ಕರೋನಾ ವೈರಸ್ ಕುರಿತು ಇದೀಗ ಇಡೀ ಜಗತ್ತಿನಲ್ಲಿಯೇ ಆತಂಕದ ವಾತಾವರಣ ಸೃಷ್ಟಿ ಆಗಿದೆ. ಕರೋನಾ ವೈರಸ್ ನಿಂದಲೇ ಕರ್ನಾಟಕದಲ್ಲಿ ಒಂದು ಸಾವು ಸಂಭವಿಸಿತ್ತು. ಅದೇ ಸಂದರ್ಭದಲ್ಲಿ ಕರ್ನಾಟಕದ ಕೆಲವು ಮೀಡಿಯಾಗಳು ಇದನ್ನು ನಿರಂತರವಾಗಿ ವರದಿ ಪ್ರಸಾರ ಮಾಡಿದವು. ಜಗತ್ತಿನಲ್ಲಿ ಒಟ್ಟಾರೆಯಾಗಿ 5000ಕ್ಕೂ ಹೆಚ್ಚು ಜನರ ಪ್ರಾಣವನ್ನು ಕರೋನಾ ಬಲಿ ಪಡೆದಿದೆ. ಈ ಸಂದರ್ಭದಲ್ಲಿ ಪತ್ರಕರ್ತರು ಕರೋನಾ ಸೋಂಕಿತರ ಬಗ್ಗೆ ಪ್ರತ್ಯಕ್ಷ್ಯ ವರದಿ ಮಾಡುತ್ತಿರುವುದು ಅಪಾಯ ಎಂದು ತಿಳಿದು ಬಂದಿದೆ. 

 

ಕರ್ನಾಟಕದಲ್ಲಿ ಮೊದಲ ಕರೋನಾ ಬಲಿ :

ಹೌದು, ಕಲಬುರಗಿಯಲ್ಲಿ ಕರೋನಾ ವೈರಸ್ ನಿಂದ ಮೊದಲ ಬಲಿ ಆಗಿದ್ದೆ ಸಿದ್ದಿಕಿ ಎನ್ನುವ ವ್ಯಕ್ತಿ ಒಬ್ಬರು. ಈ ವ್ಯಕ್ತಿಯು ಕರೋನಾದಿಂದ ಮೃತಪಟ್ಟ ಮೊದಲ ಭಾರತೀಯ. ಹೀಗಾಗಿ ಈ ಬಗ್ಗೆ ಸುದ್ದಿ ಮಾಡೋಕೆ ಅಂತ ಪತ್ರಕರ್ತರು ದಾವಂತದಲ್ಲಿ ಅವರ ಮನೆಗೆ ಹೋಗಿ ಅವರ ಮನೆಯವರ ಸಂದರ್ಶನ ಮಾಡಿದ್ದರು. ಸಿದ್ದಿಕಿ ಬಗ್ಗೆ ಸುದ್ದಿ ಹೆಕ್ಕಿ ತೆಗೆದಿದ್ರು. ಆದರೆ ಹೀಗೆ ಮಾಡೊದಕ್ಕಿಂತ ಮುಂಚೆ ಅವರು ತಮ್ಮ ಸುರಕ್ಷತೆಯನ್ನು ಮರೆತು ಬಿಟ್ಟಿದ್ದರು. 

 

ಸಿದ್ದಿಕಿ ಮನೆಯವರನ್ನು ಇದೀಗ ಆರೋಗ್ಯ ಇಲಾಖೆ ಪರೀಕ್ಷೆಗೆ ಒಳಪಡಿಸಿದೆ. ಯಾಕೆಂದರೆ ಸಿದ್ದಿಕಿಯಿಂದಲೇ ಅವರ ಮನೆಯವರಿಗೆ ಸೋಂಕು ತಗುಲಿದೆಯೇ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇದೇ ಕಾರಣಕ್ಕೆ ಸಿದ್ದಿಕಿ ಮನೆಯವರನ್ನು ಇದೀಗ ಯಾರೂ ಸಂದರ್ಶನ ಮಾಡಬಾರದು ಎಂದು ಆದೇಶ ಹೊರಡಿಸಲಾಗಿದೆ.

 

ಈ ಹಿಂದೆ ಸಿದ್ದಿಕಿ ಮನೆಯವರನ್ನು ಸಂಧರ್ಶನ ಮಾಡಿದ ಪತ್ರಕರ್ತರನ್ನು ದಿಗ್ಬಂದನದಲ್ಲಿ ಇರಿಸಲಾಗಿದೆ. ಹೌದು ಈ ಕುರಿತು ಕಲಬುರಗಿ ಡಿಸಿ ಶರದ್ ಅವರು ಆದೇಶ ಹೊರಡಿಸಿದ್ದಾರೆ. ಇನ್ಮೇಲೆ ಯಾರೂ ಸಿದ್ದಿಕಿ ಅವರ ಮನೆಗೆ ಹೋಗಿ ಸಂದರ್ಶನ ತೆಗೆದುಕೊಳ್ಳಬಾರದು ಎಂದು ಅವರು ಹೇಳಿದ್ದಾರೆ. ಹೀಗೆ ಪತ್ರಕರ್ತರನ್ನು ಇದೀಗ ಸಿದ್ದಿಕಿ ಅವರ ಮನೆಯಿಂದ ದೂರ ಇಡಲಾಗಿದೆ. 

 

ಕೇವಲ ಕಲ್ಬುರಗಿ ಅಷ್ಟೇ ಅಲ್ಲದೇ, ಇತ್ತ ಮೈಸುರು ಡಿಸಿಯೂ ಕೂಡ ಇದೇ ರೀತಿಯಲ್ಲಿ ಅದೇಶ ಹೊರಡಿಸಿದ್ದಾರೆ. ಹೀಗಾಗಿ ಪತ್ರಕರ್ತರು ಇದೀಗ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಹೊರತು ಸುದ್ದಿ ಮಾಡುವ ಧಾವಂತದಲ್ಲಿ ಕರೋನಾ ವೈರಸ್ ಗೆ ಬಲಲಿಯಾವುದ ತರವಲ್ಲ ಎನ್ನಲಾಗುತ್ತಿದೆ.

 

Find out more: