ಬೆಂಗಳೂರು: ಒನ್ ನೇಷನ್ ಒನ್ ಟ್ಯಾಕ್ಸ್, ಅರೇ ಏನಪ್ಪಾ ಇದು ಅರ್ಥನೇ  ಆಗ್ತಿಲ್ಲ ಎಂದು ಕನ್ಪ್ಯೂಸ್ ಆಗ ಬೇಡಿ, ಅದೇನೆಂದು ನಾವ್ ಹೇಳ್ತೀವಿ ಕೇಳಿ.  ಕೇಂದ್ರ ಸರ್ಕಾರವು ಒನ್‌ ನೇಷನ್‌ ಒನ್‌ ಟ್ಯಾಕ್ಸ್‌ ತರಲು ನಿರ್ಧರಿಸಿದೆ. ಹೌದು ಅದೇ ಒನ್ ನೇಷನ್ ಒನ್ ಟ್ಯಾಕ್ಸ್. 
 
ಇದೀಗ ಕೇಂದ್ರ ಜಾರಿಗೆ ತರಲು ನಿರ್ಧರಿಸಿರುವುದರಿಂದ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಿದೆ ಎಂದು ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.  ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಚ್ಚು ಬೆಲೆಯುಳ್ಳ ವಾಹನಗಳ ನೋಂದಣಿ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿ ಇಲ್ಲಿಗೆ ತರುತ್ತಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯ ತೆರಿಗೆ ಪದ್ಧತಿ ಜಾರಿಗೊಳಿಸಲು ಮುಂದಾಗಿದೆ ಎಂದು ಹೇಳಿದ್ದಾರೆ. 
 
ಕೇಂದ್ರ ಸರ್ಕಾರದ ಕ್ರಮಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಕಾನೂನು ರೂಪಿಸಿ ವಿಧಾನಮಂಡಲದ ಒಪ್ಪಿಗೆ ಪಡೆಯಲಿದೆ ಎಂದು ಹೇಳಿದರು. ಒನ್‌ ನೇಷನ್‌ ಒನ್‌ ಟ್ಯಾಕ್ಸ್‌ ಪದ್ಧತಿ ಜಾರಿಗೆ ಬಂದರೆ ರಾಜ್ಯಕ್ಕೆ 1 ಸಾವಿರ ಕೋಟಿ ರೂ. ಕೊರತೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರವು ಶೇ.16, 18, ಹಾಗೂ 20 ಮೂರು ಸ್ಲಾಬ್‌ಗಳಲ್ಲಿ ತೆರಿಗೆ ಹಾಕುತ್ತಿದೆ. ಕೇಂದ್ರ ಸರ್ಕಾರವು ಶೇ.8, 12, 10 ರಷ್ಟು ತೆರಿಗೆ ಹಾಕುತ್ತಿದೆ. ಹೀಗಾಗಿ, ಕೊರತೆಯಾಗಬಹುದು. ಆದರೆ, ಅದಕ್ಕೆ ಪರಿಹಾರೋಪಾಯ ಕಂಡು ಹಿಡಿಯಲಾಗುವುದು ಎಂದು ಇದೀಗ ಡಿಸಿಎಂ ತಿಳಿಸಿದ್ದಾರೆ. 
 
ಕೆಎಸ್‌ಆರ್‌ಸಿ ಹಾಗೂ ಬಿಎಂಟಿಸಿ ನೌಕರರ ಮುಷ್ಕರ ಕುರಿತು ಪ್ರತಿಕ್ರಿಯಿಸಿದ ಅವರು, 1.30 ಲಕ್ಷ ಚಾಲಕರು ಹಾಗೂ ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮನ್ನೂ ಅರೆಸರ್ಕಾರಿ ನೌಕರರು ಅಂತ ಪರಿಗಣಿಸಲು ಬೇಡಿಕೆ ಇದೆ. ಈ ಬಗ್ಗೆ ಸಮಿತಿ ರಚಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎಂದು ಸಹ ತಿಳಿಸಿದರು. ಇದೀಗ ರಾಜ್ಯದಲ್ಲಿ ಒನ್ ನೇಷನ್, ಒನ್ ಟ್ಯಾಕ್ಸ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದು ಕಾದು ನೋಡಬೇಕಿದೆ.

Find out more: