ನಮಗೆ ಕರ್ನಾಟಕದಲ್ಲಿ ಬೌದ್ಧಧರ್ಮದ ಬಗ್ಗೆ ಕುರುಹು ಸಿಗದ ಹಾಗೇ ದ್ವಂಸ ಮಾಡಿ ಬುದ್ಧನ ದೇವಾಲಯಗಳು,ಅವನ ಪದ್ಮರ ದೇವಾಲಯಗಳು ಹಾಗೂ ಎಮ್ಮೆ ಕಾಯಿಕೊಂಡು ಇದ್ದ ಬೌದ್ಧ ಸನ್ಯಾಸರನ್ನು ವೈದಿಕ ಸಂಪ್ರದಾಯ ಕೊಂದು ತನ್ನ ಆಸ್ಥಿತ್ವವನ್ನು ಕಾದುಕೊಂಡಿದ್ದು ಒಂದುಕಡೆಯಾದರೆ ಅಲ್ಲಲ್ಲಿ ಬೌದ್ಧ,ಜೈನರ ದೇವಾಲಯಗಳ ಒಡೆದು ಪದ್ಮರನ್ನು ವಿಷ್ಣು ದೇವರನ್ನಾಗಿ, ಯಕ್ಷಿಯರನ್ನು ಹೆಣ್ಣು ದೇವರನ್ನಾಗಿ ದೇವಾಲಯಗಳನ್ನು ಕಟ್ಟಿದ್ದು. ನಮ್ಮ ಭಾರತದ ದೇವಾಲಯದ ವಾಸ್ತುಶಿಲ್ಪದ ಪ್ರಕಾರ ನೋಡುವುದಾದರೆ ಅದು ಬೌದ್ಧ ದೇವಾಲಯದ ವಾಸ್ತುಶಿಲ್ಪದ ತಳಹಾದಿಯೇ ಹೊರತು ಬೇರೆಯಲ್ಲ ಎಂಬುದು ತಿಳಿಯುತ್ತದೆ. 

 

 

             ಕ್ರಿ.ಪೂರ್ವದಲ್ಲಿಯೇ ಬುದ್ಧನ ದೇವಾಲಯಗಳು ಶಿಕ್ಷಣ,ವೈದ್ಯ,ಆಶ್ರಯಗಳ ನೀಡಿದ ದಾಖಲೆಗಳು ನಮಗೆ ಈಗಲೂ ದೊರೆಯುತ್ತವೆ. ಸುಮಾರು ಸಾವಿರಾರು ವರ್ಷಗಳ ಹಿಂದೆ ಬೌದ್ಧ ಧರ್ಮ ಮತ್ತು ವೈದಿಕ ಧರ್ಮಕ್ಕೆ ಸಂಘರ್ಷ ಹಾಗೂ ಯುದ್ಧದ ವೈಮನಸ್ಸುಗಳನ್ನು ಚೀಣಾದ ಗ್ರಂಥಗಳಲ್ಲಿ ನೋಡಬಹುದು. ಧರ್ಮದ ಸಮನ್ವಯವ ಬಿಟ್ಟು ಮತ್ತೊಂದು ಕಡೆ ನೈಜ ಘಟನೆಯನ್ನು ಅರಿಯುವುದಾದರೆ ಸತ್ಯವನ್ನೆ ಹೇಳಬೇಕು. ನಮ್ಮ ಭಾರತದ ಇತಿಹಾಸ ಎಷ್ಟು ಸುಳ್ಳಿನ ಸೆರೆಮನೆಯಂತೆ ಕಾಣುತ್ತಿದೆಯೆಂಬುದನ್ನು ಅವಲೋಕಿಸಿಕೊಂಡರೆ ಈ ಭಾರತವೆನ್ನುವ ದೇಶ ಸುಳ್ಳು. ಇಲ್ಲಿ ಎಲ್ಲಾ ಧರ್ಮಗಳ,ಎಲ್ಲಾ ಆಚಾರಗಳ ಹಾಗೂ ದೇಶ ದೇಶದ ರಾಜರುಗಳು ಬಂದು ಅಧಿಕಾರ ಮತಪ್ರಚಾರ ಮುಂತಾದ ರೀತಿಯ ನೆಲೆಯನ್ನು ಆರಂಭಿಸಿರುವುದನ್ನು ಕಾಣಬಹುದು.

 

 

        ಇದೆಲ್ಲ ಇರಲಿ;ಇದ್ಯಾರು ಅವಲೋಕಿತೇಶ್ವರ ಮತ್ತು ಮಹಿಷಾಮರ್ದನ, ಚಾಮುಂಡಿ,ಮಹಿಸಾಸುರ ಇವೆಲ್ಲವನ್ನು ಕೆದುಕುತ್ತಾ ಹೋದಂತೆ ಕರ್ನಾಟಕದ ಬೌದ್ಧರ ವಾಸಸ್ಥಳಗಳೆ ಅವಲೋಕಿತೇಶ್ವರನ ದೇವಾಲಯಗಳು ಮುಂದೆ ಈ ಅವಲೋಕಿತೇಶ್ವರನೆ ಚಾಮುಂಡಿಯಾಗಿ,ಮಹಿಷಾಮರ್ದಿನಿಯಾಗಿ ಕಾಣುತ್ತದೆ. ಬೌದ್ಧರು ಹೆಚ್ಚಾಗಿ ಎಮ್ಮೆಗಳನ್ನು ಸಾಕುತ್ತಿದ್ದರು ನಮ್ಮ ಮೈಸೂರಿನಲ್ಲಿಯೂ ಹೆಚ್ಚಾಗಿ ಎಮ್ಮೆಗಳಿರುವುದನ್ನು ಕಾಣಬಹುದು. ಮಹಿಷಾಸುರ ಎಂದರೆ ಮಹಿಷಾ = ಎಮ್ಮೆಗಳು, ಅಸುರ ಎಂಬ ಪರಿಕಲ್ಪನೆ ಬಂದಿರೋದು ತನ್ನ ಧರ್ಮಕ್ಕೆ ವಿರೋಧನಾಗಿರುವವರನ್ನು ಅಸುರರು ಎಂದು ಕರೆದಿರುವುದು ಅಥವಾ ಬುಡಕಟ್ಟು ಜನಾಂಗ.

 

 

           ಚಾಮುಂಡ ಪದದ ಉತ್ಪತ್ತಿ ಹೀಗಿದೆ; ಪ್ರಾಕೃತದಲ್ಲಿ ಚಾಉಂಡ = ಬೌದ್ಧ ಧರ್ಮದ ಸನ್ಯಾಸಿ, ಸುಂದರವಾದ ಅಂಗವುಳ್ಳ ರಾಜ. ಹಾಗೇ, ಚಾಮುಂಡಿ= ಚಾಉಅಂಗೀ ; ಸುಂದರ ಅಂಗವುಳ್ಳ ಹೆಣ್ಣು. ಹೀಗೆ ಅರ್ಥೈಯಿಸಬಹುದು. 

 

 

ಭಾರತದಲ್ಲಿ ಸುಮಾರು ಅವಲೋಕಿತೇಶ್ವರನ ದೇವಾಲಯಗಳು ಮಹಿಷಾಮರ್ದಿನಿ,ಗಜಮರ್ದನ, ಮುಂತಾದ ಹೆಸರು ಪಡೆದುಕೊಂಡಿವೆ. ನಮ್ಮಲ್ಲಿ ಸ್ಪಷ್ಟವಾಗಿ ದಾಖಲೆ ಸಿಗದ ಕಾರಣ ಏನೇನೋ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದೇವೆ. 

 

 

ಹಾಗದರೆ ಯಾರಿವ ಅವಲೋಕಿತೇಶ್ವರ?ಎಂದರೆ ಇವನೊಬ್ಬ ಬುದ್ಧನ ಪೂಜಿಸುವ ರಾಜ, ಆರಾಧಕ.  ಈಶ್ವರನಂತೆಯೇ ಹಿಮಾಲಯಗಳಲ್ಲಿ ಎಮ್ಮೆಗಳನ್ನು ಮೇಯಿಸಿಕೊಂಡು ಬುದ್ಧನ ಆತ್ಮ ಪ್ರೇರಣೆಗೊಳಗಾಗಿ ಕೆಟ್ಟ ಜನರನ್ನು ಶಿಕ್ಷಿಸಿದ, ಸಹೃದಯ ಬೌದ್ಧರನ್ನು ಪ್ರೀತಿಸಿದ. ಬೌದ್ಧ ವೈರಾಗಿ ಮತ್ತು ಸನ್ಯಾಸಿಯಾಗಿರುವುದರಿಂದ ಮುಂದೆ ಬೌದ್ಧರಲ್ಲಿಯೂ ಕೂಡಾ ಪದ್ಮರೂ ಹಾಗೂ ಅದೃಶ್ಯ ದೇವತೆಗಳು ಹುಟ್ಟಿಕೊಳ್ಳುತ್ತಾರೆ. ಇವರನ್ನು ಬೇಡಿದರೆ ಇಷ್ಟಾರ್ಥಗಳು ಸಿಗುವುದೆಂಬ ನಂಬಿಕೆ. 

 

 

ನನ್ನ ಪ್ರಕಾರ ಮೈಸೂರಿನ ಬೆಟ್ಟ ಬೌದ್ಧರ ತಾಣವಾಗಿತ್ತು ಎಂದು ಹೇಳುವುದಕ್ಕೆ ಯಾವುದೆ ಅಡೆತಡೆಯಿಲ್ಲ. ಈ ಅವಲೋಕಿತೇಶ್ವರನೇ ಮುಂದೆ ಚಾಮುಂಡಿಯಾಗಿ ನೆಲೆಸಿರುವುದು. 

--- ಸಾಕಮ್ಮ ಕರಿಗದ್ದೆ

 

Find out more: