ಬೆಂಗಳೂರು: ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಶನಲ್ ಸಂಸ್ಥೆ, ಪಾರ್ಲಿಮೆಂಟ್ ಮೆಂಬರ್ ಇದ್ದಾಗ ಸ್ಥಾಪನೆ ಆಯ್ತು ಅದರ ಸಂಘಟನೆ ವೇಗವನ್ನು ಜಾಸ್ತಿ ಮಾಡಿದ್ದೇವೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಕುರುಬ ಸಮುದಾಯದ ಮುಖಂಡರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ಕುರುಬ ಸಮುದಾಯ ಪ್ರಸರಿಸಿದೆ. ಗ್ರೀಸ್, ಲಂಡನ್ನಲ್ಲಿ ಕುರುಬ ಸಮುದಾಯದವರಿಗೆ ಮನ್ನಣೆ ಇದೆ. ಈ ಸಮುದಾಯದಲ್ಲಿರೋದಕ್ಕೆ ಅಸ್ಮಿತೆ, ಹೆಮ್ಮೆ ಅನ್ಸುತ್ತೆ ಎಂದು ತಿಳಿಸಿದ್ದಾರೆ.
ಇನ್ನು ಜೂನ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಮ್ಮೇಳನ ಮಾಡ್ತಿದೀವಿ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮ್ಮೇಳನ. ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ. ಇಡೀ ಭಾರತದಲ್ಲಿ ನಮ್ಮ ಸಮಯದಾಯದವರ ಪರಸ್ಪರ ಪರಿಚಯಕ್ಕೆ ನಾವು ಮುಂದಾಗಿದ್ದೇವೆ, ಅಂತರಾಷ್ಟ್ರೀಯ ಮಟ್ಟದ್ದಾಗಿರುವುದರಿಂದ ಅದ್ಧೂರಿಯಾಗಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ಲಸ್ತುತ ಅಂದಾಜಿನ ಪ್ರಕಾರ ಭಾರತದಲ್ಲಿ 12ಕೋಟಿ ಕುರುಬ ಸಮುದಾಯದವರಿದ್ದಾರೆ. ಸಮುದಾಯದ ಎಲ್ಲರನ್ನೂ ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ದೇಶದ ಹಲವು ಕಡೆ ಹಲವು ಹೆಸರುಗಳಿಂದ ಕುರುಬರಿಗೆ ಕರೆಯುತ್ತಾರೆ. ಈಗ ಎಲ್ಲರೂ ಒಂದೇ ವೇದಿಕೆಗೆ ಬರಲು ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನೆರೆವಾಗಿದೆ. ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಂಘ ಭಾರತದ ಮಟ್ಟದಲ್ಲಿದೆ.
ಅದರ ಶಾಖೆ ನಮ್ಮ ರಾಜ್ಯದಲ್ಲೂ ಆರಂಭ ಮಾಡುತ್ತಿದ್ದೇವೆ ಎಂದು ವಿಶ್ವನಾಥ್ ಅವರು ನುಡಿದರು. ಇದೇ ವೇಳೆ ಕುರುಬ ಸಮುದಾಯದ ಮುಖಂಡ ಹೆಚ್.ಎಂ.ರೇವಣ್ಣ ಅವರು ಸಮುದಾಯವನ್ನು ಎಸ್.ಟಿ ಸಮುದಾಯಕ್ಕೆ ಸೇರಿಸೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಬಹಳ ವರ್ಷಗಳಿಂದ ಈ ಕೂಗು ಇದೆ.ಇಡೀ ದೇಶದಲ್ಲೇ ಈಕೂಗು ಬಹಳ ವರ್ಷಗಳಿಂದ ಇದೆ. ಮುಂದಿನ ದಿನಗಳಲ್ಲಿ ಎಲ್ಲ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಜೊತೆಗೆ ಕಳೆದ ಎರಡು ತಿಂಗಳಿಂದ ಕುರುಬ ಸಮುದಾಯದ ಅಧ್ಯಕ್ಷರ ನೇಮಕ ಆಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಕ್ಕಲಿಗರ ಸಮುದಾಯ ಎರಡು ಭಾಗ ಆಗಿದೆ. ಪುಣ್ಯಕ್ಕೆ ಕುರುಬ ಸಮುದಾಯ ಇಬ್ಭಾಗ ಆಗಿಲ್ಲ, ಸಿದ್ದರಾಮಯ್ಯ ಈಶ್ವರಪ್ಪನವರನ್ನು ಬೈದರೂ, ಈಶ್ವರಪ್ಪ ವಿಶ್ವನಾಥ್ ಗೆ ಬೈದರೂ ಕುರುಬ ಸಮುದಾಯ ಒಂದಾಗಿದೆ ಎಂದು ತಿಳಿಸಿದ್ದಾರೆ.