
ಬೆಂಗಳೂರು : ಉದ್ಯೋಗಿಗಳಿಗೆ ಕರೋನಾ ವೈರಸ್ ಹರಡಬಾರದು ಎನ್ನುವ ಮುನ್ನೆಚ್ಚರಿಕೆ ಕ್ರಮದಿಂದ ಈಗಾಗಲೇ ಅನೇಕ ಐಟಿ ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಮ್ ಹೋಮ್ ಅವಕಾಶವನ್ನು ಕೊಟ್ಟಿವೆ.ಹೀಗಾಗಿ ಇದೀಗ ಸರ್ಕಾರವೂ ಇದನ್ನೇ ಫಾಲೋ ಮಾಡೋಕೆ ಮುಂದಾಗಿದೆ. ಹೌದು ಸರ್ಕಾರದ ವಿವಿಧ ಇಲಾಖೆಯ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೇ ತುರ್ತು ಸೇವೆಗಳ ಅಗತ್ಯ ಇರುವ ಇಲಾಖೆಗಳನ್ನು ಮಾತ್ರ ಈ ಅವಕಾಶ ಇಲ್ಲ.
ಅಷ್ಟಕ್ಕೂ ಈ ಸುತ್ತೋಲೆಯಲ್ಲಿ ಏನಿದೆ?
ಎ ಗುಂಪಿನ ಸಿಬ್ಬಂದಿ ಕಡ್ಡಾಯವಾಗಿ ವರ್ಕ್ ಫ್ರಂ ಹೋಮ್ ಪಾಲಿಸಬೇಕು. ಅಂದರೆ ಇವರು ಮೆನಯಲ್ಲಿಯೇ ಕುಳಿತು ಕೆಲಸ ಮಾಡಬೇಕು. ಇನ್ನು ಬಿ ಮತ್ತು ಸಿ ವರ್ಗದ ಸಿಬ್ಬಂದಿ ಪೈಕಿ ಶೇಕಡಾ 50 ರಷ್ಟು ಮಂದಿ ಕಚೇರಿಗೆ ಬರುವ ಅವಕಾಶ ಇದೆ, ಇನ್ನುಳಿದವರು ಮನೆಯಿಂದಲೇ ಅವರ ಕೆಲಸವನ್ನು ಮಾಡಬಹುದು. ಅದಕ್ಕೂ ಮೊದಲು ಮುಖ್ಯಸ್ಥರು ವಾರದ ರೋಸ್ಟರ್ ಅನ್ನು ಸಿದ್ದಪಡಿಸಬೇಕು. ನಂತರ ಒಂದು ವಾರದ ನಂತರ ಅದನ್ನು ಅದಲು ಬದಲು ಮಾಡಬೇಕು.
ಇನ್ನು ಕಚೇರಿಗೆ ಬರುವ ಸಿಬ್ಬಂಧಿಗಳನ್ನು ಮೂರು ಪಾಳೆಯದಲ್ಲಿ ವಿಂಗಡನೆ ಮಾಡಬೇಕು. ಬೆಳಿಗ್ಗೆ ಪಾಳಿ ಅಂದರೆ, 9 ರಿಂದ 5 :30, ಎರಡನೇ ಪಾಳಿ 9:30 ರಿಂದ 6, ಇನ್ನು ಮೂರನೇ ಪಾಳಿ ಅಂದರೆ ಅದು 10 ಗಂಟೆಯಿಂದ 6:30 ವರೆಗೆ ನಿಗದಿ ಮಾಡಿ ರೋಸ್ಟರ್ ಸಿದ್ದಮಾಡಬೇಕು. ಆದರೆ ಮನೆಯಿಂದ ಕೆಲಸ ಮಾಡುವ ಸಿಬ್ಬಂದಿ ಪೋನ್ ಮತ್ತು ಈಮೇಲ್ ಮೂಲಕ ಸಂಪರ್ಕಕ್ಕೆ ಸಿಗಬೇಕು. ತುರ್ತು ಸಂದರ್ಭ ಬಂದರೆ ಅವರು ಕಚೇರಿಗೆ ಬರಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಅಷ್ಟಕ್ಕೂ ಈ ಸುತ್ತೋಲೆ ಬಂದಿರೋದು ಎಲ್ಲಿಂದ?
ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಅಹವಾಲು ಇಲಾಖೆ ಮತ್ತು ಪಿಂಚಣಿ ಇಲಾಖೆ ಹಾಗೂ ತರಬೇತಿ ಇಲಾಖೆಯಿಂದ ಈ ಸುತ್ತೋಲೆ ಬಂದಿದೆ. ಇನ್ನು ಹಣಕಾಸು ಸೇವೆಗಳ ಇಲಾಕೆ ಮಾರ್ಚ್ 17 ರಂದು ಜಾರಿ ಆಗಿರುವ ನಿಯಮ ಏಪ್ರಿಲ್ 4 ರ ತನಕ ಚಾಲ್ತಿಯಲ್ಲಿರಲಿದೆ.