ವಿಶ್ವದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ವೈರಸ್ ಅನ್ನು ತಡೆಯುವ ಉದ್ದೇಶದಿಂದ ಸಾಕಷ್ಟು ರೀತಿಯಾದ ಕ್ರಮಗಳನ್ನು ಆಯಾ ರಾಷ್ಟ್ರಗಳು ಕೈಗೊಳ್ಳಲಾಗಿದೆ ಈ ಕುರಿತು 20 ದೇಶಗಳ ನಾಯಕರು ತುರ್ತಾಗಿ ಸಭೆಯನ್ನು ಕರೆಯಲಾಗಿತ್ತು ಈ ಒಂದು ಸಭೆಯಲ್ಲಿ ಯಾವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಗೊತ್ತಾ?
ಮಾ.37-ಕಿಲ್ಲರ್ ಕೊರೊನಾ (ಕೋವಿಡ್-19) ವಿರುದ್ಧ ಹೋರಾಟದಲ್ಲಿ ಸಂಯುಕ್ತ ರಂಗವಾಗಿ ಮುಂಚೂಣಿಯಲ್ಲಿರಲು ಪಣ ತೊಟ್ಟಿರುವ ಜಿ-20 ರಾಷ್ಟ್ರಗಳು, ಈ ಪಿಡುಗಿನಿಂದಾಗಿ ತೀವ್ರವಾಗಿ ಕುಸಿದಿರುವ ಜಾಗತಿಕ ಪುನ:ಶ್ಚೇತನಕ್ಕೆ ೫ ಲಕ್ಷ ಕೋಟಿ ಡಾಲರ್ ನೆರವಿಗೆ ಮನವಿ ಮಾಡಿದೆ.
ಮಾರಕ ಕೊರೊನಾ ವೈರಸ್ ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಈ ಪಿಡುಗಿನ ವಿರುದ್ಧ ಪರಸ್ಪರ ಸಹಕಾರದೊಂದಿಗೆ ಸಂಘಟಿತ ಹೋರಾಟ ನಡೆಸಲು ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ ನಡೆಯಿತು. ಈ ತುರ್ತು ಸಭೆಯಲ್ಲಿ ೨೦ ದೇಶಗಳ ಅಗ್ರ ನಾಯಕರು ಕೋವಿಡ್-19 ವಿಷಯವಾಗಿ ಸಮಾಲೋಚಿಸಿದರು.
ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಜಿ-20 ರಾಷ್ಟ್ರಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಪಿಡುಗಿನಿಂದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ ಎಂದು ಕಳವಳ ವ್ಯಕ್ತಪಡಿಸಿದರು.ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಸುಧಾರಣೆ ಸೇರಿದಂತೆ ಸದೃಢ ಕ್ರಿಯಾ ಯೋಜನೆ ರೂಪಿಸುವಂತೆಯೂ ಮೋದಿ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಇಡೀ ವಿಶ್ವವೇ ಮಾರಕ ವೈರಸ್ನಿಂದ ತತ್ತರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಮೊದಲು ಮಾನವೀಯತೆ ಕುರಿತು ನಾವೆಲ್ಲರೂ ಚರ್ಚಿಸೋಣ.ಆ ನಂತರ ಆರ್ಥಿಕತೆ ಬಗ್ಗೆ ಸಮಾಲೋಚಿಸೋಣ ಎಂದು ಮೋದಿ ಜಿ-೨೦ ರಾಷ್ಟ್ರಗಳ ಅಗ್ರನಾಯಕರಲ್ಲಿ ಮನವಿ ಮಾಡಿದರು. ಪ್ರಧಾನಿ ಅವರ ಈ ಸಲಹೆಗೆ ಜಿ-20 ದೇಶಗಳ ಎಲ್ಲ ಧುರೀಣರು ಮೆಚ್ಚುಗೆ ಸೂಚಿಸಿದರು.
ಈ ಪಿಡುಗು ಈಗಾಗಲೇ ಸಹಸ್ರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದರಿಂದ ತಲೆದೋರಿರುವ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳು ಕೂಡ ಆಘಾತಕಾರಿಯಾಗಿದೆ. ನಾವು ನಮ್ಮ ತಕ್ಷಣದ ಅಗತ್ಯವನ್ನು ಮೀಗಿ ಈ ಸೋಂಕು ವ್ಯಾಪಿಸದಂತೆ ತಡೆಗಟ್ಟಬೇಕಿದೆ ಎಂದು ಮೋದಿ ಸಲಹೆ ಮಾಡಿದರು.