ನವದೆಹಲಿ: ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್​ ಗೋಡ್ಸೆ ಮತ್ತು ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದೇ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧೀ ತಿಳಿಸಿದ್ದಾರೆ. 
 
ಗೂಡ್ಸೆಯಲ್ಲಿ ನಂಬಿಕೆ ಇಟ್ಟಿರುವುದನ್ನು ಹೇಳಿ ಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದೆಗಾರಿಕೆ ಇಲ್ಲವೆಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇರಳದ ತಮ್ಮ ಲೋಕಸಭಾ ಕ್ಷೇತ್ರ ವಯನಾಡಿನಲ್ಲಿ ಸಿಎಎ ವಿರೋಧಿಸಿ ನಡೆದ “ಸಂವಿಧಾನ ರಕ್ಷಣೆ” ಜಾಥದ ಬಳಿಕ ನಡೆದ ಸಮಾವೇಶ ವನ್ನು ಉದ್ದೇಶಿಸಿ ರಾಹುಲ್​ ಗಾಂಧಿ ಮಾತನಾಡಿದರು.
 
ಗುರುವಾರ ಮಹಾತ್ಮ ಗಾಂಧಿಯವರ 72ನೇ ಪುಣ್ಯತಿಥಿ ಹಿನ್ನೆಲ್ಲೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಾಥುರಾಮ್​ ಗೋಡ್ಸೆಯ ಆದರ್ಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಗಾಂಧಿ ಹಂತಕನಲ್ಲಿ ನಂಬಿಕೆ ಇಟ್ಟಿರುವುದನ್ನು ಒಪ್ಪಿಕೊಳ್ಳಲು ಅವರಲ್ಲಿ ಧೈರ್ಯವಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ. 
 
ಇದೇ ಕಾರ್ಯಕ್ರಮದಲ್ಲಿ ಸಿಎಎ ವಿರುದ್ಧ ಗುಡುಗಿದ ರಾಹುಲ್ ಗಾಂಧೀ​, ಭಾರತೀಯ ರೆಂದು ಸಾಬೀತು ಪಡಿಸಿಕೊಳ್ಳಲು ಭಾರತೀಯರನ್ನೇ ಪ್ರಧಾನಿ ಮೋದಿ ಬಲವಂತ ಮಾಡುತ್ತಿದ್ದಾರೆ. ಭಾರತೀಯರು ಯಾರೆಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ನಮ್ಮ ಭಾರತೀಯತ್ವವನ್ನು ಪ್ರಶ್ನಿಸಲು ಮೋದಿಗೆ ಲೈಸೆನ್ಸ್​ ಕೊಟ್ಟವರು ಯಾರು? ಹೇಳಿ? ನಾನೊಬ್ಬ ಭಾರತೀಯ ಎಂಬುದು ನನಗೆ ಗೊತ್ತಿದೆ. ಅದನ್ನು ಯಾರಿಗೂ ಸಾಬೀತು ಮಾಡಬೇಕಿಲ್ಲ. ಹಾಗೆಯೇ 1.4 ಬಿಲಿಯನ್​ ಭಾರತೀಯರು ಕೂಡ ನಿಮ್ಮ ಭಾರತೀಯತ್ವವನ್ನು ಸಾಬೀತು ಮಾಡಿಕೊಳ್ಳಬೇಕಿಲ್ಲ ಎಂದರು ಅಬ್ಬರಿಸಿದರು. ಇಂದು ಅಶಿಕ್ಷಿತ ವ್ಯಕ್ತಿಯು ಕೂಡ ಸಿಎಎ ಅನ್ನು ಪ್ರಶ್ನಿಸುತ್ತಿದ್ದಾನೆ. ದೇಶದ ಜನತೆಯ ಶಕ್ತಿ ಪ್ರಧಾನಿ ಮೋದಿಗೆ ತಿಳಿದಿಲ್ಲ. 
 
ಗೋಡ್ಸೆ ಮತ್ತು ಮೋದಿ ಆದರ್ಶ ಒಂದೇ ಆಗಿದೆ. ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಇದನ್ನು ಒಪ್ಪಿಕೊಳ್ಳಲು ಅವರಿಗೆ ಧೈರ್ಯವಿಲ್ಲ? ಎಲ್ಲರೂ ಭಾರತೀಯರೆ, ನಾನು ಕೂಡ ಭಾರತೀಯನೆ, ಅದನ್ನು ವಿಶೇಷವಾಗಿ ಸಿಎಎ  ಮೂಲಕ ಸಾಬೀತು ಪಡಿಸಿಕೊಳ್ಳಬೇಕಿಲ್ಲ ಎಂದು ರಾಹುಲ್ ಪ್ರಧಾನಿ ಮೋದಿ ವಿರುದ್ಧ ವಯಾನಾಡಿನಲ್ಲಿ ಗುಡುಗಿದ್ದಾರೆ.

Find out more: