ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಮಾಡಿದ್ದಾದರೂ ಏನು ಗೊತ್ತಾ!?
ಗುಜರಾತಿನ ಅಹಮದಾಬಾದ್ ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯಾ ನಾಥ್ ಟ್ರಂಪ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್ ದಂಪತಿ ತಾಜ್ ಮಹಲ್ ಕಡೆ ಹೊರಟರು. ಹೌದು, ಅದ್ಧೂರಿ ಸಂಪ್ರದಾಯಗಳ ಕಲಾ ವೈಭವವನ್ನು ಕಣ್ತುಂಬಿಕೊಂಡ ನಾವೇ ಧನ್ಯರು ಎಂದರು.
ತಾಜ್ ಮಹಲ್ ಗೆ ಆಗಮಿಸಿದ ಟ್ರಂಪ್ ದಂಪತಿಗೆ ಅಚ್ಚರಿಯು ಕಾದಿತ್ತು. ವಿವಿಧ ಕಲಾ ತಂಡಗಳು ಟ್ರಂಪ್ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದು ವಿದ್ಯಾರ್ಥಿಗಳು ಟ್ರಂಪ್ ದಂಪತಿಯನ್ನು ಖಷಿಯಿಂದಲೇ ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಜನ ವಿಶ್ವದ ದೊಡ್ಡಣ್ಣನನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಅಲ್ಲದೆ, ಟ್ರಂಪ್ ದಂಪತಿ ಸ್ವಾಗತ ಕೋರುವ ಪೋಸ್ಟರ್ ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು. ಭವ್ಯ ಸ್ವಾಗತ ನೋಡಿದ ಟ್ರಂಪ್ ದಂಪತಿ ಅವರು ಆಶ್ಚರ್ಯಚಿಕಿತರಾದರು.
ಇದಕ್ಕೂ ಮುನ್ನು ಬೆಳಗ್ಗೆಯಷ್ಟೇ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಪತ್ನಿ ಮೆಲೆನಿಯಾ ಟ್ರಂಪ್, ಪುತ್ರಿ ಇವಾಂಕ ಮತ್ತು ಅಳಿಯ ಜರೇದ್ ಕುಶ್ನರ್ ಹಾಗೂ ಅಮೆರಿಕ ನಿಯೋಗದೊಂದಿಗೆ ಅಧ್ಯಕ್ಷ ಟ್ರಂಪ್ ಬಂದಿಳಿದರು. ಬಳಿಕ ಮೆರವಣಿಗೆಯಲ್ಲಿ ಸ್ಮರಣೀಯ ಸ್ವಾಗತದೊಂದಿಗೆ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಮೊಟೇರಾ ಸ್ಟೇಡಿಯಂಗೆ ತೆರಳಿದರು. ನಂತರ “ನಮಸ್ತೆ ಟ್ರಂಪ್” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ತಾಜ್ ಮಹಲ್ ನೋಡುವ ಇಂಗಿತವನ್ನೂ ಟ್ರಂಪ್ ವ್ಯಕ್ತಪಡಿಸಿದ್ದರು. ಆದ್ದರಿಂದ ತಾಜ್ ಮಹಲ್ ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.