ಐಪಿಎಲ್ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್

 

ನ್ಯೂ ಡೆಲ್ಲಿ: 2020ರ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ. ಫ್ರಾಂಚೈಸಿ ಗಳು ಈಗಲೇ ತಯಾರಿ ಆರಂಭಿಸಿದೆ. ತರಬೇತಿ ಕ್ಯಾಂಪ್ ಆರಂಭಗೊಂಡಿದೆ. ಆಟಗಾರರು ಈಗಾಗಲೇ ತಮ್ಮ ಬ್ಯಾಟ್ ಬೌಲಿಂಗ್ ನ ತಾಲೀಮು ಶುರು ಮಾಡಿದ್ದಾರೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಭಾರೀ ಕಪ್ ನಮ್ಮದೇ ಎಂಬ ರೀತಿಯಲ್ಲಿ ಪ್ರಾಕ್ಟೀಸ್ ಶುರುಮಾಡಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಇದು ನಾಯಕ ಶ್ರೇಯಸ್ ಅಯ್ಯರ್ ಚಿಂತೆಗೆ  ಕಾರಣವಾಗಿದೆ. ಹೌದು, ಐಪಿಎಲ್ ಪ್ರಾರಂಭಕ್ಕೂ ಮುನ್ನವೇ ಏನಿದು ಶಾಕಿಂಗ್ ನ್ಯೂಸ್ ಅಂತ ಆಶ್ಚರ್ಯವಾಯ್ತಾ. ಡೋಂಟ್ ವರಿ, ಅದು ಯಾಕೆ ಎಂದು ನಾವ್ ಹೇಳ್ತೀವಿ ಕೇಳಿ. 


 
ದ್ವೀಪಕ್ಷೀಯ ಸರಣಿ ಜೊತೆಗೆ ಬಿಸಿಸಿಐ ಐಪಿಎಲ್ ಟೂರ್ನಿಗೂ ತಯಾರಿ ನಡೆಸುತ್ತಿದೆ. ಇತ್ತ ಫ್ರಾಂಚೈಸಿ ಗಳು ಕೂಡ ಟೀಂ ಕಾಂಬಿನೇಷನ್, ಬ್ಯಾಕ್ ಅಪ್ ಪ್ಲೇಯರ್ ಸೇರಿದಂತೆ ಹಲವು ತಯಾರಿ ನಡೆಸುತ್ತಿದೆ. ತಂಡಕ್ಕೆ ಆಯ್ಕೆಯಾಗಿರುವ ಯುವ ಆಟಗಾರರ ತರಬೇತಿ ಕ್ಯಾಂಪ್ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಶಿಖರ್ ಧವನ್ ಇಂಜುರಿ ವರದಿ ಶಾಕ್ ನೀಡಿದೆ. ಹೌದು ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಭುಜದ ನೋವಿಗೆ ತುತ್ತಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಇದೀಗ ನ್ಯೂಜಿಲೆಂಡ್ ಸರಣಿ ಯಿಂದ ಹೊರಬಿದ್ದಿದ್ದಾರೆ. ಇಷ್ಟೇ ಅಲ್ಲ, ಧವನ್ ಚೇತರಿಕೆಗೆ ಕನಿಷ್ಠ 10 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಧವನ್ 2020 ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

 

ಎಪ್ರಿಲ್ ಅಂತ್ಯದಲ್ಲಿ ಧವನ್ ಗಾಯ ದಿಂದ ಗುಣಮುಖ ರಾಗಲಿದ್ದಾರೆ. ಇನ್ನು ಐಪಿಎಲ್ ಟೂರ್ನಿ ಎಪ್ರಿಲ್ 1ರಿಂದ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಧವನ್ ನ್ಯೂಜಿಲೆಂಡ್ ಸರಣಿಯಿಂದ ಮಾತ್ರವಲ್ಲ, ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಈ ಸುದ್ದಿ ಕೇಳಿದ ಡೆಲ್ಲಿ ಹಾಗೂ ಧವನ್ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ.

Find out more:

ipl