ಚಾಮರಾಜನಗರ: ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ರನ್ನು ಆಯ್ಕೆ ಮಾಡುವುದಕ್ಕೆ ಆಗಿಲ್ಲ, ಅವರಲ್ಲಿ ಐದು ಹುದ್ದೆ ಬೇಕಾದ್ರೂ ಹೊಂದಬಹುದು. ಆದರೆ, ಬಿಜೆಪಿ ಪಕ್ಷದಲ್ಲಿ ಇದಕ್ಕೆ ಅವಕಾಶ ವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಗುಡುಗಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯ ಮಂತ್ರಿಯಾದ ತಕ್ಷಣ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು. ಕಟೀಲ್ ಅಂತಾ ಸಾಮಾನ್ಯ ವ್ಯಕ್ತಿ ಬಿಜೆಪಿ ಅಧ್ಯಕ್ಷನಾದ ಎಂದು ತಮ್ಮ ಪಕ್ಷ ಬಿಜೆಪಿಯ ಶಿಸ್ತಿನ ಬಗ್ಗೆ ಸಮರ್ಥನೆ ಮಾಡಿಕೊಂಡರು. ಹೌದು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗಿನಿಂದಲೂ ಆ ಸ್ಥಾನ ಖಾಲಿ ಉಳಿದಿದೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಸೇರಿದಂತೆ ಯಾರನ್ನೂ ನೇಮಕ ಮಾಡಿಲ್ಲ,
ಭಯದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭಯ ದಿಂದ ರಾಹುಲ್ ಗಾಂಧಿ ಕೇರಳಕ್ಕೆ ಬಂದು ಚುನಾವಣೆಗೆ ನಿಂತರು ಎಂದು ಕೈ ಮುಖಂಡರನ್ನು ಟೀಕಿಸಿದರು. ಸದ್ಯ ಕಾಂಗ್ರೆಸ್ ನ ಹಿಂದಿನ ಸ್ಥಿತಿಗೆ ಮೂರು ಕಾರಣ. ಅಧಿಕಾರ ದಾಹ, ಭ್ರಷ್ಟಾಚಾರ, ಸಂಘಟನೆ ಕೊರತೆ ಕಾರಣ. ರಾಜ್ಯದ ದರಿದ್ರ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಜನರ ಕಣ್ಣಲ್ಲಿ ಕಣ್ಣೀರು ಭರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ಅವರನ್ನು ಜರಿದರು. ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರಣವನ್ನು ಸಹ ತಿಳಿಸಿದರು. ಕಾಂಗ್ರೆಸ್ ಪಕ್ಷ ದಲ್ಲಿ ಸಂಘಟನೆಯ ಕೊರತೆಯಿದೆ. ಆದ್ದರಿಂದ ಹೀನಾಯವಾಗಿ ಸೋತಿದೆ ಎಂದ ಕಳೆದ ವಿಧಾನ ಸಭಾ ಉಪ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದರು.
ಒಂದು ಕಾಲದಲ್ಲಿ ನರೇಂದ್ರ ಮೋದಿಗೆ ವೀಸಾ ನಿರಾಕರಣೆ. ಇದೀಗ ಅವರೇ ಗುಜರಾತ್ ನ ಅಹಮದ್ ಬಾದ್ ಗೆ ಬರಲು ಸಿದ್ಧರಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೇಲೆ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಆರು ವರ್ಷದ ಯಶಸ್ವಿ ಆಡಳಿತ ನಡೆಸಿದೆ, ಮುಂದೆಯೂ ನಡೆಸಲಿದೆ ಎಂದು ಮೋದಿ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು.