ಬಾಗಲಕೋಟೆ: ಅಮಿತ್ ಶಾ ಸಂವಿಧಾನ ವಿರೋಧಿ, ಬಿಜೆಪಿ ಅಧ್ಯಕ್ಷರಾದಾಗಿನಿಂದ ಜನರ ಮಧ್ಯೆ ಒಡಕು ಮಾಡೋದು ಗಲಭೆ ಎಬ್ಬಿಸೋದು ಎಂದು ಸಮಾಜ ಪರಿವರ್ತನಾ ಸಂಘದ ಸಂಸ್ಥಾಪಕ ಎಸ್​.ಆರ್​. ಹಿರೇಮಠ ಅವರು ಕೇಂದ್ರ ಗೃಹಮಂತ್ರಿ ವಿರುದ್ಧ ಗುಡುಗಿದ್ದಾರೆ.
 
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಜೆ.ಎನ್.​ಯೂ (ಜವಾಹರ್ ಲಾಲ್​ ನೆಹರು ವಿಶ್ವವಿದ್ಯಾಲಯ) ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಗಿದೆ. ಪೊಲೀಸರು ಸುಮ್ಮನೆ ಇದ್ದಾರೆ. ಇಂತಹ ಭೂಪ ಸಾರ್ವಜನಿಕ ಜೀವನದಲ್ಲಿ ಇರಬೇಕಾ? ಅವನಿಗೆ ಸ್ವಲ್ಪ ನಾಚಿಕೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ನೀಡಲಿ ಎಂದು ಶಾ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹೌದು, ಪ್ರಸ್ತುತ ಈ ವಿಷಯವೀಗ ಭಾರೀ ಚರ್ಚೆಯಾಗುತ್ತಿದೆ. 
 
ಅಷ್ಟೇ ಅಲ್ಲದೆ, ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಜನಾರ್ಧನ ರೆಡ್ಡಿ ಇವರಿಗೆ ನಾಚಿಕೆ ಅನ್ನೋದು ಇಲ್ಲ, ಹಾಗೇ ಇವನು. ಆರ್.​ಬಿ.ಐ, ಸಿಬಿಐ, ಸಿವಿಸಿ, ಸಂಸ್ಥೆಗಳನ್ನು ಡಿಸ್ ಮೆಂಟಲ್ ಮಾಡುತ್ತಿದ್ದಾನೆ. ಗೃಹ ಮಂತ್ರಿಯಾಗಲು ಅಯೋಗ್ಯ, ಮೋದಿ ಕೂಡಲೇ ಶಾ ನನ್ನ ಸ್ಥಾನದಿಂದ ಕೆಳಗೆ ಇಳಿಸಬೇಕು. ಇದು ನಮ್ಮ ಗಂಭಿರವಾದ ಬೇಡಿಕೆ ಎಂದು ಗುಡುಗಿದ್ದಾರೆ. 
 
ಇನ್ನು ಸುಪ್ರೀಂಕೋರ್ಟ್ ಜಡ್ಜ್ ​ಗಳನ್ನು ಹೆದರಿಸಿ ಟ್ರಾನ್ಸಫರ್ ಮಾಡುತ್ತಿದ್ದಾರೆ. ದೆಹಲಿ ಹೈಕೋರ್ಟ್ ಜಡ್ಜ್​ ರನ್ನ ಟ್ರಾನ್ಸಫರ್ ಮಾಡಿಸಿದರು ಎಂತಹ ಕಟುಕ ಮನುಷ್ಯ ಈತ. 2002 ರ ಗಲಭೆಯಲ್ಲಿ ಸೊರಾಬುದ್ದೀನ್ ಕೇಸ್​ ನಲ್ಲಿ ಅಮಿತ್ ಶಾ ಆರೋಪಿ, ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಜಡ್ಜ್ ಲೋಯಾ ಅವರು ತನಿಖೆ ಮಾಡಲು ಬಿಡಲಿಲ್ಲ, ನಂತರ ಮೂರನೇಯವನು ಮಹಾ ಭೂಫ ಜಡ್ಜ್ ಬಂದು, ಅವನು ಬಂದು ಟ್ರಾಯಲ್ ಶುರುವಾಗದೇ ಎರಡನೇಯ ದಿವಸದಲ್ಲಿ ಎಲ್ಲ ಆರೋಪಿಗಳನ್ನೂ ಬಿಟ್ಟು ಬಿಡ್ತಾನೆ. ಸಿಬಿಐ ನಾಲಾಯಕರು ಅಪೀಲ್ ಸಹಿತ ಮಾಡೋದಿಲ್ಲ ಎಂದು ಅಮಿತ್​ ಶಾ ಗುಡುಗಿದ್ದಾರೆ. 
 
ಇನ್ನು ಎಷ್ಟು ಸರ್ಕಾರಿ ಸಂಸ್ಥೆಗಳನ್ನು, ಪ್ರಜಾಪ್ರಭುತ್ವ ಇನ್ಸ್ಟಿಟ್ಯೂಟ್​ಗಳನ್ನು ಹಾಳು ಮಾಡ್ತಿದ್ದಾರೆ ಅನ್ನೋದಕ್ಕೆ ಇದು ಉದಾಹರಣೆ. ಇಂತಹ ವ್ಯಕ್ತಿಗೆ ಈ ದೇಶ ಯಾವುದಕ್ಕೂ ಪ್ರವೇಶ ಕೊಡಬಾರದು. ಕ್ರಮ ಕೈಗೊಳ್ಳುವವರೆಗೂ ಬಿಡುವುದಿಲ್ಲ ಎಂದರು.

Find out more: