪಳ: ಕಾಂಗ್ರೆಸ್ ಇಂದು ದೇಶದಲ್ಲಿ ಅನಾಥವಾಗಿದೆ. ಜನರು ನೇರವಾಗಿ ಕಾಂಗ್ರೆಸ್ ಅನ್ನು ತಿರಸ್ಕರಿಸಿ ದ್ದಾರೆ. ಕಾಂಗ್ರೆಸ್ ಪಕ್ಷ ಹೆಂಡತಿ, ತಾಯಿಯನ್ನು ಮಾತ್ರ ಅನುಮಾನಿಸಿಲ್ಲ. ಹೀಗಾಗಿ, ತಾಯಿ, ಹೆಂಡತಿಯನ್ನೂ ಅನುಮಾನಿಸುವ ಕೆಟ್ಟ ಕಾಯಿಲೆ ಕಾಂಗ್ರೆಸ್ ಗೆ ಬಾರದಿರಲಿ ಎಂದು ಬಿಜೆಪಿ ಸಚಿವರೊಬ್ಬರು ಹೇಳಿಕೆ ನೀಡಿದ್ದು ಕಾಂಗ್ರೆಸ್ ಫುಲ್ ಗರಂ ಆಗಿದೆ. ಹೌದು, ಯಾರು ಆ ಸಚಿವ ಎಂದು ನಾವ್ ಹೇಳ್ತೀವಿ ಕೇಳಿ.
ಕಾಂಗ್ರೆಸ್ ಪಕ್ಷಕ್ಕೆ ತಾಯಿ, ಪತ್ನಿಯನ್ನು ಅನುಮಾನಿಸುವ ಕೆಟ್ಟ ಕಾಯಿಲೆ ಬಾರದಿರಲಿ ಎಂದು ಹೇಳಿದ್ದು ಸಚಿವ ಸಿ.ಟಿ.ರವಿ. ಹೌದು, ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರು ಇತ್ತೀಚೆಗೆ ಇವಿಎಂ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ. ಟಿ ರವಿ, ಕಾಂಗ್ರೆಸ್ ಇವಿಎಂ ಮೇಲೆ ಪದೇ ಪದೇ ಅನುಮಾನ ವ್ಯಕ್ತಪಡಿಸುತ್ತಿದೆ ಎಂದರು. ಕಾಂಗ್ರೆಸ್ ಪಕ್ಷ ಹೆಂಡತಿ, ತಾಯಿಯನ್ನು ಮಾತ್ರ ಅನುಮಾನಿಸಿಲ್ಲ. ಹೀಗಾಗಿ, ತಾಯಿ, ಹೆಂಡತಿಯನ್ನೂ ಅನುಮಾನಿಸುವ ಕೆಟ್ಟ ಕಾಯಿಲೆ ಕಾಂಗ್ರೆಸ್ ಗೆ ಬಾರದಿರಲಿ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತ ಪಡಿಸಿದರು. ಶಾಸಕ ಅಮರೇಗೌರ ಬಯ್ಯಾಪುರ ಗೆದ್ದಿರುವುದು ಇವಿಎಂನಿಂದ ಎಂಬುದನ್ನು ನೆನಪಿಡಬೇಕು ಎಂದ ಸಿ.ಟಿ. ರವಿ, ಕಾಂಗ್ರೆಸ್ ಪಕ್ಷ ಎಲ್ಲದರಲ್ಲೂ ಅನುಮಾನ ಪಡುತ್ತಿದೆ. ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ಅನುಮಾನ ವ್ಯಕ್ತಪಡಿಸುತ್ತಾರೆ. ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ ಎಂದು ಗುಡುಗಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಚಿವ ಸಿ.ಟಿ.ರವಿ ಅವರು ಬುದ್ಧಿವಂತರು. ಆದ್ದರಿಂದಲೇ ಅದಕ್ಕೆ ಹಾಗೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ. ಅಭಿಪ್ರಾಯಕ್ಕೆ ಮನ್ನಣೆ ನೀಡಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದ ಬಯ್ಯಾಪುರ, ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಪೌರತ್ವ ಕಾಯಿದೆ ಮೂಲಕ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಯ್ಯಾಪುರ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜಾರಿಗೊಳಿಸಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಫುಲ್ ಗರಂ ಆಗಿದೆ.