ಚಿಕ್ಕಬಳ್ಳಾಪುರ: ಮುಂದಿನ ಮೂರುವರೆ ವರ್ಷದ ಕಾಲ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಲಿರುವ ಬಿ.ಎಸ್‌.ಯಡಿಯೂರಪ್ಪ ಬಳಿಕ ಮತ್ತೇ ಚುನಾವಣೆಗೆ ನಿಲ್ತಾರಾ ಇಲ್ವಾ ಎಂಬ ಪ್ರಶ್ನೆ ಇದೀಗ ಬುಗಿಲೆದ್ದಿದೆ. ಹೌದು, ಬಹು ದಿನಗಳ ಪ್ರಶ್ನೆಗೆ ಕಲ್ಕಡ ಪ್ರಭಾಕರ್ ಭಟ್ ಅವರಿಂದ ಇದೀಗ ಉತ್ತರ ಸಿಕ್ಕಿದೆ. ಹೌದು, ಅದೇನೆಂಬುದು  ಇಲ್ಲಿದೆ ನೋಡಿ. 
 
ನಗರದ ಶ್ರೀ ದೇವಿ ಪ್ಯಾಲೇಸ್‌ನಲ್ಲಿ ಭಾನುವಾರ ಸ್ಥಳೀಯ ಗಾಯಿತ್ರಿ ಸೇವಾ ಸಮಿತಿ ಹಾಗೂ ಗಾಯಿತ್ರಿ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಿಂಗಳ ಹಿಂದೆ ನಾನು ಅವರನ್ನು ಬೇಟಿಯಾಗಿದ್ದೆ. ಅವರೇ ಸಂತೋಷದಿಂದ ನನಗೆ ಹೇಳಿದ ಮಾತು ಇದು. ನಾನು ಮೂರುವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ, ರ್ದುಬಲ ವರ್ಗಗಳ ಅಭಿವೃದ್ದಿಗೆ ಚೆನ್ನಾಗಿ ಕೆಲಸ ಮಾಡುತ್ತೇನೆ. ಮತ್ತೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ.
 
ಪಕ್ಷ ಹಾಗೂ ಜನ ನನಗೆ ಎಲ್ಲ ರೀತಿಯ ಜವಾಬ್ದಾರಿ ಹಾಗೂ ಅಧಿಕಾರ ನೀಡಿದ್ದಾರೆ. ಆದ್ದರಿಂದ ಪಕ್ಷಕ್ಕೋಸ್ಕರ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖುದ್ದು ನನ್ನ ಜೊತೆಗೆ ಹೇಳಿದ್ದಾರೆಂದು ಕಲ್ಲಡ್ಕ ಪ್ರಭಾಕರ್‌ ಹೇಳಿದರು.  ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ, ಇನ್ನು ಮುಂದಿನ ಮೂವರೆ ವರ್ಷದ ಕಾಲ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿಯೆ ಸರ್ಕಾರ ನಡೆಯಲಿದೆ. ಯಾರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಯಡಿಯೂರಪ್ಪಗೆ ಜನರ ಬಗ್ಗೆ ದುಃಖೀತರಿಗೆ ಏನಾದರೂ ಗೌರವದಿಂದ ಮಾಡಬೇಕೆಂಬ ದೃಷ್ಠಿಯನ್ನು ಹೊಂದಿರುವ ವ್ಯಕ್ತಿ. 
 
ಮಣ್ಣಿನ ಮಗ, ರೈತನ ಮಗ ಎಂದ ಪ್ರಭಾಕರ್‌, ಇಡೀ ದೇಶದಲ್ಲಿ ರೈತರ ಬಜೆಟ್‌ ತಂದವರು ಯಾರದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಕಳೆದ 60 ವರ್ಷದಲ್ಲಿ ಯಾರು ಮಾಡದ ಕೆಲಸವನ್ನು ಯಡಿಯೂರಪ್ಪ ರೈತರ ಪರವಾಗಿ ಬಜೆಟ್‌ ಮಾಡಿದರು. ಆದ್ದರಿಂದ ಅವರು ರೈತರ ಬಗ್ಗೆ ಇರುವ ಅನುಭವಿ ರಾಜಕಾರಣಿ, ಕಳೆದ 42 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿ ಬಂದ ಮೇರು ವ್ಯಕ್ತಿತ್ವದ ವ್ಯಕ್ತಿಯೇ ಮುಖ್ಯಮಂತ್ರಿ ಯಡಿಯೂರಪ್ಪ.

Find out more: