ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಇಬ್ಬರೂ ಸೇರಿ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿರುವುದು ಇದೀಗ ಭಾರೀ ಕುತೂಹಲ ಮೂಡಿಸಿದೆ. ರಾಮನಗರದಲ್ಲಿ ಡಿಕೆ ಸಹೋದರರ ರಾಜಕೀಯ ಕಡುವೈರಿ ಯೋಗೇಶ್ವರ್‌ ವಿರುದ್ಧ ರೇಣುಕಾಚಾರ್ಯ ಧ್ವನಿ ಎತ್ತಿದ್ದರು. 'ಶತ್ರುವಿನ ಶತ್ರು ಮಿತ್ರ' ಎಂಬಂತೆ ಡಿಕೆಶಿ ಮತ್ತು ರೇಣುಕಾಚಾರ್ಯ ಅವರ ಭೇಟಿ ಮತ್ತು ಮಾತುಕತೆ ಮಹತ್ವ ಪಡೆದುಕೊಂಡಿದ್ದು ಅವರಿಬ್ಬರು ಭೇಟಿಯಾಗಿದ್ದು ಯಾಕೆ ಗೊತ್ತಾ!  
 
ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಸುದೀರ್ಘ ಮಾತುಕತೆ ನಡೆಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸೋತವರಿಗೆ ಸಚಿವ ಸ್ಥಾನ ಬೇಡ ಎಂದು ಆಗ್ರಹಿಸಿ ರೇಣುಕಾಚಾರ್ಯ ಬಿಜೆಪಿಯ ಕೆಲವು ಶಾಸಕರ ಗುಂಪಿನ ಸಭೆ ನಡೆಸಿದ್ದರು. ಸಂಪುಟ ವಿಸ್ತರಣೆ ವೇಳೆ ಸಿ.ಪಿ. ಯೋಗೇಶ್ವರ್‌ ಹೆಸರು ಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದ್ದ ಸಂದರ್ಭದಲ್ಲಿ ರೇಣುಕಾಚಾರ್ಯ ಅವರ ಈ ಬೇಡಿಕೆ ಮಹತ್ವ ಪಡೆದಿತ್ತು. ರಾಮನಗರದಲ್ಲಿ ಡಿಕೆ ಸಹೋದರರ ರಾಜಕೀಯ ಕಡುವೈರಿ ಯೋಗೇಶ್ವರ್‌ ವಿರುದ್ಧ ರೇಣುಕಾಚಾರ್ಯ ಧ್ವನಿ ಎತ್ತಿದ್ದರು. 'ಶತ್ರುವಿನ ಶತ್ರು ಮಿತ್ರ' ಎಂಬಂತೆ ಡಿಕೆಶಿ ಮತ್ತು ರೇಣುಕಾಚಾರ್ಯ ಅವರ ಬುಧವಾರದ ಭೇಟಿ ಮತ್ತು ಮಾತುಕತೆ ಮಹತ್ವ ಪಡೆದುಕೊಂಡಿದ್ದು ಭೇಟಿಗೆ ಆ ಕಾರಣವಿದ್ದರೆ, ಅದರ ಹಿಂದಿರುವ ರಹಸ್ಯವೇನು ಗೊತ್ತಾ!? 
 
ರೇಣುಕಾಚಾರ್ಯ ಅವರು ಮುಂಬಡ್ತಿ ಬಯಸಿ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಪಂಚಮಸಾಲಿ ಕೋಟಾದಲ್ಲಿಅವರ ಈ ಬೇಡಿಕೆ ಈಡೇರಿಲ್ಲ. ಇಂಥ ಪರಿಸ್ಥಿತಿಯಲ್ಲಿಈ ಭೇಟಿ ಚರ್ಚೆಗೆ ಗ್ರಾಸವಾಗಿದೆ. ಸ್ವಕ್ಷೇತ್ರ ಹೊನ್ನಾಳಿಯ ಚನ್ನಪ್ಪಸ್ವಾಮಿ ಮಠದಲ್ಲಿ ಮಾ.5 ರಂದು ನಡೆಯಲಿರುವ ಕೃಷಿ ಮೇಳದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲು ರೇಣುಕಾಚಾರ್ಯ ಅವರು ಡಿಕೆಶಿ ನಿವಾಸಕ್ಕೆ ತೆರಳಿದ್ದರು. ಆದರೆ, ಜತೆಗಿದ್ದ ಮಾಜಿ ಶಾಸಕ ಬಿ.ಪಿ. ಹರೀಶ್‌, ಕೃಷಿ ಮೇಳ ಸಮಿತಿಯ ಸದಸ್ಯರ ನಿಯೋಗವನ್ನು ಹೊರಗಿಟ್ಟು ಎಂಪಿ ರೇಣುಕಾಚಾರ್ಯ ಪ್ರತ್ಯೇಕವಾಗಿ ಡಿಕೆಶಿ ಜತೆ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದು ಮುಂದೇನಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.
 
 

Find out more: