ಭೋಪಾಲ್: ಸದ್ಯ ಮಧ್ಯಪ್ರದೇಶದ ರಾಜಕಾರಣ ಇಡೀ ದೇಶದ ಗಮನವನ್ನೇ ಸೆಳೆಯುತ್ತಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಇದೀಗ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಅಜ್ಜಿಯೂ ಇದೇ ನಡೆಯನ್ನು ಅನುಸರಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಈ ಕುರಿತು ಮಾತನಾಡಿದ್ದಾರೆ.
ಸದ್ಯ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದ್ದಾರೆ. ಆದರೆ ಅವರಿಗೆ ಈ ಮೊದಲು ಕಾಂಗ್ರೆಸ್ ಪಕ್ಷದಿಂದ ಡಿಸಿಎಂ ಹುದ್ದೆಯ ಆಫರ್ ನೀಡಲಾಗಿತ್ತು . ಆದರೆ ಅವರು ತಮ್ಮ ಬೆಂಬಲಿಗನೊಬ್ಬನನ್ನು ಆ ಹುದ್ದೆಗೆ ಏರಿಸಬೇಕೆಂದು ಹೇಳಿದ್ದ ಕಾರಣ ಸಿಎಂ ಕಮಲ್‌ನಾಥ್ ಅದನ್ನು ಒಪ್ಪಲಿಲ್ಲ ಎಂದು ದಿಗ್ವಿಜಯ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಷ್ಟಕ್ಕೂ ಕಮಲನಾಥ್ ಅವರು ಆ ವ್ಯಕ್ತಿಯನ್ನು ಯಾಕೆ ಒಪ್ಪಲಿಲ್ಲವೆಂದರೆ, ಆ ನಾಯಕರೊಬ್ಬರ ಚೇಲಾ ಎಂದು. ಹಾಗೂ ಸಿಂಧಿಯಾರ ಆಪ್ತರಾಗಿದ್ದ ಆರು ಜನ ಶಾಸಕರನ್ನು ಕಮಲನಾಥ್ ಅವರು ಸಂಪುಟಕ್ಕೆ ಸೇರಿಕೊಂಡರು. ಈ ಪ್ರಕರಣ ಎಲ್ಲವೂ ಮೊದಲೇ ರೂಪಿಸಿದ್ದ ಯೋಜನೆಯಂತೆ ನಡೆದಿದೆ ಎಂದರು.
ಇನ್ನು ಗ್ವಾಲಿಯರ್ ನಲ್ಲಿ ಜನ ಸಿಂಧಿಯಾ ಬಿಜೆಪಿ ಸೇರ್ಪಡೆ ಬಗ್ಗೆ ಏನು ಹೇಳುತ್ತಿದ್ದಾರೆ? ಇಲ್ಲಿನ ಜನರು ಜೋತಿರಾಧಿತ್ಯ ಸಿಂಧಿಯಾ ಅವರ ನಡೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಧೀಯಾ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಗುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ ಅವರು ಅಲ್ಲಿ ಸೋಲು ಅನುಭವಿಸಿದ್ದರು. ನಂತರ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯತನದಿಂದ ಬೇಸತ್ತು ಸಿಂಧಿಯಾ, ಬಿಜೆಪಿ ಸೇರಿದ್ದಾರೆ. ಅವರ ನಿರ್ಧಾರ ಸರಿ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಕಾಂಗ್ರೆಸ್ ನಲ್ಲಿಯೇ ನೆಲೆ ಕಾಣದ ಅವರು ಬಿಜೆಪಿಯಲ್ಲಿ ನೆಲೆ ಕಾಣುವರೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬೆಳವಣಿಗೆ ಕುರಿತು ಎನ್.ಸಿ.ಪಿ ನಾಯಕ ಶರದ್ ಪವಾರ್ ಅವರು ಹೇಳಿದ್ದೇನೆಂದರೆ, ಮಧ್ಯಪ್ರದೇಶದಲ್ಲಿ ಉಲ್ಬಣಿಸಿದ ಬಿಕ್ಕಟ್ಟು ಮಹಾರಾಷ್ಟ್ರದಲ್ಲಿ ಇಲ್ಲ. ಕಾಂಗ್ರೆಸ್, ಶಿವಸೇನೆ ಹಾಗೂ ಎನ್‌ಸಿಪಿಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸಹಭಾಗಿತ್ವ ಹೊಂದಿರುವ ಪಕ್ಷಗಳ ನಡುವೆ ಬಾಂಧವ್ಯವೂ ಉತ್ತಮವಾಗಿದೆ ಎಂದು ಶರದ್ ಪವಾರ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.