ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಐದು ದಿನಗಳ ಕಾಲ ದಾವೋಸ್ ಗೆ ಭೇಟಿ ನೀಡಲಿದ್ದಾರೆ. ಅದಕ್ಕಾಗಿ ರವಿವಾರ ಯಡಿಯೂರಪ್ಪ ನವರು ಸೂಟು ಬೂಟು ಹಾಕಿಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಲೈಟ್ ಹತ್ತಿದ್ದಾರೆ. ಯಾಕೆ ಗೊತ್ತಾ? ಅಲ್ಲಿ ನಡೆಯೋ ಕಾರ್ಯಕ್ರಮವೇನು ಗೊತ್ತಾ? ಇಲ್ಲಿದೆ ನೋಡಿ ಉತ್ತರ. 
 
ಸ್ವಿಜ್ಜರ್‌ಲ್ಯಾಂಡ್‌ನ ಅತೀ ಸುಂದರ ಬೆಟ್ಟ ಪ್ರದೇಶವಾದ ದಾವೋಸ್‌ನಲ್ಲಿ ಐದು ದಿನಗಳ ಕಾಲ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಿಎಂ ಬಿಎಸ್‌ ಯಡಿಯೂರಪ್ಪ ತೆರಳಿದಿದ್ದಾರೆ. ರಾಜ್ಯ ರಾಜಧಾನಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಡಾ. ಆಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿ ಮುಖಂಡರು ಸಿಎಂ ಬಿಎಸ್‌ವೈ ಅವರನ್ನು ದಾವೋಸ್‌ ಗೆ ಶುಭಕೋರಿ ಬೀಳ್ಕೊಟ್ಟರು. ತಮ್ಮ ಎಂದಿನ ಬಿಳಿ ಉಡುಪು ಬದಲಾಗಿ ಕರಿ ಸೂಟು ಧರಿಸಿದ ಬಿ.ಎಸ್‌.ವೈ ಮಿಂಚಿದರು. ಸಹಜವಾಗಿ ಸಿಎಂ ಯಾಕಾಗಿ ದಾವೋಸ್‌ ಪ್ರಯಾಣ ಮಾಡಿದರು ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಬಿಎಸ್‌ವೈಗೆ ಏನು ಕೆಲಸ ಗೊತ್ತಾ ವರ್ಲ್ಡ್ ಎಕನಾಮಿಕ್ ಫೋರಂ ಪ್ರತೀ ವರ್ಷ ಜನವರಿ ತಿಂಗಳ ಕೊನೆಯಲ್ಲಿ ಸ್ವಿಜ್ಜರ್‌ಲ್ಯಾಂಡ್‌ನ ದಾವೋಸ್‌ ಎಂಬಲ್ಲಿ ನಡೆಯುತ್ತದೆ. ಪ್ರಪಂಚದ ಸುಮಾರು ಮೂರು ಸಾವಿರ ಉದ್ಯಮಿಗಳು, ರಾಜಕೀಯ ಮುಖಂಡರು, ಅರ್ಥಶಾಸ್ತ್ರಜ್ಞರು, ಪತ್ರಕರ್ತರು ಹಾಗೂ ಸೆಲೆಬ್ರೆಟಿಗಳು ಐದು ದಿನಗಳ ಕಾಲ ಪ್ರಪಂಚದ ಸುಂದರ ತಾಣವಾದ ದಾವೋಸ್‌ ನಲ್ಲಿ ಒಟ್ಟು ಸೇರುವ ಸಮಾವೇಶವಿದು.
 
ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ವಿಚಾರ ವಿನಿಮಯಗಳ ಜೊತೆಗೆ ರಾಜಕೀಯ, ಯುದ್ಧ, ಪರಿಸರ ಒಳಗೊಂಡು ವಿವಿಧ ಅನೇಕ ಸಂಗತಿಗಳ ಕುರಿತಾಗಿ ಇಲ್ಲಿ ಚರ್ಚೆ ನಡೆಸಲಾಗುತ್ತದೆ. ಬರೋಬ್ಬರಿ 500 ಖಾಸಗಿ ಹಾಗೂ ಸಾರ್ವಜನಿಕ ವಿಚಾರಗೋಷ್ಠಿಗಳು ಇಲ್ಲಿ ನಡೆಯುತ್ತವೆ. ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳ ಪ್ರಮುಖಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಇದೊಂದು ವೇದಿಕೆಯಾಗಿದೆ. ರಾಜಕೀಯ ನಾಯಕರು ಸೆಲೆಬ್ರಿಟಿಗಳು ಸಹ ಇಲ್ಲಿ ಮಿಂಚುತ್ತಾರೆ. ಇದೀಗ ಯಡಿಯೂರಪ್ಪ ಅವರು ಪಾಲ್ಗೊಳ್ಳಲು ದಾವೋಸ್ ತೆರಳಿದ್ದಾರೆ. ರಾಜ್ಯದ ಬಿಜೆಪಿ ಸೇರಿದಂತೆ ಆಪ್ತರು ಯಡಿಯೂರಪ್ಪ ನವರಿಗೆ ಶುಭ ಕೋರಿದ್ದಾರೆ.

Find out more: