ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಇದೀಗ ಸಂಪುಟ ಸರ್ಜರಿಯ ಕಸರತ್ತು ನಡೆಯುತ್ತಿರುವಾಗ ಡಿಸಿಎಂ ಆಕಾಂಕ್ಷಿ ಬಳ್ಳಾರಿ ಜಿಲ್ಲೆಯ ಪ್ರಬಲ ಸಚಿವ ಇದೀಗ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಹೌದು, ಅದನ್ನು ಕೇಳಿದ್ರೆ ನೀವು ಕೂಡ ಶಾಕ್ ಆಗೋದು ಗ್ಯಾರಂಟಿ. ಏನದು ಗೊತ್ತಾ!?
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊಟ್ಟ ಮಾತು ಎಂದೂ ತಪ್ಪಲ್ಲ. ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ. ಸೋತವರಿಗೆ ಸಚಿವರನ್ನಾಗಿ ಮಾಡುವ ಬೇಡಿಕೆ ವಿಚಾರದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸಿಎಂ ಕೈಬಿಡಲ್ಲ  ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದ್ದು ಕೊಟ್ಟ ಮಾತು ತಪ್ಪಲ್ಲ ಎಂದಮೇಲೆ ಎಂಟಿಬಿಗೆ, ವಿಶ್ವನಾಥ್ ಗೆ ಏನ್ ಮಾಡ್ತಾರೆ ಎಂಬುದು ಶಾಕಿಂಗ್ ನ್ಯೂಸ್ ಆಗಿದೆ. 
 
ಶ್ರೀರಾಮುಲು ಡಿಸಿಎಂ ಆಗಬೇಕು ಅನ್ನೋದು ಜನರ ಬೇಡಿಕೆಯಿದೆ. ರಾಜ್ಯದ ಸಾಮಾನ್ಯ ಜನರ ಬೇಡಿಕೆಯನ್ನ ನಾನು ಅಲ್ಲಗೆಳೆಯಲು ಹೋಗುವುದಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರೆಲ್ಲ ಏನು ತೀರ್ಮಾನ ಕೈಗೊಳ್ತಾರೋ ಕಾದು ನೋಡೋಣ ಎಂದು ಇದೀಗ ತಿಳಿಸಿದ್ದಾರೆ. 
 
ಬಳ್ಳಾರಿ ವಿಮ್ಸ್ ನಲ್ಲಿ ವೀಲ್ ಚೇರ್ ನೀಡದೇ ಅಮಾನವೀಯ ಘಟನೆ ನಡೆದ ಬಗ್ಗೆ ಸಚಿವರಾದ ಶ್ರೀರಾಮುಲು ಪ್ರತಿಕ್ರಿಯೆ ನೀಡಿ, ಈ ಅಮಾನವೀಯ ಘಟನೆ ಬಗ್ಗೆ ತನಿಖೆ ನಡೆಸಲು ಅಧಿಕಾರಿಯನ್ನ ನೇಮಕ ಮಾಡಲಾಗಿದೆ. ಇಂತಹ ಘಟನೆಗಳನ್ನ ಬಿಹಾರ, ಉತ್ತರ ಪ್ರದೇಶದಂತ ರಾಜ್ಯಗಳಲ್ಲಿ ನೋಡಿದ್ದೀವಿ. ಆದರೆ ಈಗ ಬಳ್ಳಾರಿಯಲ್ಲಿ ಇಂತಹ ಘಟನೆ ನಡೆದಿದೆ. ತಪ್ಪಿತಸ್ಥರ ಯಾರೇ ಇದ್ದರೂ ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥ ಅಧಿಕಾರಿಗಳನ್ನ ಅಮಾನತು ಮಾಡಲಾಗುವುದು ಎಂದು ತಿಳಿಸಿದರು.
 
ಹೆಲ್ತ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲು ಮನವಿ ಮಾಡಿದ್ದಾರೆ. ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಅಷ್ಟೇ. ಮತ್ತೆ ಅರ್ಜಿ ಕರೆದಿಲ್ಲ ಎಂಬುದು ಅವರ ಮನವಿ. ಈ ಬಾರಿ ಮತ್ತೆ ಹೆಲ್ತ್ ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಿಕೊಳ್ಳಲು ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಾಗುವುದು ಎಂದು ಶುಭ ಸುದ್ದಿ ನೀಡಿದರು.

Find out more: