ಬೆಂಗಳೂರು: ಕರೋನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕವನ್ನು ಲಾಕ್ ಡೌನ್ ಮಾಡಿರುವಂತಹ ಹಿನ್ನಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಆಗಿರುವುದರಿಂದ ಬಿಪಿಎಲ್ ಪಡಿತರರಿಗೆ ಆಹಾರ ಪಾದಾರ್ಥಗಳ ಕೊರತೆ ಉಂಟಾಗದಂತೆ ಹಾಗೂ ಆಹಾರ ಪದಾರ್ಥಗಳಿಗಾಗಿ ಹೊರಗೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಗೊತ್ತಾ?
ರಾಜ್ಯದ್ಯಂತ ಲಾಕ್ ಡೌನ್ ಘೋಷಣೆ ಹಿನ್ನಲೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಮನೆಬಾಗಿಲಿಗೆ ಪಡಿತರ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ. ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲು ಕೆಲವು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಯಾವುದೇ ವಲಯಗಳಲ್ಲಿ ವಾಸ ಮಾಡುವ ಜನತೆ, ತಮ್ಮ ವ್ಯಾಪ್ತಿಯ ವಲಯಗಳಲ್ಲೇ ಪಡೆಯಬೇಕು. ಬೇರೆಡೆ ತೆರಳಬಾರದು. ಯಾವುದೇ ಕಾರಣಕ್ಕೆ ವಾಹನಗಳು ಅನಗತ್ಯವಾಗಿ ಹೊರಗೆ ಬರಬಾರದು. ಪಾಸ್ ಇಲ್ಲದವರು ಬೇರೆಡೆ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಇನ್ನು ಹಲವೆಡೆ ಖಾಸಗಿ ಕ್ಲಿನಿಕ್ ಗಳನ್ನು ಬಂದ್ ಮಾಡಿರುವ ಬಗ್ಗೆ ವರದಿಗಳು ಬಂದಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಿತ್ಯ ಜೀವನದಲ್ಲಿ ಹಲವು ವಿಪರ್ಯಾಸ ಎದುರಾಗುತ್ತವೆ. ನಮ್ಮ ಜೀವನ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮನ್ನು ನಾವು, ಮನೆಯಲ್ಲಿರುವ ಸದಸ್ಯರ ರಕ್ಷಣೆ ಎಲ್ಲರದ್ದಾಗಿದೆ. ಈ ೨೧ ದಿನಗಳ ಕಾಲವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಲಾಕ್ ಡೌನ್ ಪಾಲಿಸಬೇಕು. ರಾಜ್ಯದಲ್ಲಿ ೫೫ ಮಂದಿಗೆ ಮಾರಕ ಸೋಂಕು ದೃಢಪಟ್ಟಿದೆ. ಇಬ್ಬರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆಂದು ಹೇಳಿದರು.
ಇನ್ನು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೂಲಿ ಕಾರ್ಮಿಕರಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಮಹಿಳೆಯರಿಗೆ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೇಂದ್ರ ಸರ್ಕಾರ ೫೦ ಲಕ್ಷ ವಿಮೆ ಘೋಷಿಸಿದೆ. ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲರ ಒಳಿತಿಗೆ ಕೆಲಸ ಮಾಡುತ್ತಿವೆ. ಸರ್ಕಾರಗಳು ಸೂಚಿಸುವ ಮಾರ್ಗೋಪಾಯಗಳನ್ನು ಎಲ್ಲರೂ ಯಥಾವತ್ತಾಗಿ ಪಾಲಿಸಬೇಕು. ೧೦೪ ಸಹಾಯವಾಣಿ ಕೋವಿಡ್-೧೯ ಗೆ ಅನುಕೂಲವಾಗಿದೆ. ಇನ್ನು ಕೋವಿಡ್ ಹೊರತಾಗಿ ಬೇರೆ ಸಹಾಯವಾಣಿಯನ್ನು ೧೫೫೨೧೪ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಯಾವುದೇ ಮಾಹಿತಿಯನ್ನು ಪಡೆಯಬಹುದು ಎಂದರು.