ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರು, ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ ರನ್ನು ಉಲ್ಲೇಖಿಸಿದ್ದರು. ಪ್ರೇರಣೆ ಹಾಗೂ ಸಕರಾತ್ಮಕ ಚಿಂತನೆ ಕುರಿತು ಮಕ್ಕಳಿಗೆ ಮೋದಿ ಹೇಳಿದ ಪಾಠ ಹಾಗೂ ತನ್ನ ಊದಾಹರಣೆ ನೀಡಿದ ಮೋದಿಗೆ ಅನಿಲ್ ಕುಂಬ್ಳೆ ಧನ್ಯವಾದ ತಿಳಿಸಿದ್ದಾರೆ. 
 
ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಹೇಗೆ ತಯಾರಿ ನಡೆಸಬೇಕು, ಭಯ ನಿವಾರಿಸಬೇಕು ಅನ್ನೋ ಕುರಿತು ಮೋದಿ ಮಕ್ಕಳಿಗೆ ಪಾಠ ಹೇಳಿದ್ದಾರೆ. ಭಯ ಹೋಗಲು ಮಕ್ಕಳು ಯಾವ ರೀತಿ ತಯಾರಿ ನಡೆಸಿಕೊಳ್ಳುಬೇಕು ಎಂದು ಸಹ ಹೇಳಿದ್ದರು. ಅದೇ ವೇಳೆ ವಿದ್ಯಾರ್ಥಿಗಳನ್ನು ಉತ್ತೇಜನ ಗೊಳಿಸಲು ಮೋದಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ಣ ಉದಾಹರಣೆ ನೀಡಿದ್ದರು.
 
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತನ್ನನ್ನು ಉದಾಹರಿಸಿದ ಪ್ರಧಾನಿ ನರೇಂದ್ರ ಮೋದಿಗೆ ಭಾರತ ಕ್ರಿಕೆಟ್‌ ತಂಡ ಮಾಜಿ ನಾಯಕ ಅನಿಲ್‌ ಕುಂಬ್ಳೆ ಧನ್ಯವಾದ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಆಸ್ಪ್ರೇಲಿಯಾ ವಿರುದ್ದ ಟೆಸ್ಟ್‌ ಪಂದ್ಯದಲ್ಲಿ ಫಾಲೋ ಆನ್‌ ಇದ್ದರೂ ರಾಹುಲ್‌ ದ್ರಾವಿಡ್‌ ಹಾಗೂ ವಿವಿಎಸ್‌ ಲಕ್ಷಣ್‌ ಉತ್ತಮ ಜತೆಯಾಟ ವಾಡಿ ಭಾರತವನ್ನು ಗೆಲ್ಲಿಸಿದ್ದು, ದವಡೆ ಮುರಿದರೂ ಅನಿಲ್‌ ಕುಂಬ್ಳೆ ಬೌಲಿಂಗ್‌ (2002ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ) ಮಾಡಿದ್ದು ಮರೆಯಲು ಸಾಧ್ಯವಾ? ಇದು ಪ್ರೇರಣೆ ಮತ್ತು ಸಕಾರಾತ್ಮಕ ಚಿಂತನೆಯ ಫಲ ಎಂದು ಪ್ರಧಾನಿ ಹೇಳಿದ್ದರು. 
 
ಇದಕ್ಕೆ ಟ್ವೀಟ್‌ ಮೂಲಕ ಧನ್ಯವಾದ ಸಲ್ಲಿಸಿರುವ ಕುಂಬ್ಳೆ, ಪ್ರಧಾನಿ ನನ್ನ ಹೆಸರು ಉಲ್ಲೇಖಿಸಿದ್ದು ಗೌರವ ತಂದಂತಾಗಿದೆ. ಧನ್ಯವಾದ ಮೋದಿಯವರೇ. ಪರೀಕ್ಷೆ ಬರೆಯುವರಿಗೆ ಶುಭವಾಗಲಿ ಎಂದು ಹೇಳಿದ್ದಾರೆ. ಇದೀಗ ಈ ಸುದ್ದಿ ಕುಂಬ್ಳೆ ಸೇರಿದಂತೆ ಆವರ ಅಭಿಮಾನಿಗಳಿಗೆ ಸಂತಸ ತಂದಿದೆ.

Find out more: