ತಿರುವಂತನಪುರ, ಮಾರ್ಚ 11 : ಇಡೀ ದೇಶದಲ್ಲಿಯೇ ಕರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಇದು ತುಂಬಾ ಭಯಭೀತಿಯನ್ನು ಉಂಟು ಮಾಡಿದೆ. ಹೀಗಾಗಿ ಆಯಾ ರಾಜ್ಯಗಳ ಸರಕಾರಗಳು ಕರೋನಾ ಸೋಕು ಹರಡದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರೋದು ಸತ್ಯ. ಇದರ ಮಧ್ಯೆ ಕೇರಳದ ಪ್ರಸಿದ್ಧ ದೇವಸ್ಥಾನ ಶಬರಿಮಲೆಯ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಭಕ್ತರು ಬರದಂತೆ ಮನವಿ ಮಾಡಿಕೊಂಡಿದೆ.

 

ಪ್ರಿಯ ಭಕ್ತರೇ ದಯವಿಟ್ಟು ಶಬರರಿಮಲೆಗೆ ಬರಬೇಡಿ:

 

ಹೌದು. ಶಬರಿಮಲೇ ದೇಗುವ ಪ್ರತಿ ತಿಂಗಳೂ, ಪ್ರತಿ ದಿನವೂ ಪೂಜೆಗೆಂದು ತೆದೆದಿರುತ್ತದೆ. ಹೀಗಾಗಿ ದಿನವೂ ಸಾವಿರಾರು/ಲಕ್ಷಾಂತರ ಜನರು ಬಂದು ಹೋಗುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಕರೋನಾ ಸೋಂಕಿತ ಏನಾದರೂ ಅಲ್ಲಿಗೆ ಆಗಮಿಸಿದರೆ ಅಲ್ಲಿನ ಸಾವಿರಾರು ಜನರಿಗೆ ಕರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಶಬರಿಮಲೇ ದೇವಸ್ಥಾನ ಮಂಡಳಿಯು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ.

 

ಪ್ರಿಯ ಭಕ್ತರೇ ದಯವಿಟ್ಟು ಶಬರಿಮಲೆಗೆ ಬರಬೇಡಿ :

 

ಅಷ್ಟಕ್ಕೂ ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್.ವಾಸು ಅವರು ಹೇಳಿದ್ದೇನು ಗೊತ್ತಾ? ಭಕ್ತರು ಸದ್ಯಕ್ಕೆ ದೇವಸ್ಥಾನಕ್ಕೆ ಬರಬೇಡಿ, ಅಲ್ಲದೇ ಸಾರ್ವಜನಿಕ ಹಬ್ಬ ಹರಿದಿನಗಳಲ್ಲಿ ಭಾಗವಹಿಸಬೇಡಿ. ಈ ಮೂಲಕ ನೀವು ನಿಮ್ಮನ್ನು ಕರೋನಾಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ಹಾಗೂ ಸಂದೇಶವನ್ನು ನೀಡಿದ್ದಾರೆ. 

 

ಕೇರಳಲ್ಲಿ ಪತ್ತೆಯಾದ ಕರೋನಾ ಸೋಕಿತರೆಷ್ಟು?

 

ಇದುವರೆಗೂ ಕೇರಳಲ್ಲಿ ಒಟ್ಟಾರೆ 14 ಕರೋನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆ ಆಗಿವೆ. ಸೋಮವಾರದಂದು 3 ವರ್ಷದ ಮಗು ಸೇರಿದಂತೆ ಆರು ಮಂದಿ ಕರೋನಾ ವೈರಸ್ ಸೋಂಕು ಪತ್ತೆ ಆಗಿತ್ತು.  ಅಲ್ಲದೇ ಇದೇ ಮಂಗಳವಾರ ಇಲ್ಲಿ ಆರು ಹೊಸ ಪ್ರಕರಣಗಳೂ ಪತ್ತೆ ಆಗಿದ್ದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಮೂರು ವರ್ಷದ ಮಗುವಿನ ಪೋಷಕರಲ್ಲಿಯೂ ಸೋಂಕು ಇರುವುದು ಸ್ಪಷ್ವವಾಗಿತ್ತು. ಇದರಿಂದ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 14 ಕ್ಕೆ ಇದೀಗ ಏರಿಕೆ ಆಗಿದೆ ಎಂದು ಕೇರಳದ ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ ಈ ಕರೋನಾ ವೈರಸ್ ಭೀತಿಗೆ ಕೊನೆಯೆಂದು ಅಂತ ಎಲ್ಲರೂ ಚಿಂತಾಕ್ರಾಂತಿತರಾಗಿರೋದು ಸತ್ಯ.

Find out more: