ಹೈದರಾಬಾದ್ : ಕರೋನಾ ವೈರಸ್ ಇದೀಗ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಹೌದು ಇದರಿಂದ ಜನರು ಗಾಬರಿ ಆಗಿದ್ದಾರೆ. ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇದೀಗ ಅನೇಕ ದೇವಸ್ತಾನಗಳನ್ನು ಕ್ಲೋಸ್ ಮಾಡಲಾಗಿದೆ. ಅದರ ಪಟ್ಟಿಗೆ ಇದದೀಗ ತಿರುಪತಿ ವೆಂಕಟೇಶ್ವರ ದೇವಾಲಯವೂ ಸೇರಿದೆ.
ಹೌದು, ತಿರುಪತಿ ದೇವಸ್ಥಾನ ಮಂಡಳಿಯ ಮುಖ್ಯಸ್ಥರಾದ ವೈ.ಬಿ.ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ತರ್ತು ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದನ್ನು ಎನ್‌ಡಿಟಿವಿ ವರದಿ ಮಾಡಿದೆ, ಇನ್ನು ದೇವಾಲಯಕ್ಕೆ ಮಾಹಾರಾಷ್ಟ್ರದಿಂದ ಬಂದಿದ್ದ ಭಕ್ತರೊಬ್ಬರು ಜ್ವರ, ಕೆಮ್ಮು ಹಾಗೂ ನೆಗಡಿಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.
ಅಷ್ಟಕ್ಕೂ ಎಷ್ಟು ದಿನಗಳ ಕಾಲ ದೇವಸ್ಥಾನಕ್ಕೆ ಪ್ರವೇಶ ನಿಷೇಧ?
ಒಂದು ವಾರಗಳ ಕಾಲ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿರಾಕರಣೆ ಮಾಡಲಾಗಿದೆ. ಅಲ್ಲದೇ ಪ್ರತಿ ದಿನವೂ ಪರಿಶೀಲನೆ ನಡೆಸಲಾಗುತ್ತದೆ. 1892ರಲ್ಲಿ ದೇವಸ್ಥಾನ ಎರಡು ದಿನಗಳ ಕಾಲ ಮುಚ್ಚಲಾಗಿತ್ತು. ಇದೀಗ ಅಷ್ಟೊಂದು ವರ್ಷಗಳ ನಂತರ, ಇದೇ ಮೊದಲ ಬಾರಿಗೆ ತಿರುಪತಿ ದೇವಾಲಯ ಪ್ರವೇಶ ನಿರ್ಬಂಧ ಹೇರಲಾಗಿದೆ . ಇದು ಇನ್ನೂ ಎಷ್ಟು ದಿನಗಳ ಕಾಲ ಇರುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಕಳೆದ ಕೆಲವು ದಿನಗಳಿಂದಲೂ ದೇವಸ್ಥಾನಕ್ಕೆ ಬರುವುದನ್ನು ತಪ್ಪಿಸುವಂತೆ ಭಕ್ತಾದಿಗಳಲ್ಲಿ ಮನವಿ ಮಾಡುತ್ತಿದ್ದೇವೆ. ಈಗ ದೇವಸ್ಥಾನವನ್ನೇ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ನಿತ್ಯದ ಪೂಜಾಕಾರ್ಯಗಳನ್ನು ಅರ್ಚಕರು ನೆರವೇರಿಸಲಿದ್ದಾರೆ' ಎಂದು ಮುಖ್ಯಸ್ಥರು ಹೇಳಿದ್ದಾರೆ. ಈಗಾಗಲೇ ಮಹಾರಾಷ್ಟ್ರದದಿಂದ ಸುಮಾರು 100 ಜನ ಯಾತ್ರಿಗಳು ದೇವಸ್ಥಾನಕ್ಕೆ ಬಂದಿದ್ರು ಅವರಿಗೆ ಇದೀಗ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ.
ನಿಮಗೆ ಗೊತ್ತಿರಲಿ, ದಿನನಿತ್ಯವೂ ದೇವಾಲಯಕ್ಕೆ 75000 ದಿಂದ 90000 ಯಾತ್ರಿಕರು ಬರುತ್ತಾರೆ. ಇದನ್ನು ತಪ್ಪಿಸಲು ದೇವಸ್ಥಾನ ಮಂಡಳಿ ಪ್ರಯತ್ನ ಪಟ್ಟರೂ 30000 ಮಂದಿ ಭಕ್ತಾದಿಗಳು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಆದಷ್ಟು ಕರೋನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಮಂಡಳಿ ಈ ನಿರ್ಧಾರಕ್ಕೆ ಬಂದು ದೇವಸ್ಥಾನಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ.